ದಿನಭವಿಷ್ಯ 05-07-2022: ಈ ರಾಶಿಯವರಿಗೆ ಇಂದು ವಾಹನ ಖರೀದಿಸುವ ಯೋಗ

Horoscope  05 July 2022:  ಮೇಷ ರಾಶಿಯವರೇ ನಿಮ್ಮ ಯಾವುದೇ ಕೆಲಸ ಕನ್ನಡಿಯಂತೆ ಸ್ಪಷ್ಟವಾಗಿರಲಿ. ಕರ್ಕಾಟಕ ರಾಶಿಯವರು ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ದಿನ ನಿಮಗೆ ಶುಭ ಸುದ್ದಿ ಸಾಧ್ಯತೆ. ಉಳಿದ ರಾಶಿಯವರ ಇಂದಿನ ದಿನ ಹೇಗಿದೆ ತಿಳಿಯೋಣ...

Written by - Yashaswini V | Last Updated : Jul 5, 2022, 06:31 AM IST
  • ಮಿಥುನ ರಾಶಿಯವರು ಆತ್ಮವಿಶ್ವಾಸದಿಂದ ಮುನ್ನಡೆಯಿರಿ
  • ವೃಶ್ಚಿಕ ರಾಶಿಯವರೇ ಹೆಚ್ಚು ಭಾವನಾ ಲೋಕದಲ್ಲಿ ಮುಳುಗಬೇಡಿ
  • ಕುಂಭ ರಾಶಿಯವರು ಆರೋಗ್ಯವೇ ಭಾಗ್ಯ ಎಂಬುದನ್ನು ನೆನಪಿನಲ್ಲಿಡಿ
ದಿನಭವಿಷ್ಯ 05-07-2022:  ಈ ರಾಶಿಯವರಿಗೆ ಇಂದು ವಾಹನ ಖರೀದಿಸುವ ಯೋಗ title=
Todays astrology july 5 2022

ದಿನಭವಿಷ್ಯ 04-07-2022 :    ಸಿಂಹ ರಾಶಿಯವರು ಸಂಬಂಧ ಮತ್ತು ವ್ಯಾಪಾರ-ವ್ಯವಹಾರವನ್ನು ಒಂದು ಮಾಡುವ ತಪ್ಪುಗಳಾಗದಂತೆ ಎಚ್ಚರವಹಿಸಿ. ಇದೇ ವೇಳೆ ತುಲಾ ರಾಶಿಯವರು ಒಮ್ಮುಖವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ. ಉಳಿದ ರಾಶಿಯ ಜನರ ಈ ದಿನದ ಭವಿಷ್ಯ ಹೇಗಿದೆ ತಿಳಿಯೋಣ...

ಮೇಷ ರಾಶಿ:  ಈ ರಾಶಿಯವರು ತಮ್ಮ ಔದಾರ್ಯಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವ ಸಮಯ ಬಂದೇ ಬರುತ್ತದೆ. ನಿಮ್ಮ ಯಾವುದೇ ಕೆಲಸ ಕನ್ನಡಿಯಂತೆ ಸ್ಪಷ್ಟವಾಗಿರಲಿ. ಜೀವನದಲ್ಲಿ ಏನೇ ನಡೆದರೂ ಎಲ್ಲವೂ ಪೂರ್ವಯೋಜಿತ, ದೇವನ ಅನುಗ್ರಹದಿಂದಲೇ ನಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.
 
ವೃಷಭ ರಾಶಿ: ಅಧಿಕಾರದಲ್ಲಿರುವವರು ನಿಮ್ಮ ಕೈಲಾದ ಸಹಾಯವನ್ನು ಮಾಡುವುದನ್ನು ರೂಢಿಸಿಕೊಳ್ಳಿ. ಅನಿರೀಕ್ಷಿತ ಬೆಳವಣಿಗೆಗಳು ನಿಮ್ಮ ಜೀವನದ ದೇಶೀಯ ಮತ್ತು ಖಾಸಗಿ ಮಾದರಿಯನ್ನು ಪ್ರವೇಶಿಸಲಿವೆ. ಇದರಿಂದ ನಿಮ್ಮ ಪ್ರಸ್ತುತ ಪರಿಸ್ಥಿತಿ ಸುಧಾರಿಸಬಹುದು.  

ಮಿಥುನ ರಾಶಿ: ಯಾವುದೇ ಕೆಲಸ ಆರಂಭಿಸಲು ನಿಮ್ಮ ಆತ್ಮವಿಶ್ವಾಸ ಬಹಳ ಮುಖ್ಯ. ವಿಶ್ವಾಸದಿಂದ ಮುನ್ನಡೆಯಿರಿ, ಕೆಲಸದಲ್ಲಿ ಜಯ ಖಂಡಿತ ಪ್ರಾಪ್ತಿಯಾಗಲಿದೆ. ಎಲ್ಲಾ ವಿಷಯಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುವ ಬದಲಿಗೆ ಮುಖ್ಯವಾದ ಕೆಲಸಗಳ ಬಗ್ಗೆ ಗಮನ ಕೇಂದ್ರೀಕರಿಸಿ.

ಕರ್ಕಾಟಕ ರಾಶಿ: ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ದಿನ ನಿಮಗೆ ಶುಭ ಸುದ್ದಿ ಪ್ರಾಪ್ತಿಯಾಗಲಿದೆ. ಆದರೆ, ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗ  ಭಾವನಾತ್ಮಕ ಆಲೋಚನೆಗಳಿಗಿಂತ ಪ್ರಾಯೋಗಿಕ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವುದು ಹೆಚ್ಚು ಸೂಕ್ತ.

ಇದನ್ನೂ ಓದಿ- Saturn Transit Effect: ಮಕರ ರಾಶಿಗೆ ಶನಿ ಪ್ರವೇಶ- ಈ ರಾಶಿಯವರಿಗೆ ಹೊಸ ಉದ್ಯೋಗ-ಬಡ್ತಿ ಸಾಧ್ಯತೆ

ಸಿಂಹ ರಾಶಿ: ಸಂಬಂಧ ಮತ್ತು ವ್ಯಾಪಾರ-ವ್ಯವಹಾರವನ್ನು ಒಂದು ಮಾಡುವ ತಪ್ಪುಗಳಾಗದಂತೆ ಎಚ್ಚರವಹಿಸಿ. ಅತಿಯಾದ ಒಳ್ಳೆಯತನ ಒಳ್ಳೆಯದಲ್ಲ ಎಂಬುದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತೀರೋ ಅಷ್ಟು ಒಳ್ಳೆಯದು.  

ಕನ್ಯಾ ರಾಶಿ: ನೀವು ನಿಮ್ಮ ಜೀವನದ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳಲು ಇದು ಒಳ್ಳೆಯ ಸಮಯ.  ನಿಮ್ಮ ಪ್ರೀತಿ, ಕಾಳಜಿಗೆ ಯೋಗ್ಯರಲ್ಲದ ವ್ಯಕ್ತಿಗಳ ಬಗ್ಗೆ ನಿಮ್ಮ ಸಮಯ, ಹಣ, ಶಕ್ತಿಯನ್ನು ವ್ಯಯಿಸುವ ತಪ್ಪನ್ನು ಮಾಡದಿರಿ. 

ತುಲಾ ರಾಶಿ: ನೀವು ಒಮ್ಮುಖವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದು ನಿಮಗೂ ಒಳ್ಳೆಯದಲ್ಲ, ನಿಮ್ಮ ಪ್ರೀತಿಪಾತ್ರರಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಯಾವುದೇ ವಿಷಯದ ಬಗ್ಗೆ ತೀರ್ಪು ನೀಡುವಾಗ ಎರಡೂ ಕಡೆಯವರನ್ನು ಆಲಿಸಿ.  

ವೃಶ್ಚಿಕ ರಾಶಿ: ಹೆಚ್ಚು ಭಾವನಾ ಲೋಕದಲ್ಲಿ ಮುಳುಗಬೇಡಿ. ನೀವು ನಿಮ್ಮ ಕೆಲಸ ಗುರಿಯತ್ತ ಗಮನ ಹರಿಸಿ, ಫಲಾಫಲ ಏನಿದ್ದರೂ ಭಗವಂತನಿಗೆ ಬಿಟ್ಟುಬಿಡಿ. ಸಕಾರಾತ್ಮಕ ಆಲೋಚನೆಗಳಿಂದ ಮುಂದುವರೆಯಿರಿ,  ಎಲ್ಲವೂ ಒಳ್ಳೆಯದೇ ಆಗುತ್ತದೆ.  

ಇದನ್ನೂ ಓದಿ- ಗುರು ಪೂರ್ಣಿಮಾ ದಿನ ನಿರ್ಮಾಣಗೊಳ್ಳುತ್ತಿವೆ 4 ಶುಭಯೋಗಗಳು, ಈ ಕೆಲಸ ಮಾಡಿದ್ರೆ ಕಷ್ಟಗಳಿಂದ ಮುಕ್ತಿ

ಧನು ರಾಶಿ: ಅತಿಯಾದ ಒತ್ತಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದೇ ಕೆಲಸದಲ್ಲಿ ಒತ್ತಡ ತೆಗೆದುಕೊಳ್ಳುವ ಬದಲಿಗೆ ಯೋಚಿಸಿ ಸ್ವಲ್ಪ ಶಾಂತ ಮನಸ್ಸಿನಿಂದ ಕೆಲಸ ಮಾಡಿ ಖಂಡಿತ ಪರಿಹಾರ ಇದ್ದೇ ಇದೆ. ನಿಮ್ಮ ಸಾಮರ್ಥ್ಯಗಳನ್ನು ಪರಿಗಣಿಸಿ ಅದಕ್ಕೆ ತಕ್ಕಂತೆ ಕೆಲಸ ಮಾಡುವುದರಿಂದ ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ.

ಮಕರ ರಾಶಿ: ಇಂದು ನಿಮಗೆ ವಾಹನ ಖರೀದಿಸುವ ಯೋಗವಿದೆ.  ನಿಮ್ಮ ಜೀವನಶೈಲಿಯಲ್ಲಿ ಒಂದಿಷ್ಟು ಒಳ್ಳೆಯ ಬದಲಾವಣೆ ಮಾಡಿಕೊಳ್ಳುವುದರಿಂದ ಅನುಕೂಲಕರ ಎಂದು ಸಾಬೀತುಪಡಿಸಬಹುದು.

ಕುಂಭ ರಾಶಿ: ಆರೋಗ್ಯವೇ ಭಾಗ್ಯ. ಉತ್ತಮ ಆರೋಗ್ಯಕ್ಕಾಗಿ ಯೋಗ, ವ್ಯಾಯಾಮ ರೂಢಿಸಿಕೊಳ್ಳಿ. ವೃತ್ತಿ ಜೀವನದಲ್ಲಿ ಹೊಸ ಹೊಸ ಅವಕಾಶಗಳು ದೊರೆಯಲಿವೆ ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ.  

ಮೀನ ರಾಶಿ: ಯಾವುದೇ ಕೆಲಸವನ್ನು ಹೆಚ್ಚು ದಿನ ಕದ್ದು ಮುಚ್ಚಿ ಮಾಡಲು ಸಾಧ್ಯವಾಗುವುದಿಲ್ಲ. ಒಂದಲ್ಲಾ ಒಂದು ದಿನ ಅದು ಬೆಳಕಿಗೆ ಬರಲೇ ಬೇಕು. ಇಂದು ನಿಮಗೆ ಅಂತಹ ಒಂದು ದಿನ. ನಿಮ್ಮ ಗೌಪ್ಯ ವ್ಯವಹಾರಗಳು ಇಂದು ಬಹಿರಂಗಗೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News