ವಾಸ್ತು ಪ್ರಕಾರ, ಮನೆಯಲ್ಲಿರುವ ಕೆಲವು ವಸ್ತುಗಳು ಮನೆಯಲ್ಲಿ ವಾಸ್ತುದೋಷವನ್ನು ಉಂಟು ಮಾಡುವುದರ ಜೊತೆಗೆ ವ್ಯಕ್ತಿಯನ್ನು ಆರ್ಥಿಕ ಸಂಕಷ್ಟದಲ್ಲಿ ಉಳಿಯುವಂತೆ ಮಾಡುತ್ತದೆ. ಮಾತ್ರವಲ್ಲ, ಅಶುಭ ಎಂದು ಪರಿಗಣಿಸಲಾದ ವಸ್ತುಗಳು ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ತಿಳಿಯೋಣ...
ವಾಸ್ತು ಶಾಸ್ತ್ರದಲ್ಲಿ, ಮನೆ ಯಾವ ದಿಕ್ಕಿನಲ್ಲಿರಬೇಕು. ಮನೆಯಲ್ಲಿ ಯಾವ ದಿಕ್ಕಿನಲ್ಲಿ ಯಾವ ಕೋಣೆ ಇರಬೇಕು, ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ ಎಂಬಿತ್ಯಾದಿ ಮಾಹಿತಿಗಳ ಬಗ್ಗೆ ಉಲ್ಲೇಖವಿದೆ. ಅಂತೆಯೇ ಕೆಲವು ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿರುವ ಕೆಲವು ವಸ್ತುಗಳು ಮನೆಯಲ್ಲಿ ವಾಸ್ತುದೋಷವನ್ನು ಉಂಟು ಮಾಡುವುದರ ಜೊತೆಗೆ ವ್ಯಕ್ತಿಯನ್ನು ಆರ್ಥಿಕ ಸಂಕಷ್ಟದಲ್ಲಿ ಉಳಿಯುವಂತೆ ಮಾಡುತ್ತದೆ. ಮಾತ್ರವಲ್ಲ, ಅಶುಭ ಎಂದು ಪರಿಗಣಿಸಲಾದ ವಸ್ತುಗಳು ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವಾಸ್ತು ಪ್ರಕಾರ, ಒಡೆದ ಗಾಜಿನ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಸಂಗ್ರಹಿಸಬಾರದು. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮಾತ್ರವಲ್ಲ, ಇದು ತಾಯಿ ಲಕ್ಷ್ಮಿಯ ಕೋಪಕ್ಕೂ ಕಾರಣವಾಗಬಹುದು.
ಕೆಲವರು ಮುಂದೆ ಯಾವತ್ತಾದರೂ ಕೆಲಸಕ್ಕೆ ಬರುತ್ತದೆ ಎಂದು ತುಂಡಾದ ತಂತಿಗಳನ್ನು ಸಹ ಎಸೆಯದೆ ಹಾಗೆಯೇ ಇಟ್ಟಿರುತ್ತಾರೆ. ಆದರೆ, ವಾಸ್ತುವಿನಲ್ಲಿ ಇಂತಹ ಹಳೆಯ ತಂತಿಗಳು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಸಂಕೀರ್ಣಗೊಳಿಸುತ್ತವೆ ಎಂದು ಹೇಳಲಾಗುತ್ತದೆ.
ಕೆಲವರು ಮನೆಯಲ್ಲಿ ಜೇನುಗೂಡು ಇದ್ದರೆ ಅದು ಲಕ್ಷ್ಮಿಯ ಸ್ವರೂಪ ಎಂದು ನಂಬುತ್ತಾರೆ. ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿರುವ ಜೇನುಗೂಡು ಕೂಡ ಅಶುಭ ಸಂಕೇತ ಎಂದು ಹೇಳಲಾಗುತ್ತದೆ. ಇದು ಮನೆಯಲ್ಲಿ ಬಡತನವನ್ನು ಆಹ್ವಾನಿಸುತ್ತದೆ ಎಂಬ ನಂಬಿಕೆಯೂ ಇದೆ.
ಜೇಡರ ಬಲೆ ಮನೆಯಲ್ಲಿದ್ದರೆ ಅದು ಕೂಡ ಅಶುಭ ಮತ್ತು ಅಮಂಗಳಕರ ಎಂದು ಹೇಳಲಾಗುತ್ತದೆ. ಮನೆಯಲ್ಲಿರುವ ಜೇಡರ ಬಲೆಯು ಜೀವನದಲ್ಲಿ ನಾನಾ ರೀತಿಯ ಸಂಕಷ್ಟವನ್ನು ಆಹ್ವಾನಿಸಬಹುದು ಎನ್ನಲಾಗುತ್ತದೆ.
ಮನೆಯಲ್ಲಿ ಪಕ್ಷಿಗಳು ಬರುವುದು ಮಂಗಳಕರ. ಆದರೆ, ಪಕ್ಷಿಗಳ ಗೂಡನ್ನು ಮನೆಯಲ್ಲಿಡುವುದು ಅಮಂಗಳಕರ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಕೆಲವು ಅಲಂಕಾರಕ್ಕಾಗಿ ಹಕ್ಕಿ ಗೂಡನ್ನು ತಂದಿರುತ್ತಾರೆ. ಆದರೆ, ಇದರಲ್ಲಿ ಪಾರಿವಾಳ ಮೊಟ್ಟೆ ಇಡುವುದು ತುಂಬಾ ಅಮಂಗಳಕರ ಎಂಬುದನ್ನು ನೆನಪಿನಲ್ಲಿಡಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.