ಪತಿಯ ಅದೃಷ್ಟವನ್ನು ಬೆಳಗಿಸುತ್ತಾರೆ ಏಕಾದಶಿಯಲ್ಲಿ ಜನಿಸಿದ ಹುಡುಗಿಯರು

Girls Born On Ekadashi: ಹಿಂದೂ ಧರ್ಮದಲ್ಲಿ ಏಕಾದಶಿ ತಿಥಿಗೆ ವಿಶೇಷ ಮಹತ್ವವಿದೆ. ಈ ದಿನದಂದು ಜನಿಸಿದ ಮಕ್ಕಳ ಸ್ವಭಾವವು ಇತರರಿಗೆ ಹೋಲಿಸಿದರೆ ಸ್ವಲ್ಪ ವಿಭಿನ್ನವಾಗಿರುತ್ತದೆ. ಇಂದು ನಾವು ಏಕಾದಶಿ ದಿನಾಂಕದಂದು ಜನಿಸಿದ ಹುಡುಗಿಯರ ಬಗ್ಗೆ ತಿಳಿಯೋಣ.

Written by - Yashaswini V | Last Updated : Aug 23, 2022, 11:41 AM IST
  • ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಅದೃಷ್ಟ ವೃದ್ಧಿಯಾಗುತ್ತದೆ.
  • ವಿಷ್ಣುವಿನ ಕೃಪೆಯಿಂದ ವ್ಯಕ್ತಿಯ ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ
  • ಈ ದಿನ ದಾನ ಮಾಡುವುದರಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಪತಿಯ ಅದೃಷ್ಟವನ್ನು ಬೆಳಗಿಸುತ್ತಾರೆ ಏಕಾದಶಿಯಲ್ಲಿ ಜನಿಸಿದ ಹುಡುಗಿಯರು  title=
Ekadashi born girl

ಏಕಾದಶಿಯಂದು ಜನಿಸಿದ ಹುಡುಗಿಯರು: ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನಾಂಕಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿ ದಿನಾಂಕವನ್ನು ಕೆಲವು ದೇವತೆಗಳಿಗೆ ಸಮರ್ಪಿಸಲಾಗುತ್ತದೆ. ಇಂದು ಭಾದ್ರಪದ ಮಾಸದ ಏಕಾದಶಿ ತಿಥಿ. ಅಜ ಏಕಾದಶಿ ಉಪವಾಸವನ್ನು ಇಂದು ಆಚರಿಸಲಾಗುತ್ತದೆ. ಏಕಾದಶಿ ತಿಥಿಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಇಂದು ಉಪವಾಸ ಆಚರಣೆ ಮತ್ತು ಪೂಜೆಯಿಂದ ಭಗವಾನ್ ವಿಷ್ಣು ಮತ್ತು ಸಂಪತ್ತಿನ ದೇವತೆಯಾದ ಲಕ್ಷ್ಮಿಯನ್ನು ಪೂಜಿಸುವುದರಿಂದ ಸಕಲ ಸಂಪತ್ತು ಮತ್ತು ಐಶ್ವರ್ಯವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಕಾದಶಿ ದಿನಾಂಕದಂದು ಜನಿಸಿದ ಹುಡುಗಿಯರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.  ಇಂದು ಅಜ ಏಕಾದಶಿ, ಈ ದಿನ ಜನಿಸುವ ಹುಡುಗಿಯರು ಹೋದ ಮನೆಗೆ ಅಂದರೆ ಗಂಡನ ಮನೆಗೆ ತುಂಬಾ ಅದೃಷ್ಟಶಾಲಿಗಳು ಎಂದು ಹೇಳಲಾಗುತ್ತದೆ.

ಏಕಾದಶಿ ಉಪವಾಸವನ್ನು ಎಲ್ಲಾ ಉಪವಾಸಗಳಲ್ಲಿ ಅತ್ಯಂತ ಕಠಿಣ ಮತ್ತು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಮಹಾಭಾರತದ ಕಥೆಯಲ್ಲಿಯೂ ಇದರ ಬಗ್ಗೆ ಉಲ್ಲೇಖಿಸಲಾಗಿದೆ. ಈ ಉಪವಾಸದ ಬಗ್ಗೆ ಶ್ರೀಕೃಷ್ಣನೇ ಧರ್ಮರಾಜ ಯುಧಿಷ್ಠಿರ ಮತ್ತು ಅರ್ಜುನನಿಗೆ ಹೇಳಿದ್ದನೆಂದು ನಂಬಲಾಗಿದೆ. ಆದ್ದರಿಂದ ಏಕಾದಶಿಗೆ ವಿಶೇಷ ಮಹತ್ವವಿದೆ ಎಂದು ಪರಿಗಣಿಸಲಾಗಿದೆ. ಏಕಾದಶಿಯಂದು ಜನಿಸಿದ ಹುಡುಗಿಯರ ವಿಶೇಷತೆ ಏನು? ಅವರು ಇತರರಿಗಿಂತ ಹೇಗೆ ಭಿನ್ನವಾಗಿದ್ದಾರೆ ಎಂದು ತಿಳಿಯೋಣ...

ಇದನ್ನೂ ಓದಿ- ಉದ್ಯೋಗದಲ್ಲಿ ಸಿಗುವುದು ಪದೋನ್ನತಿ, ಮುಂದಿನ ಎರಡು ತಿಂಗಳು ಈ ರಾಶಿಯವರಿಗೆ ಹಣದ ಸುರಿ ಮಳೆ

ಏಕಾದಶಿಯಂದು ಹುಟ್ಟಿದ ಹೆಣ್ಣುಮಕ್ಕಳ ಸ್ವಭಾವ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಕಾದಶಿಯಂದು ಜನಿಸಿದ ಹೆಣ್ಣುಮಕ್ಕಳು ಶಿಕ್ಷಣ ಮತ್ತು ಆಚರಣೆಗಳ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರು ಧಾರ್ಮಿಕ ಕಾರ್ಯಗಳು ಮತ್ತು ಧರ್ಮದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವವರಾಗಿದ್ದು, ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುವುದು ಅವರಿಗೆ ಕರಗತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಏಕಾದಶಿಯಂದು ಜನಿಸಿದ ಹುಡುಗಿಯರು ಗಂಡನ ಪಾಲಿಗೆ ಲಕ್ಕಿ ಚಾರ್ಮ್ ಇದ್ದ ಹಾಗೆ ಎಂದು ಸಹ ಬಣ್ಣಿಸಲಾಗುತ್ತದೆ.

ಸ್ವಭಾವತಃ ಗಂಭೀರ ಮತ್ತು ಚಿಂತನಶೀಲರೂ ಆಗಿರುವ ಈ ಹುಡುಗಿಯರು ಸಾಧ್ಯವಾದಷ್ಟು ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಅಂದರೆ ಅವರು ಜೀವನದಲ್ಲಿ ನಿಯಮಗಳಿಗೆ ಬದ್ಧರಾಗಿ ಬದುಕುತ್ತಾರೆ.  ಮೃದು ಸ್ವಭಾವದವರಾದ ಈ ಹುಡುಗಿಯರ ಮನಸ್ಸಿನಲ್ಲಿ ದುರಾಸೆಯ ಭಾವನೆ ಎಂದಿಗೂ ಇರುವುದಿಲ್ಲ ಎನ್ನಲಾಗುವುದು.

ಇದನ್ನೂ ಓದಿ- ಈ ಮೂರು ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳ ಪ್ರಾರಂಭ.! ಸೂರ್ಯ-ಶನಿ-ಬುಧ ನೀಡಲಿದ್ದಾರೆ ಒಂದರ ಹಿಂದೆ ಒಂದು ಯಶಸ್ಸು

ಏಕಾದಶಿಯ ದಿನ ಜನಿಸಿದ ಹುಡುಗಿಯರ ಮೇಲೆ ಸದಾ ಲಕ್ಷ್ಮಿ ಕೃಪೆ ಇರುತ್ತದೆ. ಇವರು ಹೋದ ಮನೆಗೆ ಅಂದರೆ ಗಂಡನ ಮನೆಗೆ ಸಾಕ್ಷಾತ್ ಲಕ್ಷ್ಮಿಯ ಸ್ವರೂಪ. ಇವರು ಪತಿಯ ಅದೃಷ್ಟವನ್ನು ಬೆಳಗಿಸುತ್ತಾರೆ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News