Radix number 8 Yearly Horoscope : 2024 ವರ್ಷವು ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮುಂಬರುವ ವರ್ಷವು ಹೇಗಿರಲಿದೆ ಎನ್ನುವ ತವಕ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. 2024 ರಲ್ಲಿ ಆರ್ಥಿಕ ಸ್ಥಿತಿ, ವೃತ್ತಿ, ಆರೋಗ್ಯ, ಸಂಬಂಧಗಳ ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಎಲ್ಲರೂ ಬಯಸುತ್ತಾರೆ. ಸಂಖ್ಯಾ ಶಾಸ್ತ್ರದ ಪ್ರಕಾರ ಭವಿಷ್ಯದ ಫಲಿತಾಂಶವನ್ನು ಸಂಖ್ಯೆಗಳ ಲೆಕ್ಕಾಚಾರಗಳ ಆಧಾರದ ಮೇಲೆ ನೀಡಲಾಗುತ್ತದೆ. ನಾವು 2024ರ ಫಲಗಳ ಬಗ್ಗೆ ಹೇಳುವುದಾದರೆ ಅಂಕೆಗಳ ಮೊತ್ತವು 8 ಕ್ಕೆ ಬರುತ್ತದೆ. ಅಂದರೆ 2+0+2_4 ಅನ್ನು ಲೆಕ್ಕ ಹಾಕಿದರೆ 8 ಆಗುತ್ತದೆ. ಇದು ಶನಿ ಗ್ರಹದ ಸಂಖ್ಯೆಯಾಗಿದೆ. ಈ ರೀತಿಯಾಗಿ, ಶನಿಯು ಮುಂಬರುವ ವರ್ಷ 2024 ರ ಮೇಲೆ ಪ್ರಭಾವ ಬೀರುತ್ತಾನೆ. 2024 ರ ಸಂಖ್ಯೆ 8 ರ ಪರಿಣಾಮವು ಪ್ರತಿಯೊಬ್ಬರ ಮೇಲೆ ಹೇಗೆ ಇರುತ್ತದೆ ನೋಡೋಣ.
8 ನೇ ಸಂಖ್ಯೆ ಹೊಂದಿರುವ ಜನರು ಪ್ರಯೋಜನ ಪಡೆಯುತ್ತಾರೆ :
2024 ರ ಸಂಖ್ಯೆ 8 ಆಗಿರುವುದರಿಂದ, ಮೂಲ ಸಂಖ್ಯೆ 8 ಆಗಿರುವ ಎಲ್ಲರಿಗೂ ಈ ವರ್ಷ ವಿಶೇಷವಾಗಿರುತ್ತದೆ. ಯಾವುದೇ ತಿಂಗಳ 8, 17 ಅಥವಾ 26 ರಂದು ಜನಿಸಿದವರ ಮೂಲ ಸಂಖ್ಯೆ 8 ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಮೂಲ ಸಂಖ್ಯೆ 8ರ ಜನರಿಗೆ ಮುಂಬರುವ ವರ್ಷವು ಮಂಗಳಕರವಾಗಿರುತ್ತದೆ. ಇವರ ಜೀವನದಲ್ಲಿ 2024ನೇ ವರ್ಷ ಅದೃಷ್ಟ ತುಂಬಲಿದೆ ಎನ್ನಬಹುದು. ಈ ಜನರು ಇದ್ದಕ್ಕಿದ್ದಂತೆ ಬಹಳಷ್ಟು ಹಣ ಪಡೆಯುತ್ತಾರೆ. ಉನ್ನತ ಸ್ಥಾನಕ್ಕೆ ಏರುತ್ತಾರೆ.
ಇದನ್ನೂ ಓದಿ : ಧನುರ್ಮಾಸ 2023: ಈ ಮೂರು ರಾಶಿಯವರ ಜೀವನದಲ್ಲಿ ಬಂಪರ್ ಧನಲಾಭ
ಪ್ರತಿ ಹಂತದಲ್ಲೂ ಅದೃಷ್ಟ ಬೆಂಬಲಿಸುತ್ತದೆ :
ರಾಡಿಕ್ಸ್ ಸಂಖ್ಯೆ 8 ಹೊಂದಿರುವ ಜನರು 2024 ರಲ್ಲಿ ಪ್ರತಿ ಹಂತದಲ್ಲೂ ಅದೃಷ್ಟವನ್ನು ಪಡೆಯುತ್ತಾರೆ. ಒಳ್ಳೆಯ ಕೆಲಸ ಸಿಗಬಹುದು. ವ್ಯವಹಾರದಲ್ಲಿ ದೊಡ್ಡ ಪ್ರಗತಿಯನ್ನು ಕಾಣಬಹುದು. ನಿರುದ್ಯೋಗಿಗಳು ಉದ್ಯೋಗ ಪಡೆಯಬಹುದು. ಯಾವುದೇ ಕ್ಷೇತ್ರಕ್ಕೆ ಹೋದರೂ ಪ್ರಗತಿ ಸಾಧಿಸಬಹುದು. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.
ಮನದ ಆಸೆ ಈಡೇರುತ್ತದೆ :
2024 ರಲ್ಲಿ, 8 ನೇ ಸಂಖ್ಯೆಯ ಜನರ ದೊಡ್ಡ ಆಸೆ ಈಡೇರಬಹುದು. ವಾಹನಗಳು ಮತ್ತು ಆಸ್ತಿಯನ್ನು ಖರೀದಿಸಬಹುದು. ಸರ್ಕಾರಿ ನೌಕರಿ ಪಡೆಯುವಲ್ಲಿ ಯಶಸ್ಸು ಕಾಣುವಿರಿ. ಹೂಡಿಕೆಯಿಂದ ಲಾಭವಾಗಲಿದೆ. 8 ಮೂಲ ಸಂಖ್ಯೆ ಹೊಂದಿರುವವರು ಪ್ರತಿ ಶನಿವಾರ ಶನಿದೇವರ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿದರೆ ಹೆಚ್ಚಿನ ಲಾಭವಾಗುತ್ತದೆ.
ಇದನ್ನೂ ಓದಿ : ದುಡ್ಡಿನ ವಿಷಯದಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ, ಇಲ್ದಿದ್ರೆ ತಿಜೋರಿ ಖಾಲಿಯಾಗುವುದು ಪಕ್ಕಾ!
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.