Astro Tips: ನಿಮ್ಮ ಈ ಕೆಟ್ಟ ಅಭ್ಯಾಸಗಳು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ..!

ಹಣದ ವಾಸ್ತು ಸಲಹೆಗಳು: ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಸುಲಭಗೊಳಿಸಲು ಅಳವಡಿಸಿಕೊಳ್ಳಬಹುದಾದ ಅನೇಕ ಪರಿಹಾರಗಳನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಕೆಟ್ಟ ಅಭ್ಯಾಸಗಳು ನಿಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇದರಿಂದ ನೀವು ತಾಯಿ ಲಕ್ಷ್ಮಿದೇವಿಯ ಅಸಮಾಧಾನವನ್ನು ಎದುರಿಸಬೇಕಾಗಬಹುದು. ಇದರಿಂದ ಯಾವುದೇ ವ್ಯಕ್ತಿಯು ನಿರಂತರವಾಗಿ ಹಣದ ಸಮಸ್ಯೆಗಳನ್ನು ಎದುರಿಸುತ್ತಾನೆ.

Written by - Puttaraj K Alur | Last Updated : Feb 4, 2024, 09:46 PM IST
  • ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಏಳುವ ವ್ಯಕ್ತಿಯು ದೇವ-ದೇವತೆಗಳ ಆಶೀರ್ವಾದ ಪಡೆಯುತ್ತಾನೆ
  • ಮನೆಯಲ್ಲಿ ಶುಚಿತ್ವದ ಬಗ್ಗೆ ಕಾಳಜಿ ವಹಿಸುವಹಿಸದವರ ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸುವುದಿಲ್ಲ
  • ರಾತ್ರಿ ಊಟದ ನಂತರ ಅಪ್ಪಿತಪ್ಪಿಯೂ ಅಡುಗೆ ಮನೆಯಲ್ಲಿ ಖಾಲಿ ಪಾತ್ರೆಗಳನ್ನು ಇಡಬಾರದು
Astro Tips: ನಿಮ್ಮ ಈ ಕೆಟ್ಟ ಅಭ್ಯಾಸಗಳು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ..! title=
ಹಣದ ವಾಸ್ತು ಸಲಹೆಗಳು

Astro tips for Money: ಕಷ್ಟಪಟ್ಟು ಕೆಲಸ ಮಾಡಿದರೂ ಕೆಲವರಿಗೆ ಹಣದ ಸಮಸ್ಯೆ ಸದಾ ಕಾಡುತ್ತದೆ. ಯಾವುದೇ ಒಬ್ಬ ವ್ಯಕ್ತಿಯು ಪದೇ ಪದೇ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದಕ್ಕೆ ಕಾರಣ ಕೆಟ್ಟ ಅಭ್ಯಾಸಗಳು. ಕೂಡಲೇ ಈ ಅಭ್ಯಾಸಗಳನ್ನು ಬದಲಾಯಿಸಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರೆ ಯಾವುದೇ ರೀತಿಯ ಹಣದ ಸಮಸ್ಯೆ ಉದ್ಭವಿಸುವುದಿಲ್ಲ. 

ಈ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ

ಬ್ರಾಹ್ಮಿ ಮುಹೂರ್ತ: ಹಿಂದೂ ಧರ್ಮದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಏಳುವ ಸಂಪ್ರದಾಯವಿದೆ. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಏಳುವ ವ್ಯಕ್ತಿಯು ದೇವ-ದೇವತೆಗಳ ಆಶೀರ್ವಾದವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಬೆಳಗ್ಗೆ ತಡವಾಗಿ ಎದ್ದರೆ, ಅದು ದುರದೃಷ್ಟಕ್ಕೆ ಕಾರಣವಾಗಬಹುದು. ವ್ಯಕ್ತಿಯ ಈ ಅಭ್ಯಾಸದಿಂದಾಗಿ ತಾಯಿ ಲಕ್ಷ್ಮಿದೇವಿಯು ಕೋಪಗೊಳ್ಳಬಹುದು. ಹೀಗಾಗಿ ನೀವು ಇಂದಿನಿಂದಲೇ ಈ ಕೆಟ್ಟ ಅಭ್ಯಾಸವನ್ನು ಬಿಡಬೇಕು.

ಇದನ್ನೂ ಓದಿ: Silver Anklets: ಚಿನ್ನದ ಕಾಲುಂಗುರಗಳನ್ನು ಏಕೆ ಧರಿಸಬಾರದು? ಇದರಿಂದಾಗುವ ನಷ್ಟಗಳೇನು ತಿಳಿಯಿರಿ

ಮನೆಯ ಶುಚಿತ್ವ: ಯಾರು ತಮ್ಮ ಮನೆಯಲ್ಲಿ ಶುಚಿತ್ವದ ಬಗ್ಗೆ ಕಾಳಜಿ ವಹಿಸುವುದಿಲ್ಲವೋ ಅಂತಹವರ ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸುವುದಿಲ್ಲ. ಏಕೆಂದರೆ ಶುಚಿತ್ವದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವ ಸ್ಥಳಗಳಲ್ಲಿ ಮಾತ್ರ ಸಂಪತ್ತಿನ ದೇವತೆಯಾದ ಲಕ್ಷ್ಮಿದೇವಿ ನೆಲೆಸುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಶುಚಿತ್ವಕ್ಕೆ ಮುಖ್ಯ ಗಮನ ನೀಡಬೇಕು.

ಅಡುಗೆ ಮನೆಯಲ್ಲಿ ಖಾಲಿ ಪಾತ್ರೆ: ರಾತ್ರಿ ಊಟದ ನಂತರ ಅಡುಗೆ ಮನೆಯಲ್ಲಿ ಖಾಲಿ ಪಾತ್ರೆಗಳನ್ನು ಇಡುವ ಅಭ್ಯಾಸ ಅನೇಕರಿಗೆ ಇದೆ. ಧಾರ್ಮಿಕ ದೃಷ್ಟಿಕೋನದಿಂದ ಈ ಅಭ್ಯಾಸ ಸರಿಯಲ್ಲ. ಹೀಗೆ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅಡುಗೆಮನೆಯಲ್ಲಿ ಅಪ್ಪಿತಪ್ಪಿಯೂ ಖಾಲಿ ಪಾತ್ರೆಗಳನ್ನು ಇಡಬಾರದು.

ಇದನ್ನೂ ಓದಿ: ಚಿನ್ನದ ಕಾಲುಂಗುರ ಮತ್ತು ಕಾಲ್ಗೆಜ್ಜೆಯನ್ನು ಏಕೆ ಧರಿಸಬಾರದು ಗೊತ್ತೆ..? ತಪ್ಪದೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News