ದಿನಭವಿಷ್ಯ 07-07-2022: ಇಂದು ಈ ರಾಶಿಯವರಿಗೆ ಅನುಕೂಲಕರ ದಿನ

Horoscope  07 July 2022:  ಗುರುವಾರದಂದು ಕೆಲವು ರಾಶಿಯವರಿಗೆ ತುಂಬಾ ಕಾರ್ಯನಿರತ ದಿನ. ಇನ್ನೂ ಕೆಲವು ರಾಶಿಯವರು ದುಂದುವೆಚ್ಚವನ್ನು ತಪ್ಪಿಸಿದರೆ ಒಳ್ಳೆಯದು. ಇಂದು ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯೋಣ...

Written by - Yashaswini V | Last Updated : Jul 7, 2022, 05:32 AM IST
  • ಸಿಂಹ ರಾಶಿಯವರೇ ನಿಮ್ಮೆ ಮಾತಿನಲ್ಲಿ ಮಾಧುರ್ಯವಿರಲಿ
  • ತುಲಾ ರಾಶಿಯವರಿ ಹಿರಿಯರ ಆಸ್ತಿ-ವ್ಯವಹಾರದಲ್ಲಿ ಅನುಕೂಲಕರ ದಿನ
  • ಧನು ರಾಶಿಯವರು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ
ದಿನಭವಿಷ್ಯ 07-07-2022:  ಇಂದು ಈ ರಾಶಿಯವರಿಗೆ ಅನುಕೂಲಕರ ದಿನ title=
Todays astrology july 7 2022

ದಿನಭವಿಷ್ಯ 07-07-2022 :    ಗುರುವಾರದಂದು ಕೆಲವು ರಾಶಿಯವರಿಗೆ ಶ್ರೀ ಗುರುರಾಘವೇಂದ್ರ ಕೃಪೆ ತೋರಲಿದ್ದಾರೆ. ಕೆಲವು ರಾಶಿ ಚಕ್ರದ ಜನರು ಆರ್ಥಿಕ ಲಾಭ ಪಡೆಯಲಿದ್ದಾರೆ. ಇನ್ನೂ ಕೆಲವರಿಗೆ ಅದೃಷ್ಟ ಕೈ ಹಿಡಿಯಲಿದೆ. ಇಂದು ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ ಎಂದು ತಿಳಿಯೋಣ...

ಮೇಷ ರಾಶಿ-  ಇಂದು ಈ ರಾಶಿಯವರು ಯಾರಿಂದಲಾದರೂ ಸಾಲ ಪದೆಯುವುದಾಗಲಿ ಅಥವಾ ಯಾರಿಗಾದರೂ ಸಾಲ ಕೊಡುವುದನ್ನಾಗಲಿ ತಪ್ಪಿಸುವುದು ಒಳಿತು. ಇದರ ಹೊರತಾಗಿ ಇಂದು ನೀವು ನಿಮ್ಮ ಹಳೆಯ ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ವೃಷಭ ರಾಶಿ-   ಇಂದು ಈ ರಾಶಿಯವರಿಗೆ ಕಾರ್ಯನಿರತ ದಿನವಾಗಿರಲಿದೆ. ಓಡಾಟ ಹೆಚ್ಚಿದ್ದರೂ ನೀವು ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಇದರಿಂದ ಮನಸ್ಸಿಗೆ ಸಂತಸವಾಗಲಿದೆ. 

ಮಿಥುನ ರಾಶಿ- ಮಿಥುನ ರಾಶಿಯವರು ಇಂದು ನಿಮ್ಮ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಇಲ್ಲವೇ ಮುಂದಿನ ದಿನಗಳಲ್ಲಿ ತೊಂದರೆ ಎದುರಿಸಬೇಕಾಗಬಹುದು. ನಿಮ್ಮ ನಡೆ-ನುಡಿಯ ಬಗ್ಗೆಯೂ ಎಚ್ಚರದಿಂದಿರಿ.

ಕರ್ಕಾಟಕ ರಾಶಿ- ಈ ರಾಶಿಯವರಿಗೆ ಇಂದು ಅದೃಷ್ಟದ ದಿನ. ಈ ದಿನ ನೀವು ಮುಟ್ಟಿದ್ದೆಲ್ಲಾ ಚಿನ್ನ, ನಿಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ನೀವು ಅನುಭವಿಸುತ್ತೀರಿ. ಶ್ರೀ ಗುರು ರಾಯರ ಕೃಪೆ ನಿಮ್ಮ ಮೇಲಿರಲಿದೆ.

ಇದನ್ನೂ ಓದಿ- ನಾಗರ ಪಂಚಮಿ ಪೂಜೆಯಲ್ಲಿದ್ದರೆ ಈ ವಸ್ತು ಸಿಗುವುದು ಶಿವನ ವಿಶೇಷ ಆಶೀರ್ವಾದ

ಸಿಂಹ ರಾಶಿ- ಇಂದು ದಿನದ ಮೊದಲಾರ್ಧದಲ್ಲಿ ನೀವು ಕೆಲಸ-ಕಾರ್ಯಗಳಲ್ಲಿ ಅಡಚಣೆ ಎದುರಿಸಬೇಕಾಗಬಹುದು. ಮಧ್ಯಾಹ್ನದ ನಂತರ ಯಾವುದೇ ಕೆಲಸ ಮಾಡುವುದರಿಂದ ಒಳ್ಳೆಯ ಫಲ ದೊರೆಯಲಿದೆ. ಮಾತೇ ಮುತ್ತು-ಮಾತೇ ಮೃತ್ಯು ಎಂಬ ನಾಣ್ನುಡಿಯನ್ನು ನೆನೆದು ನಿಮ್ಮ ಮಾತನ್ನು ಮಧುರವಾಗಿ ಸಿಹಿಯಾಗಿರಿಸಿದರೆ ಒಳಿತು.

ಕನ್ಯಾ ರಾಶಿ- ಇಂದು ನೀವು ಯಾವುದೇ ಕಷ್ಟಕರವಾದ ಕೆಲಸವನ್ನು ಹೂವೆತ್ತಿದಂತೆ ಪೂರ್ಣಗೊಳಿಸುವಿರಿ. ಸಕಾರಾತ್ಮಕ ಆಲೋಚನೆಗಳಿಂದ ಮುನ್ನಡೆದರೆ ಎಲ್ಲವೂ ಒಳ್ಳೆಯದೇ ಆಗಲಿದೆ.

ತುಲಾ ರಾಶಿ-  ತುಲಾ ರಾಶಿಯವರಿ ಹಿರಿಯರ ಆಸ್ತಿ-ವ್ಯವಹಾರದಲ್ಲಿ ಅನುಕೂಲಕರ ದಿನ. 
ಬೇರೆಯವರ ಹಿತದ ಬಗ್ಗೆ ಯೋಚಿಸುವ ನಿಮಗೆ ಒಳ್ಳೆಯದೇ ಆಗಲಿದೆ. ಯಾವುದೇ ಹೊಸ ಕೆಲಸವನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ದಿನ ತುಂಬಾ ಮಂಗಳಕರ.

ವೃಶ್ಚಿಕ ರಾಶಿ- ನಿಮ್ಮ ಇಷ್ಟು ದಿನಗಳ ಪರಿಶ್ರಮಕ್ಕೆ ಇಂದು ಫಲ ದೊರೆಯಲಿದೆ. ಸಂಜೆ ವೇಳೆಗೆ ನೀವು ಶುಭ ಸುದ್ದಿಯೊಂದನ್ನು ಪಡೆಯಲಿದ್ದೀರಿ. ವ್ಯಾಪಾರ-ವ್ಯವಹಾರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.

ಇದನ್ನೂ ಓದಿ- ಒಂದು ರೂ.ನಾಣ್ಯದಿಂದ ಹೀಗೆ ಮಾಡಿ: ಆರ್ಥಿಕ ಸಮಸ್ಯೆ ದೂರವಾಗುತ್ತೆ!

ಧನಸ್ಸು ರಾಶಿ-  ಈ ರಾಶಿಯವರು ನಿಮ್ಮ ಆಹಾರ - ಪಾನೀಯಗಳ ಬಗ್ಗೆ ಬಹಳ ಜಾಗರೂಕರಾಗಿರಿ, ಇಲ್ಲವೇ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ನಿಮ್ಮನ್ನು ಕಾಡಬಹುದು. ಇದರ ಹೊರತಾಗಿ, ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.

ಮಕರ ರಾಶಿ- ಇಂದು ಅನಗತ್ಯ ಖರ್ಚುಗಳು ನಿಮ್ಮ ಬಜೆಟ್ ಹಾಳುಮಾಡಬಹುದು. ಆದಾಗ್ಯೂ, ನಿಮ್ಮ ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಕೂಡಿಡುವುದು ಸೂಕ್ತ. ವ್ಯವಹಾರ ವೃದ್ಧಿಯಾಗಲಿದೆ. 

ಕುಂಭ ರಾಶಿ-  ಉದ್ಯೋಗಸ್ಥರು ಲಾಭ ಪಡೆಯಲಿದ್ದಾರೆ. ದೂರ ಪ್ರಯಾಣ ಸಾಧ್ಯತೆ ಇದೆ. ನಿಮ್ಮ ಒತ್ತಡಭರಿತ ಜೀವನದಲ್ಲಿ ಕುಟುಂಬಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿರಿಸಿ. 

ಮೀನ ರಾಶಿ-  ಇಂದು ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ವಿವಾದಗಳು ಇತ್ಯರ್ಥವಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗಲಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದರಿಂದ ಸಂತೋಷವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News