Bheemana Amavasya 2024: ಭೀಮನ ಅಮಾವಾಸ್ಯೆಯ ಶುಭ ಮುಹೂರ್ತ, ಪೂಜಾ ವಿಧಾನ, ಪತಿ ಪಾದಪೂಜೆಯ ಮಹತ್ವ ಇಲ್ಲಿದೆ ನೋಡಿ.!

Bheemana Amavasya Pooja vidhana: ಭೀಮನ ಅಮಾವಾಸ್ಯೆ 2024 ರ ಶುಭ ಮುಹೂರ್ತ ಯಾವುದು.? ಪೂಜೆ ವಿಧಿ ವಿಧಾನಗಳೇನು? ಈ ದಿನ ಪತಿಯನ್ನು ಪೂಜಿಸುವುದು ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ...

Written by - Chetana Devarmani | Last Updated : Aug 4, 2024, 08:27 AM IST
    • ಭೀಮನ ಅಮಾವಾಸ್ಯೆ 2024
    • ಭೀಮನ ಅಮಾವಾಸ್ಯೆ ಶುಭ ಮುಹೂರ್ತ ಯಾವುದು?
    • ಈ ದಿನ ಪತಿಯನ್ನು ಪೂಜಿಸುವುದು ಹೇಗೆ?
Bheemana Amavasya 2024: ಭೀಮನ ಅಮಾವಾಸ್ಯೆಯ ಶುಭ ಮುಹೂರ್ತ, ಪೂಜಾ ವಿಧಾನ, ಪತಿ ಪಾದಪೂಜೆಯ ಮಹತ್ವ ಇಲ್ಲಿದೆ ನೋಡಿ.! title=

How to celebrate Bheemana Amavasya: ಆಷಾಢ ಮಾಸದ ಕೊನೆಯ ದಿನವನ್ನು ಅಥವಾ ಆಷಾಢ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಜ್ಯೋತಿರ್ಭಿಮೇಶ್ವರ ಅಮಾವಾಸ್ಯೆ ಎಂದು ಸಹ ಕೆಲವೆಡೆ ಕರೆಯಲಾಗುತ್ತದೆ. 

ಜ್ಯೋತಿರ್ಭೀಮೇಶ್ವರ ವ್ರತ 

ಈ ದಿನ ಶ್ರೀರುದ್ರದೇವರನ್ನು ಜ್ಯೋತಿ ರೂಪದ ದೀಪದಲ್ಲಿ ಆವಾಹಿಸಿ ಪೂಜಿಸುವುದರಿಂದ ಜ್ಯೋತಿರ್ಭೀಮೇಶ್ವರ ವ್ರತ ಎಂದು ಕರೆಯಲಾಗುತ್ತದೆ. 2024ರಲ್ಲಿ ಭೀಮನ ಅಮಾವಾಸ್ಯೆ ವ್ರತವನ್ನು ಆಗಸ್ಟ್ 4 ರಂದು ಭಾನುವಾರ ಆಚರಿಸಲಾಗುತ್ತಿದೆ. 

​ಭೀಮನ ಅಮಾವಾಸ್ಯೆ ಶುಭ ಮುಹೂರ್ತ ​

ಅಮಾವಾಸ್ಯೆ ತಿಥಿ ಆಗಸ್ಟ್‌ 3 ರಂದು ಶನಿವಾರ, ಮಧ್ಯಾಹ್ನ 3:50 ರಿಂದ ಪ್ರಾರಂಭವಾಗಿದೆ. ಆಗಸ್ಟ್‌ 4 ರಂದು ಭಾನುವಾರ ಸಂಜೆ 4:42 ರವರೆಗೆ ಇರಲಿದೆ. ಪೂಜೆ ಶುಭ ಮುಹೂರ್ತ ಆಗಸ್ಟ್‌ 4 ರಂದು ಭಾನುವಾರ ಮುಂಜಾನೆ 6:15 ರಿಂದ ಮಧ್ಯಾಹ್ನ 12:42 ರವರೆಗೆ ಇದೆ. ಲಕ್ಷ್ಮಿ ಪೂಜೆಗೆ ಭಾನುವಾರ ಸಂಜೆ 7:00 ರಿಂದ ರಾತ್ರಿ 8:00 ರವರೆಗೆ ಶುಭ ಮುಹೂರ್ತವಿದೆ. 

ಇದನ್ನೂ ಓದಿ: ಶನಿ - ಶುಕ್ರನ ಅಪರೂಪದ ಯುತಿ... ಈ 4 ರಾಶಿಗಳ ಮನೆ ತುಂಬುವುದು ಕುಬೇರನ ಸಂಪತ್ತು, ಹಣದ ಹೊಳೆ, ಅದೃಷ್ಟವೆಲ್ಲ ನಿಮ್ಮದೇ!

ಭೀಮನ ಅಮಾವಾಸ್ಯೆ ಮಹತ್ವ

ಭೀಮನ ಅಮವಾಸ್ಯೆಯಂದು ಮಹಿಳೆಯರು ಪತಿ, ತಂದೆ, ಸಹೋದರರು ಮತ್ತು ಪುತ್ರರು ಸೇರಿದಂತೆ ತಮ್ಮ ಕುಟುಂಬದ ಪುರುಷರ ಏಳ್ಗೆಗಾಗಿ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. ವಿವಾಹಿತ ಮಹಿಳೆಯರು ಪತಿಯ ದೀರ್ಘಾಯುಷ್ಯಕ್ಕಾಗಿ ಮದುವೆಯ ನಂತರ ಕನಿಷ್ಠ 9 ವರ್ಷಗಳ ಕಾಲ ಈ ವ್ರತವನ್ನು ಆಚರಿಸುತ್ತಾರೆ.

ಶಿವ ಮತ್ತು ಪಾರ್ವತಿ ದೇವಿಯ ಪೂಜೆ

ಭೀಮನ ಅಮಾವಾಸ್ಯೆ ದಿನ ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವ ಸಂಪ್ರದಾಯವಿದೆ. ಭೀಮನ ಅಮಾವಾಸ್ಯೆಯಂದು ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುವ ಸಂಕೇತವಾಗಿದೆ. ಅವಿವಾಹಿತ ಮಹಿಳೆಯರು ಸೂಕ್ತವಾದ ಗಂಡ ಸಿಗಲೆಂದು ಈ ವ್ರತವನ್ನು ಆಚರಿಸುತ್ತಾರೆ. 

ಭೀಮನ ಅಮಾವಾಸ್ಯೆ ಪೂಜಾ ವಿಧಾನ

ಭೀಮನ ಅಮಾವಾಸ್ಯೆಯಂದು ಸರಳವಾದ ಉದ್ದವಾದ ಮಣ್ಣಿನ ದೀಪಗಳು ಶಿವ ಮತ್ತು ಪಾರ್ವತಿ ದೇವಿಯನ್ನು ಸಂಕೇತಿಸುತ್ತವೆ. ಮಹಿಳೆಯರು ಈ ದಿನ ಮುಂಜಾನೆ ಬೇಗ ಎದ್ದು ತಲೆ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸುತ್ತಾರೆ. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರ ಮೇಲೆ ಎರಡು ದೀಪಗಳನ್ನು ಹಚ್ಚಬೇಕು. ಈ ದೀಪಗಳಲ್ಲಿ ಶಿವ ಮತ್ತು ಪಾರ್ವತಿಯನ್ನು ಆವಾಹನೆ ಮಾಡಿ ಪೂಜಿಸಬೇಕು.

ಪೂಜೆಯ ನಂತರ ಕಟ್ಟಿಕೊಳ್ಳಲು ಬೇಕಾಗುವ ದಾರವನ್ನು ಮೊದಲೇ ಸಿದ್ಧಪಡಿಸಬೇಕು. ಒಂಭತ್ತು ಅಥವಾ ಹನ್ನೆರಡು ಎಳೆಯ ದಾರವನ್ನು ತೆಗೆದುಕೊಂಡು ಅದಕ್ಕೆ ಒಂಭತ್ತು ಗಂಟು ಹಾಕಿರಬೇಕು. ಪೂಜೆಯ ವೇಳೆ ಇದನ್ನು ದೇವರ ಸಮೀಪದಲ್ಲಿ ವೀಳ್ಯದೆಲೆಯಲ್ಲಿ ಇಡಬೇಕು. ಇದನ್ನು ಗೌರಿ ದಾರ ಎಂದು ಕರೆಯುತ್ತಾರೆ. 

ಇದನ್ನೂ ಓದಿ: ವೃಷಭದಲ್ಲಿ ಗುರು ವಕ್ರಿ: ಈ ರಾಶಿಯವರಿಗೆ ದುಡ್ಡೋ ದುಡ್ಡು, ಅದೃಷ್ಟದ ಬಾಗಿಲು ಓಪನ್.. ಮುಟ್ಟಿದ್ದೆಲ್ಲಾ ಚಿನ್ನಮಯ, ಕೂಡಿಬಂತು ಗುರುಬಲ!

ಆವಾಹನೆ ಮಾಡಿದ ಬಳಿಕ ಈ ದೀಪಗಳನ್ನು ಗಂಧ, ಪುಷ್ಪ, ಗರಿಕೆ, ಬಿಲ್ಪತ್ರಗಳನ್ನು ಅರ್ಪಿಸಿ, ಪೂಜಿಸಬೇಕು. ಈ ದಿನ ನೈವೇದ್ಯಕ್ಕೆ ಕರಿಗಡಬು ಹಾಗೂ ಪಾಯಸ ಸಮರ್ಪಿಸಬೇಕು. ನಂತರ ಆರತಿ ಮಾಡಿ, ದಾರವನ್ನು ಕೈಗೆ ಅಥವಾ ಕೊರಳಿಗೆ ಕಟ್ಟಿಕೊಳ್ಳಬೇಕು. 

​ಭೀಮನ ಅಮಾವಾಸ್ಯೆ ಪತಿ ಪೂಜೆ​

ಶಿವ ಮತ್ತು ಪಾರ್ವತಿ ದೇವಿಯ ಪೂಜೆಯ ನಂತರ ವಿವಾಹಿತ ಮಹಿಳೆಯರು ತಮ್ಮ ಪತಿಯ ಪಾದಪೂಜೆ ಮಾಡಬೇಕು. ನೀರಿನಿಂದ ಪತಿಯ ಪಾದ ತೊಳೆದು, ಅರಿಶಿನ ಕುಂಕುಮ ಹೂವು ಇಟ್ಟು ದೀಪ ಬೆಳಗಬೇಕು. ಪತಿಯ ಆಯುಷ್ಯ ವೃದ್ಧಿಗೆ ಪಾರ್ಥಿಸಬೇಕು. 

ಗಮನಿಸಿ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News