ಎಂಟು ದಿನಗಳ ಬಳಿಕ ಈ ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ಬುಧ

Bhudha Gochara Effect : ಬುಧಗ್ರಹದ ಈ ರಾಶಿ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಕಂಡುಬರಲಿದೆ. ಆದರೆ ಮೂರು  ರಾಶಿಯವರು ಈ ಅವಧಿಯಲ್ಲಿ ವಿಶೇಷ ಲಾಭವನ್ನು ಪಡೆಯಲಿದ್ದಾರೆ. 

Written by - Ranjitha R K | Last Updated : Mar 22, 2023, 02:40 PM IST
  • ಮಾರ್ಚ್ 31, 2023 ರಂದು, ಗ್ರಹಗಳ ರಾಜಕುಮಾರ ಬುಧ ರಾಶಿ ಬದಲಾಯಿಸಲಿದ್ದಾನೆ
  • ಮೀನ ರಾಶಿಯಿಂದ ಮಂಗಳನ ರಾಶಿಯಾದ ಮೇಷ ರಾಶಿ ಪ್ರವೇಶಿಸಲಿರುವ ಬುಧ
  • ಈ ಅವಧಿಯಲ್ಲಿ ವಿಶೇಷ ಲಾಭ ಪಡೆಯಲಿದ್ದಾರೆ ಮೂರು ರಾಶಿಯವರು
ಎಂಟು ದಿನಗಳ ಬಳಿಕ ಈ ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ಬುಧ title=

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಮಾರ್ಚ್ 31, 2023 ರಂದು, ಗ್ರಹಗಳ ರಾಜಕುಮಾರ ಬುಧ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮೀನ ರಾಶಿಯಿಂದ ಹೊರಬಂದು  ಮಂಗಳನ ರಾಶಿಯಾದ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.  ಬುಧಗ್ರಹದ ಈ ರಾಶಿ ಬದಲಾವಣೆಯ ಪರಿಣಾಮವು, ಎಲ್ಲಾ ರಾಶಿಯವರ ಜೀವನದ ಮೇಲೆ ಕಂಡುಬರಲಿದೆ. ಆದರೆ, ಮೂರು  ರಾಶಿಯವರು ಈ ಅವಧಿಯಲ್ಲಿ ವಿಶೇಷ ಲಾಭವನ್ನು ಪಡೆಯಲಿದ್ದಾರೆ. 

ಮೇಷ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯವರ ಲಘ್ನದ  ಮನೆಯಲ್ಲಿ ಬುಧ ಸಂಕ್ರಮಣ ನಡೆಯಲಿದೆ. ಈ ಸಂಚಾರದಿಂದ ಮೇಷ ರಾಶಿಯವರ ಧೈರ್ಯ ಹೆಚ್ಚಾಗುತ್ತದೆ. ಬ್ಯಾಂಕಿಂಗ್ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ, ಅವರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಉದ್ಯೋಗಗಳನ್ನು ಬದಲಾಯಿಸಲು ಈ ಸಮಯವು ತುಂಬಾ ವಿಶೇಷವಾಗಿದೆ. 

ಇದನ್ನೂ ಓದಿ : "ವರುಷಕೊಂದು ಹೊಸತು ಜನ್ಮ, ವರುಷಕೊಂದು ಹೊಸತು ನೆಲೆಯು, ಅಖಿಲ ಜೀವಜಾತಕೆ"

ಕಟಕ ರಾಶಿ :
ಈ ರಾಶಿಚಕ್ರದ ಹತ್ತನೇ ಮನೆಯಲ್ಲಿ ಬುಧ ಸಂಕ್ರಮಿಸಲಿದ್ದಾನೆ. ಇದನ್ನು ಕರ್ಮದ ಮನೆ ಎಂದು ಕರೆಯಲಾಗುತ್ತದೆ. ಬುಧಗ್ರಹದ ಪ್ರಭಾವದಿಂದಾಗಿ ಈ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ನೀವು ಮಾಡುವ ಕೆಲಸ ಮೆಚ್ಚುಗೆ ಪಡೆಯಲಿದೆ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ದೊರೆಯಲಿದೆ. 

ಕುಂಭ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನು ಈ ರಾಶಿಚಕ್ರದ ಮೂರನೇ ಮನೆಯಲ್ಲಿ ಸಂಚರಿಸಲಿದ್ದಾನೆ. ನಿಮ್ಮ ಅದೃಷ್ಟದ ಮನೆಯ ಮೇಲೆ ಬುಧನ ಅಂಶದಿಂದಾಗಿ, ನೀವು ಮಾಡುವ ಕೆಲಸಗಳಲ್ಲಿ ಅದೃಷ್ಟ ಕೈ ಹಿಡಿಯುತ್ತದೆ. ವ್ಯಾಪಾರ ವರ್ಗದವರಿಗೂ ಈ ಸಮಯ ಮಂಗಳಕರವಾಗಿರುತ್ತದೆ. ಮತ್ತೊಂದೆಡೆ, ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರವಾಗಿರಲಿದೆ.

ಇದನ್ನೂ ಓದಿ :  Happy Ugadi 2023 : ನಿಮ್ಮ ಪ್ರೀತಿ ಪಾತ್ರರಿಗೆ ನೀವೂ ಕಳುಹಿಸಿ ಯುಗಾದಿ ಶುಭಾಶಯ

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News