Significance of Aati Amavasya: ಆಟಿ ಅಮಾವಾಸ್ಯೆ ಕರಾವಳಿ ಎಂಬುವುದು ತುಳುನಾಡು ಕರಾವಳಿ, ಮಲೆನಾಡು ಭಾಗಗಳಲ್ಲಿ ಆಚರಿಸುವ ಹಬ್ಬವಾಗಿದೆ. ಆಟಿ ಅಮಾವಾಸ್ಯೆ ವಿಶೇಷತೆ ನೋಡೊದಾದರೇ..
Lifestyle: ಆಟಿ ಅಮಾವಾಸ್ಯೆ ಎಂಬುವುದು ತುಳುನಾಡು ಕರಾವಳಿ, ಮಲೆನಾಡು ಭಾಗಗಳಲ್ಲಿ ಆಚರಿಸುವ ಹಬ್ಬವಾಗಿದೆ. ಈ ದಿನದಂದು ಬೆಳ್ಳಗಿನ ಸಮಯದಲ್ಲಿ ಹಾಲೆ ಮರದ ತೊಗಟೆ ಕಷಾಯ ಕುಡಿಯುವುದು ಸಂಪ್ರಾದಾಯ. ಈ ಹಬ್ಬವನ್ನು ಹೆಚ್ಚಾಗಿ ಕರಾವಳಿಯಲ್ಲಿ ಎಲ್ಲರೂ ಆಚರಿಸುತ್ತಾರೆ. ಆಟಿ ಅಮಾವಾಸ್ಯೆ ವಿಶೇಷತೆ ನೋಡೊದಾದರೇ..
ಚಿಕ್ಕಮಗಳೂರು ಉಡುಪಿ ,ದಕ್ಷಿಣ ಕನ್ನಡದಲ್ಲಿ ʼಆಟಿ ಅಮಾವಾಸ್ಯೆʼ ಗೆ ವಿಶೇಷ ಸ್ಥಾನ
ಆಟಿ ಅಮವಾಸ್ಯೆಯಂದು ಹಾಲೆ (ಪಾಲೆ) ಕಷಾಯ ಕುಡಿಯುವ ಪದ್ದತಿ
ಮಲೆನಾಡು ಹಾಗೂ ಕರಾವಳಿ ಹೊಂದಿಕೊಂಡಿರುವ ಜಿಲ್ಲೆಯಾದ್ದರಿಂದ ಈ ಹಬ್ಬವನ್ನು ಎರಡು ಜಿಲ್ಲೆಗಳಲ್ಲಿ ಆಚರಣೆ ಮಾಡಲಾಗುತ್ತದೆ
ಹಲವು ರೋಗಗಳಿಗೆ ಮದ್ದಾಗಿರುವ ಹಾಲೆ ಮರದ “ಕೆತ್ತೆ ಕಷಾಯ” ಮದ್ದನ್ನು ಪ್ರತೀ ಮನೆಯಲ್ಲಿಯೂ ಸೇವಿಸುವುದು.
ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ
ಹಿಂದಿನ ಕಾಲದಲ್ಲಿವಿಪರೀತ ಮಳೆಯಿಂದ ಹೆಚ್ಚು ರೋಗ ರುಜಿನಗಳು ಬರುತ್ತಿದ್ದವು. ಇವುಗಳಿಂದ ಪಾರಾಗಲು ಇದರ ಈ ದಿನ ಕಷಾಯ ಕುಡಿಯುವುದು ವಾಡಿಕೆ. ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಇದೆ.