ಈ ರಾಶಿಯಲ್ಲಿ ಕುಬೇರ ಯೋಗ ! 2025ರವರೆಗೆ ಇವರು ಕೈ ಇಟ್ಟಲೆಲ್ಲಾ ಹಣ, ಹೋದಲೆಲ್ಲಾ ವಿಜಯಮಾಲೆ

30 ವರ್ಷಗಳ ನಂತರ, ಶನಿಯು ತನ್ನದೇ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. 2023 ರಿಂದ 2025 ರ ವರೆಗೆ ಶನಿಯು ಕುಂಭ ರಾಶಿಯಲ್ಲಿ ಇರುವ ಅವಧಿಯು  ಕೆಲವು ರಾಶಿಯವರ ಬಾಳಿನಲ್ಲಿ ಸುವರ್ಣ ದಿನಗಳನ್ನೇ ಹೊತ್ತು ತರಲಿದೆ. 

Written by - Ranjitha R K | Last Updated : Aug 1, 2023, 11:14 AM IST
  • ಶನಿಯು ನಾವು ಮಾಡುವ ಕಾರ್ಯಗಳಿಗೆ ಅನುಸಾರವಾಗಿ ಫಲವನ್ನು ನೀಡುವಾತ.
  • ಶನಿಯು ಪ್ರಸನ್ನನಾದಾಗ ಭಿಕ್ಷುಕ ಕೂಡಾ ರಾಜನಾಗುತ್ತಾನೆ.
  • ಶನಿಯ ವಕ್ರ ದೃಷ್ಟಿ ಬಿದ್ದಾಗ ರಾಜ ಭಿಕ್ಷುಕನಾಗುತ್ತಾನೆ
ಈ ರಾಶಿಯಲ್ಲಿ ಕುಬೇರ ಯೋಗ ! 2025ರವರೆಗೆ ಇವರು ಕೈ ಇಟ್ಟಲೆಲ್ಲಾ ಹಣ,  ಹೋದಲೆಲ್ಲಾ ವಿಜಯಮಾಲೆ  title=

ಬೆಂಗಳೂರು : ಶನಿಯು ನಾವು ಮಾಡುವ ಕಾರ್ಯಗಳಿಗೆ ಅನುಸಾರವಾಗಿ  ಫಲವನ್ನು ನೀಡುವಾತ. ಶನಿಯು ಪ್ರಸನ್ನನಾದಾಗ ಭಿಕ್ಷುಕ ಕೂಡಾ  ರಾಜನಾಗುತ್ತಾನೆ. ಅದೇ ಶನಿಯ ವಕ್ರ ದೃಷ್ಟಿ ಬಿದ್ದಾಗ ರಾಜ  ಭಿಕ್ಷುಕನಾಗುತ್ತಾನೆ. ಇದೇ ಕಾರಣದಿಂದ ಜಾತಕದಲ್ಲಿ ಶನಿಯ ಸ್ಥಾನ ಬಹಳ ಮುಖ್ಯ. ಇದಲ್ಲದೆ, ಶನಿ ಗ್ರಹದ ಸ್ಥಾನದಲ್ಲಿನ ಬದಲಾವಣೆಗಳು ನಮ್ಮೆಲ್ಲರ ಜೀವನದಲ್ಲಿ ದೊಡ್ಡ ಪ್ರಭಾವವನ್ನು ಬೀರುತ್ತವೆ. ಪ್ರಸ್ತುತ ಶನಿಯು ತನ್ನ ಮೂಲ ತ್ರಿಕೋನ ರಾಶಿ ಕುಂಭದಲ್ಲಿ ವಿರಾಜಮಾನನಾಗಿದ್ದಾನೆ.  2025 ರ ವರೆಗೆ ಶನಿಯು ಕುಂಭ ರಾಶಿಯಲ್ಲಿಯೇ ಇರುತ್ತಾನೆ. 30 ವರ್ಷಗಳ ನಂತರ, ಶನಿಯು ತನ್ನದೇ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. 2023 ರಿಂದ 2025 ರ ವರೆಗೆ ಶನಿಯು ಕುಂಭ ರಾಶಿಯಲ್ಲಿ ಇರುವ ಅವಧಿಯು  ಕೆಲವು ರಾಶಿಯವರ ಬಾಳಿನಲ್ಲಿ ಸುವರ್ಣ ದಿನಗಳನ್ನೇ ಹೊತ್ತು ತರಲಿದೆ. 

ಈ ರಾಶಿಯವರಿಗೆ ಶನಿ ಸಂಕ್ರಮಣ ಮಂಗಳಕರ  : 
ವೃಷಭ ರಾಶಿ : ಕುಂಭ ರಾಶಿಯಲ್ಲಿ ಶನಿಯ ಸಂಚಾರವು ವೃಷಭ ರಾಶಿಯವರಿಗೆ ತುಂಬಾ ಶುಭಕರವಾಗಿದೆ. ಶನಿಯು 2025 ರವರೆಗೆ ಈ  ರಾಶಿಯವರ ಮೇಲೆ  ದಯೆ ತೋರುತ್ತಾನೆ. ಶನಿಯ ದಯೆ ಇದೆ ಎಂದರೆ 2025ರವರೆಗೆ ಈ ರಾಶಿಯವರ ಅದೃಷ್ಟ ಬೆಳಗಿಸುತ್ತಾನೆ. ಉದ್ಯೋಗ ಮಾಡುವವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಹೊಸ ಸ್ಥಾನ, ಪ್ರತಿಷ್ಠೆ ಮತ್ತು ಗೌರವ ಪ್ರಾಪ್ತಿಯಾಗುತ್ತದೆ. ಆದಾಯ ಹೆಚ್ಚಲಿದೆ. ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ಶನಿ ಸಂಕ್ರಮಣದಿಂದಾಗಿ 2025 ರವರೆಗಿನ ಸಮಯವು ಈ ರಾಶಿಯವರಿಗೆ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ಅದ್ಭುತವಾಗಿರಲಿದೆ. 

ಇದನ್ನೂ ಓದಿ :  Hanuman Favourite Zodiacs: ಈ ರಾಶಿಯವರ ಮೇಲೆ ಸದಾ ಇರುತ್ತೆ ಹನುಮಂತನ ದಯೆ, ಸಿಗುತ್ತೆ ಅಪಾರ ಆಸ್ತಿ-ಸಂಪತ್ತು

ಸಿಂಹ ರಾಶಿ : 2025ರವರೆಗೆ ಸಿಂಹ ರಾಶಿಯವರ ಮೇಲೆ  ಕೂಡಾ  ಶನಿಯು ತುಂಬಾ ಕರುಣೆ ತೋರುತ್ತಾನೆ. ಅದೃಷ್ಟದ ಬೆಂಬಲ ಸದಾ ನಿಮ್ಮ ಜೊತೆ ಇರಲಿದೆ. ಮಾಡುವ ಪ್ರತೊಯೊಂದು ಕೆಲಸದಲ್ಲಿ ಯಶಸ್ಸು ಕೈ ಹಿಡಿಯುವುದು. ಆರ್ಥಿಕ ಲಾಭವಿರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುವುದರೊಂದಿಗೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಪಾಲುದಾರಿಕೆಯಿಂದ ಲಾಭವಾಗಲಿದೆ. ವೃತ್ತಿಯಲ್ಲಿ ಅನೇಕ ಅವಕಾಶಗಳು ಸಿಗುತ್ತವೆ. 2025 ರವರೆಗಿನ ಸಮಯವು ವಿವಾಹಿತರಿಗೆ ಉತ್ತಮವಾಗಿರುತ್ತದೆ. ಈ ಸಮಯವು ನಿಮ್ಮ ಜೀವನದಲ್ಲಿ ಸಂತೋಷ, ಅದೃಷ್ಟ ಮತ್ತು ಐಷಾರಾಮಿಗಳನ್ನು ಹೆಚ್ಚಿಸುತ್ತದೆ.  

ತುಲಾ ರಾಶಿ : ಕುಂಭ ರಾಶಿಯಲ್ಲಿ ಶನಿಯ ಸಂಚಾರವು ತುಲಾ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ತುಲಾ ರಾಶಿಯವರಿಗೆ ಹಣ, ಸ್ಥಾನಮಾನ, ಪ್ರತಿಷ್ಠೆ, ಪ್ರೀತಿ ಎಲ್ಲವನ್ನೂ  ಪ್ರಾಪ್ತಿಯಾಗುತ್ತದೆ. ವೃತ್ತಿ ಮತ್ತು ಹಣಕಾಸಿನ ವಿಷಯದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುವಿರಿ. ಉದ್ಯೋಗ-ವ್ಯವಹಾರದಲ್ಲಿ ದಿನನಿತ್ಯದ ಪ್ರಗತಿಯು ಸಂತೋಷವನ್ನು ನೀಡುತ್ತದೆ. ಜೀವನದಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ. ಸ್ಥಿರಾಸ್ತಿಯಿಂದ ಲಾಭವಾಗಲಿದೆ. 

ಇದನ್ನೂ ಓದಿ : ಇನ್ನು ಮೂರು ತಿಂಗಳಿನಿಂದ ಒಂದೂವರೆ ವರ್ಷದವರೆಗೆ ಈ ರಾಶಿಯವರದ್ದೇ ಮೇಲಾಟ ! ಅಷ್ಟೈಶ್ವರ್ಯ ಹೊತ್ತು ತರುವಳು ಧನಲಕ್ಷ್ಮೀ

( ಸೂಚನೆ : ಇಲ್ಲಿ ನೀಡಲಾದ  ಲೇಖನವು  ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News