ದಿನಭವಿಷ್ಯ 12-06-2024: ಇಂದು ಹರ್ಷನ ಯೋಗ, ಈ 2 ರಾಶಿಯವರು ಅತಿ ಉತ್ಸಾಹದಿಂದ ದೂರ ಉಳಿದರೆ ಒಳಿತು

Today Horoscope 12th June 2024: ಬುಧವಾರದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jun 12, 2024, 08:18 AM IST
  • ಕರ್ಕಾಟಕ ರಾಶಿಯವರೇ ಅನಗತ್ಯ ವಾದವನ್ನು ತಪ್ಪಿಸಿ, ತಾಳ್ಮೆಯಿಂದಿರಿ.
  • ತುಲಾ ರಾಶಿಯವರು ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ.
  • ಧನು ರಾಶಿಯವರಿಗೆ ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.
ದಿನಭವಿಷ್ಯ 12-06-2024:  ಇಂದು ಹರ್ಷನ ಯೋಗ, ಈ 2 ರಾಶಿಯವರು ಅತಿ ಉತ್ಸಾಹದಿಂದ ದೂರ ಉಳಿದರೆ ಒಳಿತು  title=

Budhvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಷಷ್ಟಿ ತಿಥಿಯ ಈ ದಿನ ಬುಧವಾರದಂದು ಮಾಘ ನಕ್ಷತ್ರ, ಹರ್ಷನ ಯೋಗ ಇರಲಿದ್ದು, ಇಂದಿನ ದಿನ ಭವಿಷ್ಯ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಮೇಷ ರಾಶಿಯವರೇ ಇಂದು ನೀವು ಸಕಾರಾತ್ಮಕ ಆಲೋಚನೆಗಳಿಂದ ಒಳ್ಳೆಯ ಫಲಗಳನ್ನು ಅನುಭವಿಸುವಿರಿ. ಕೆಲಸದಲ್ಲಿ ಸಂಪೂರ್ಣ ಗಮನ ಕೇಂದ್ರೀಕರಿಸುವುದರಿಂದ ನಿರೀಕ್ಷಿತ ಫಲ ದೊರೆಯಲಿದೆ. ಸ್ನೇಹಿತರ ಸಹಾಯದಿಂದ, ನೀವು ಹಣ ಸಂಪಾದಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು.

ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃಷಭ ರಾಶಿಯವರ ಮನಸ್ಸು ಸ್ವಲ್ಪ ಆತಂಕದಿಂದ ಕೂಡಿರಬಹುದು. ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಅಸಾಮಾಧಾನಗೊಳಿಸಬಹುದು. ಕೆಲವೊಮ್ಮೆ ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ದುಃಖಿತರನ್ನಾಗಿ ಮಾಡಬಹುದು. ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಮಿಥುನ ರಾಶಿಯವರು ಇಂದು ವಿನಾಕಾರಣ ಕೋಪಿಸಿಕೊಳ್ಳಬಹುದು. ಇದರಿಂದ ಮಾನಸಿಕ ನೆಮ್ಮದಿ ಹಾಳಾಗಬಹುದು. ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಆದಾಗ್ಯೂ, ಸ್ನೇಹಿತರ ಸಹಾಯದಿಂದ, ಹೆಚ್ಚಿನ ಆದಾಯವನ್ನು ಗಳಿಸುವ ನಿಮ್ಮ ಗುರಿ ಸಾಧಿಸಬಹುದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯವರೇ ಅನಗತ್ಯ ವಾದವನ್ನು ತಪ್ಪಿಸಿ, ತಾಳ್ಮೆಯಿಂದಿರಿ. ಕೆಲಸದ ಸ್ಥಳ ಬದಲಾವಣೆಯಿಂದ ಹೆಚ್ಚಿನ ಪರಿಶ್ರಮ ಬೇಕಾಗಬಹುದು. ಪ್ರೀತಿ ಪಾತ್ರರಿಂದ ಉಡುಗೊರೆಗಳನ್ನು ಸ್ವೀಕರಿಸುವ ಸಾಧ್ಯತೆ ಇದೆ. 

ಇದನ್ನೂ ಓದಿ- Shani Vakri 2024: ಈ ರಾಶಿಯವರಿಗೆ ವಿಶೇಷ ಆಶೀರ್ವಾದ ನೀಡಲಿದ್ದಾನೆ ಶನಿ ಮಹಾದೇವ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯವರಿಗೆ ಇಂದು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಕುಟುಂಬ ಸಮೇತರಾಗಿ ಧಾರ್ಮಿಕ ಕೆಲಸಗಳನ್ನು ಮಾಡಬಹುದು. ನಿಮ್ಮ ಸಂಗಾತಿಯ ಅನಾರೋಗ್ಯ ಸ್ವಲ್ಪ ಬೇಸರ ಉಂಟು ಮಾಡಬಹುದು. ನಿಮ್ಮ ಕೆಲಸಗಳಲ್ಲಿ ಸ್ನೇಹಿತರ ಬೆಂಬಲ ದೊರೆಯಲಿದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕನ್ಯಾ ರಾಶಿಯವರು ಇಂದು ಆತ್ಮವಿಶ್ವಾಸದಿಂದ ತುಂಬಿರುವಿರಿ. ಉದ್ಯೋಗ ರಂಗದಲ್ಲಿ ಅಧಿಕಾರಿಗಳ ಸಹಕಾರ ದೊರೆಯಲಿದ್ದು, ನಿಮ್ಮ ಮುಂದಿನ ಹಾದಿ ಸುಗಮವಾಗಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ದಿನ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ತುಲಾ ರಾಶಿಯವರೇ ನಿಮ್ಮ ಅತಿಯಾದ ಕೋಪವೇ ನಿಮಗೆ ಶತ್ರು. ಹಾಗಾಗಿ, ಕೋಪವನ್ನು ನಿಯಂತ್ರಿಸಿ. ವ್ಯಾಪಾರ ಬದಲಾವಣೆಗಾಗಿ ಪ್ರಯತ್ನಿಸುತ್ತಿದ್ದರೆ ಈ ಬಗ್ಗೆ ಸಂಪೂರ್ಣ ಮಾಹಿತಿಯಿಂದ ಮುಂದುವರೆಯುವುದು ಒಳ್ಳೆಯದು. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃಶ್ಚಿಕ ರಾಶಿಯವರಿಗೆ ಮಿತ್ರರ ನೆರವಿನಿಂದ ವ್ಯಾಪಾರ ಅವಕಾಶಗಳು ಲಭ್ಯವಾಗುವ ಸಾಧಯ್ತೆ ಇರಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ಒಡಹುಟ್ಟಿದವರಿಂದ ಬೆಂಬಲ ದೊರೆಯಲಿದೆ. ಆದಾಯ ಹೆಚ್ಚಾಗಲಿದೆ. ವೈವಾಹಿಕ ಸಂಬಂಧದಲ್ಲಿ ಮಧುರತೆ ಇರಲಿದೆ. 

ಇದನ್ನೂ ಓದಿ- 500 ವರ್ಷಗಳ ನಂತರ ರೂಪಗೊಂಡ ಪಂಚ ದಿವ್ಯ ರಾಜಯೋಗ: ಯಾವ ರಾಶಿಗಳಿಗೆ ಶುಭ & ಅಶುಭ?

ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯವರಿಗೆ ಇಂದು ಮನಸ್ಸು ಶಾಂತಿ ಮತ್ತು ಸಂತೃಪ್ತಿಯಿಂದ ಇರುತ್ತದೆ. ಕುಟುಂಬದಲ್ಲಿ ಸಾಮರಸ್ಯ ಇರುತ್ತದೆ. ಮನೆಗೆ ಅತಿಥಿಗಳ ಆಗಮನದಿಂದ ವೆಚ್ಚಗಳು ಹೆಚ್ಚಾಗಲಿವೆ. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯವರಿಗೆ  ಸಂಗೀತ ಅಥವಾ ಕಲೆಯ ಕಡೆಗೆ ಆಸಕ್ತಿ ಹೆಚ್ಚಾಗಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆತ್ಮವಿಶ್ವಾಸ ಕಡಿಮೆಯಾಗುವ ಸಾಧ್ಯತೆ ಇದೆ. ಸ್ನೇಹಿತರಿಂದ ಆರ್ಥಿಕ ಸಾಧ್ಯತೆ ಇದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯವರು ಇಂದು ಆತ್ಮವಿಶ್ವಾಸದಿಂದ ತುಂಬಿರುವಿರಿ. ನಿಮ್ಮ ಮನಸ್ಸು ಸಂತೋಷದಿಂದ ಕೂಡಿರಲಿದೆ. ಆದಾಗ್ಯೂ, ವ್ಯಾಪಾರದಲ್ಲಿ ಸವಾಲುಗಳು ಹೆಚ್ಚಾಗಬಹುದು. ಉದ್ಯೋಗ ರಂಗದಲ್ಲೂ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ದೂರ ಪ್ರಯಾಣ ಲಾಭದಾಯಕವಾಗಿರಲಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಮೀನ ರಾಶಿಯವರು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ದಾಂಪತ್ಯ ಜೀವನದಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ. ನೀವು ಹೊಸ ವ್ಯವಹಾರವನ್ನು ಆರಂಭಿಸಲು ಬಯಸಿದರೆ ನಿಮ್ಮ ತಾಯಿಯ ಸಂಪೂರ್ಣ ಬೆಂಬಲ ದೊರೆಯಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News