Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿಯ ಈ ದಿನ ಮಂಗಳವಾರ ಅನುರಾಧಾ ನಕ್ಷತ್ರ, ವಿಷ್ಕಂಭ ಯೋಗದ ಪ್ರಭಾವ ಯಾವ ರಾಶಿಯವರ ಮೇಲೆ ಹೇಗಿರಲಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಈ ರಾಶಿಯವರ ಬದುಕಿನಲ್ಲಿ ಇಂದು ಹೊಸ ವ್ಯಕ್ತಿಯ ಆಗಮನವಾಗಬಹುದು. ಉದ್ಯೋಗ ಸ್ಥಳದಲ್ಲಿ ನಿಮ್ಮ ಎದುರಾಳಿಗಳ ಪಿತೂರಿಯಿಂದ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಏನೇ ಆದರೂ, ನಕಾರಾತ್ಮಕ ಆಲೋಚನೆಗಳನ್ನು ನಿಮ್ಮ ಮನಸ್ಸಿನಿಂದ ದೂರವಿಡುವುದು ಉತ್ತಮ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಈ ರಾಶಿಯವರು ದುಃಖವೇ ಇರಲಿ, ಸುಖವೇ ಬರಲಿ ಇಂದು ತಮ್ಮ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಅತಿಯಾದ ಖರ್ಚುಗಳಿಗೆ ಕಡಿವಾಣ ಹಾಕದಿದ್ದರೆ ಆರ್ಥಿಕ ಮುಗ್ಗಟ್ಟು ಹೆಚ್ಚಾಗಬಹುದು. ಪ್ರೀತಿಯಲ್ಲಿರುವವರು ಮದುವೆ ವಿಷಯದಲ್ಲಿ ಮಾತುಕತೆ ನಡೆಸಲು ಶುಭದಿನ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಮಿಥುನ ರಾಶಿಯವರಿಗೆ ಇಂದು ಅದೃಷ್ಟದ ದಿನವಾಗಿರುತ್ತದೆ. ಇಂದು ನೀವು ಹೊಸ ಉದ್ಯೋಗವನ್ನು ಹುಡುಕಲು ಪ್ರಾರಂಭಿಸಬಹುದು. ಯಾವುದೇ ಕೆಲಸದಲ್ಲಿ ಹೆಚ್ಚಿನ ಶ್ರಮಕ್ಕಿಂತ ಬುದ್ದಿವಂತಿಕೆಯಿಂದ ಕೆಲಸ ಮಾಡುವ ಸ್ಮಾರ್ಟ್ ಉಪಾಯಗಳನ್ನು ಅಳವಡಿಸಿಕೊಳ್ಳುವುದು ಪ್ರಯೋಜನಕಾರಿ ಆಗಿದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ನಿಮ್ಮ ಜನಪ್ರಿಯತೆ ಹೆಚ್ಚಳವು ನಿಮ್ಮ ಸುತ್ತಲಿನವರ ಕಣ್ಣು ಕುಕ್ಕಬಹುದು. ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಲೆಲ್ಯದು. ಯೋಜಿತ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬಹುದು. ಇದರಿಂದ ಲಾಭವೂ ಹೆಚ್ಚಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು.
ಇದನ್ನೂ ಓದಿ- 12ವರ್ಷಗಳ ಬಳಿಕ ಮಿಥುನ ರಾಶಿಗೆ ಗುರು ಪ್ರವೇಶ, 2025ರಲ್ಲಿ ಈ 3 ರಾಶಿಯವರಿಗೆ ಗುರು ದೆಸೆ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಈ ರಾಶಿಯ ಜನರು ಇಂದು ಪ್ರಮುಖ ವಿಚಾರಗಳಲ್ಲಿ ತಮ್ಮ ನಿರ್ಧಾರಗಳಿಗೆ ಬದ್ಧರಾಗಿರಬೇಕು. ಬೇರೆಯವರ ಮಾತಿಗೆ ಮರುಳಾಗಿ ನಿಮ್ಮ ನಿರ್ಧಾರವನ್ನು ಬದಲಾಯಿಸುವ ತಪ್ಪನ್ನು ಮಾಡಬೇಡಿ. ಸಾಧ್ಯವಾದಷ್ಟು ನಕಾರಾತ್ಮಕ ವಿಷಯಗಳನ್ನು/ವ್ಯಕ್ತಿಗಳನ್ನು ನಿಮ್ಮಿಂದ ದೂರವಿಡಿ, ಶೀಘ್ರದಲ್ಲೇ ನಿಮ್ಮಲ್ಲಿ ಬದಲಾವಣೆಗಳನ್ನು ಅನುಭವಿಸುವಿರಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಈ ರಾಶಿಯ ಜನರಿಗೆ ಇಂದು ಕೌಟುಂಬಿಕ ಆಸ್ತಿ ವಿವಾದ ನ್ಯಾಯಾಲಯದ ಮೆಟ್ಟಿಲೇರಬಹುದು. ನಿಮ್ಮ ಮುಂದೆ ಕಾಣುವ ತಪ್ಪುಗಳ ವಿರುದ್ಧ ಧ್ವನಿ ಎತ್ತುವ ನಿಮ್ಮ ಅಭ್ಯಾಸದಿಂದ ಶುಭವಾಗಲಿದೆ. ನೀವು ದೀರ್ಘ ಸಮಯದಿಂದ ಕಾಯುತ್ತಿದ್ದ ಮನೆ ಖರೀದಿಸುವ ಕನಸು ಇಂದು ನನಸಾಗುವ ಸಾಧ್ಯತೆ ಇದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ತುಲಾ ರಾಶಿಯವರಿಗೆ ಇಂದು ಮಿಶ್ರ ಫಲಗಳಿಂದ ಕೂಡಿದ ದಿನವಾಗಿದೆ. ವ್ಯವಹಾರದಲ್ಲಿ ಸವಾಲುಗಳು ಹೆಚ್ಚಾಗುವುದರಿಂದ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ಆದಾಗ್ಯೂ, ಸಂಜೆ ವೇಳೆಗೆ ಎಲ್ಲವೂ ತಹಬದಿಗೆ ಬರಲಿದ್ದು, ಕುಟುಂಬದೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಈ ರಾಶಿಯ ಜನರು ಇಂದು ಕೆಲವು ಯೋಜನೆಗಳಲ್ಲಿ ವಿಫಲರಾಗಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಮರಳಿ ಯತ್ನವ ಮಾಡುವುದನ್ನು ಮರೆಯಬೇಡಿ. ವೃತ್ತಿ ಕ್ಷೇತ್ರದಲ್ಲಿ ಹಿತ ಶತ್ರುಗಳ ಬಾಧೆ ಸಾಧ್ಯತೆ ಇದೆ. ಯಾವುದಕ್ಕೂ ಎದೆಗುಂದದೆ ನಿಮ್ಮ ಕಾಯಕವನ್ನು ಮುಂದುವರೆಸುವುದರಿಂದ ತಡವಾಗಿಯಾದರೂ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ.
ಇದನ್ನೂ ಓದಿ- Weekly Horoscope: ಸೆಪ್ಟೆಂಬರ್ ಎರಡನೇ ವಾರ 12 ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ
ಧನು ರಾಶಿಯವರ ಭವಿಷ್ಯ (Sagittarius Horoscope):
ಧನು ರಾಶಿ ಜನರು ಇಂದು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಮಯ ತೆಗೆದುಕೊಳ್ಳಬಹುದು. ಉದ್ಯೋಗ ಕ್ಷೇತ್ರದಲ್ಲಿ ಶತ್ರುಗಳು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಎಲ್ಲವನ್ನೂ ದೇವರ ಮೇಲೆ ಹಾಕಿ ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ, ಎಲ್ಲವೂ ಒಳ್ಳೆಯದಾಗುತ್ತದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಈ ರಾಶಿಯವರಿಗೆ ಇಂದು ಹಳೆಯ ನೆನಪುಗಳು ಕಾಡಬಹುದು. ಇದರಿಂದಾಗಿ ಮನಸ್ಸಿನ ಭಾರ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ನೈಸರ್ಗಿಕ ವಾತಾವರಣದಲ್ಲಿ ವಾಕ್ ಮಾಡುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. ಇದರ ಹೊರತಾಗಿ, ವೃತ್ತಿ ಕ್ಷೇತ್ರದಲ್ಲೂ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಇಂದು ಸವಾಲಿನ ದಿನವಾಗಿರುತ್ತದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಈ ರಾಶಿಯ ಜನರಿಗೆ ಇಂದು ಪರಿಸ್ಥಿತಿ ನಿಮಗೆ ಅನುಕೂಲಕರವಾಗಿರುತ್ತದೆ. ಬಹಳ ದಿನಗಳ ನಿಮ್ಮ ಕನಸು ನನಸಾಗುವ ಸಮಯ. ಈ ರಾಶಿಯ ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ. ಭವಿಷ್ಯದ ದೃಷ್ಟಿಯಿಂದ ಹಣವನ್ನು ಕೂಡಿಡುತ್ತಿದ್ದರೆ ಈ ಬಗ್ಗೆ ಬೇರೆಯವರೊಂದಿಗೆ ಚರ್ಚಿಸದೆ ಇರುವುದು ಒಳ್ಳೆಯದು.
ಮೀನ ರಾಶಿಯವರ ಭವಿಷ್ಯ (Pisces Horoscope):
ಮೀನ ರಾಶಿಯ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವುದರಿಂದ ಶುಭ. ಪಾಲುದಾರಿಕೆ ವ್ಯಾಪಾರ ಮಾಡುವವರು ಪ್ರತಿಯೊಂದು ಲೆಕ್ಕಪತ್ರದ ಬಗ್ಗೆ ಜಾಗರೂಕರಾಗಿರಿ. ಮಕ್ಕಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Channel- bit.ly/46lENGm
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.