ದಿನಭವಿಷ್ಯ 08-07-2022: ಈ ರಾಶಿಯವರಿಗೆ ಇಂದು ಆರ್ಥಿಕ ಲಾಭ

Horoscope  08 July 2022:  ಕನ್ಯಾ ರಾಶಿಯವರು ಶುಕ್ರವಾರದ ದಿನ ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆಲೋಚಿಸದೆ ಸಾಲ ನೀಡುವುದನ್ನು ತಪ್ಪಿಸಿ. ಮಕರ ರಾಶಿಯವರು ಕೆಲಸದ ಮಧ್ಯೆ ವಿರಾಮ ಪಡೆಯುವುದು ಅವಶ್ಯಕ. ಉಳಿದಂತೆ ಇಂದು ಯಾವ ರಾಶಿಯವರಿಗೆ ಏನು ಫಲ ತಿಳಿಯೋಣ...

Written by - Yashaswini V | Last Updated : Jul 8, 2022, 05:31 AM IST
  • ಮೇಷ ರಾಶಿಯವರು ಪಾಲುದಾರಿಕೆ ವ್ಯವಹಾರದಲ್ಲಿ ಕೆಲವು ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
  • ಮಕರ ರಾಶಿಯವರು ವಿನಾಕಾರಣ ಚಿಂತಿಸುವುದನ್ನು ಬಿಟ್ಟರೆ ಒಳಿತು.
  • ಕುಂಭ ರಾಶಿಯವರು ಯೋಚಿಸದೆ ಹೂಡಿಕೆ ಮಾಡುವುದನ್ನು ತಪ್ಪಿಸಿ.
ದಿನಭವಿಷ್ಯ 08-07-2022:  ಈ ರಾಶಿಯವರಿಗೆ ಇಂದು ಆರ್ಥಿಕ ಲಾಭ  title=
Todays astrology july 8 2022

ದಿನಭವಿಷ್ಯ 08-07-2022 :    ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಶುಕ್ರವಾರ ಜುಲೈ 8ರಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ. ಇಂದು ಯಾವ ರಾಶಿಯವರಿಗೆ ಶುಭ ಫಲಗಳು ಲಭ್ಯವಾಗಲಿವೆ, ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ತಿಳಿಯೋಣ...

ಮೇಷ ರಾಶಿ: ಇಂದು ಮೇಷ ರಾಶಿಯವರು ಪಾಲುದಾರಿಕೆ ವ್ಯವಹಾರದಲ್ಲಿ ಕೆಲವು ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಆರ್ಥಿಕ ಲಾಭವಾಗಲಿದೆ. ಕುಟುಂಬ ಜೀವನ ಉತ್ತಮವಾಗಿರಲಿದೆ. ಆದರೆ, ಆರೋಗ್ಯದ ಬಗ್ಗೆ ನಿಗಾವಹಿಸುವುದು ಉತ್ತಮ.

ವೃಷಭ ರಾಶಿ: ಇಂದು ಸ್ವಲ್ಪ ಕಷ್ಟಪಟ್ಟಾದರೂ ನಿಮ್ಮ ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಿ, ಇಲ್ಲವೇ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿ ಆಗಬೇಕಾಗಬಹುದು. ಹಣವನ್ನು ಖರ್ಚು ಮಾಡುವಾಗ ಕೈ ಹಿಡಿತವಿರಲಿ, ಭವಿಷ್ಯದ ಒಳಿತಿಗಾಗಿ ಸ್ವಲ್ಪ ಹಣವನ್ನು ಕೂಡಿಡುವುದು ಕ್ಷೇಮ.

ಮಿಥುನ ರಾಶಿ: ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಫಲ ದೊರೆಯದ ಕಾರಣದ ಬಗ್ಗೆ ಆತ್ಮಾವಲೋಕನ ಮಾಡುವುದು ಸೂಕ್ತ. ಇದರಿಂದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಹೋಗುವ ಅವಕಾಶ, ಜೊತೆಗೆ ಯಶಸ್ಸಿನ ಹಾದಿಯೂ ಪ್ರಾಪ್ತಿಯಾಗುತ್ತದೆ.

ಕರ್ಕಾಟಕ ರಾಶಿ: ಇಂದು ನಿಮ್ಮ ಸಹೋದರರು ನಿಮ್ಮಿಂದ ಆರ್ಥಿಕ ಸಹಾಯವನ್ನು ಬಯಸಬಹುದು. ಆದರೆ, ಯಾವ ಕೆಲಸಕ್ಕಾಗಿ ಹಣ ಬೇಕಿದೆ ಎಂದು ಮೊದಲು ತಿಳಿಯಿರಿ. ಸುಖಾಸುಮ್ಮನೆ ಹಣ ನೀಡಿ ಆರ್ಥಿಕ ಹೊರೆ ಹೆಚ್ಚಿಸಿಕೊಳ್ಳುವುದನ್ನು ತಪ್ಪಿಸಿ.

ಇದನ್ನೂ ಓದಿ- Numerology: ಈ ದಿನಾಂಕಗಳಲ್ಲಿ ಜನಿಸಿದವರನ್ನು ಕಣ್ಮುಚ್ಚಿ ನಂಬಬಹುದು

ಸಿಂಹ ರಾಶಿ: ಇಂದು ನಿಮ್ಮ ಆತ್ಮೀಯರೇ ನಿಮಗೆ ಮೋಸ ಮಾಡಬಹುದು. ಹಾಗಾಗಿ ವ್ಯವಹಾರದ ವಿಷಯದಲ್ಲಿ ತುಂಬಾ ಜಾಗರೂಕರಾಗಿರಿ. ಬೇರೆಯವರ ಹೊಗಳಿಕೆ ಮಾತಿಗೆ ಮರುಳಾಗದೆ ನಿಮ್ಮ ಸ್ವಂತ ಬುದ್ದಿ ಉಪಯೋಗಿಸಿ ಚೆನ್ನಾಗಿ ಯೋಚಿಸಿ ಮುಂದುವರೆಯುವುದು ಉತ್ತಮ.

ಕನ್ಯಾ ರಾಶಿ: ಕನ್ಯಾ ರಾಶಿಯವರು ಶುಕ್ರವಾರದ ದಿನ ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆಲೋಚಿಸದೆ ಸಾಲ ನೀಡುವುದನ್ನು ತಪ್ಪಿಸಿ.  ಇಲ್ಲವೇ ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಬೇಕಾದೀತು. ಮಕ್ಕಳೊಂದಿಗೆ ಸಮಯ ಕಳೆಯುವುದು ಸಂತಸ ತರಲಿದೆ. 

ತುಲಾ ರಾಶಿ: ಈ ರಾಶಿಯವರು ಬಿಡುವಿಲ್ಲದ ಕೆಲಸದ ನಡುವೆ ನಿಮ್ಮ ಆರೋಗ್ಯದ ಬಗ್ಗೆಯೂ ಗಮನಹರಿಸಿ. ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯದ ಬಗ್ಗೆಯೂ ನಿಗಾವಹಿಸಿ. ಪ್ರೀತಿ ಸಕಾರಾತ್ಮಕತೆಯನ್ನು ತೋರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಪ್ರೀತಿಯ ಮಾತುಗಳನ್ನಾಡುವುದರಿಂದ ಜಗಳ ತಪ್ಪಿಸಬಹುದು.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಹಠಾತ್ ಧನಲಾಭಾವಾಗಲಿದೆ. ನಿಮ್ಮ ಇಷ್ಟು ದಿನದ ನಿರೀಕ್ಷೆಗೆ ಇಂದು ಶುಭ ಫಲ ದೊರೆಯಲಿದೆ. ಹೊಸ ಉದ್ಯೋಗದ ಆಫರ್ ಲೇಟರ್ ಕೈ ಸೇರುವ ಸಾಧ್ಯತೆ ಇದೆ. ಇಂದು ನಿಮಗೆ ಅದೃಷ್ಟದ ದಿನ.

ಇದನ್ನೂ ಓದಿ-  ಇನ್ನು 5 ದಿನಗಳ ನಂತರ ಮಕರ ರಾಶಿಗೆ ಶನಿ ಪ್ರವೇಶ- ಯಾರಿಗೆ ಶುಭ? ಯಾರಿಗೆ ಅಶುಭ?

ಧನು ರಾಶಿ: ಈ ರಾಶಿಯ ಜನರಿಗೆ ಇಂದು ವಿತ್ತೀಯ ಲಾಭ ದೊರೆಯುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಒಂದು ರೋಮ್ಯಾಂಟಿಕ್ ಡಿನ್ನರ್ ಯೋಜಿಸಬಹುದು. ಇದು ಅವರಿಗೆ ತುಂಬಾ ಸಂತೋಷವನ್ನು ನೀಡಲಿದೆ.

ಮಕರ ರಾಶಿ: ಈ ರಾಶಿಯವರು ವಿನಾಕಾರಣ ಚಿಂತಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತು ಮುನ್ನಡೆಯಬೇಕು. ಕೈ ಕೆಸರಾದರೆ ಬಾಯಿ ಮೊಸರು. ಹಾಗಾಗಿ ನಿಷ್ಠೆಯಿಂದ ಶ್ರಮವಹಿಸಿ ದುಡಿಯಿರಿ. ಫಲಾಫಲವನ್ನು ದೇವರಿಗೆ ಬಿಡಿ. ಎಲ್ಲವೂ ಒಳ್ಳೆಯದೇ ಆಗಲಿದೆ.

ಕುಂಭ ರಾಶಿ: ಈ ರಾಶಿಯವರು ಯೋಚಿಸದೆ ಹೂಡಿಕೆ ಮಾಡುವುದನ್ನು ತಪ್ಪಿಸಿ. ಇದರಿಂದ ಕೈ ಸುಟ್ಟಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಕೆಲಸದತ್ತ ಗಮನ ಕೇಂದ್ರೀಕರಿಸುವುದರಿಂದ ನಿಗದಿತ ಸಮಯದಲ್ಲಿ ಕೆಲಸಗಳನ್ನು ಪೂರ್ಣಗೊಳಿಸಬಹುದು.

ಮೀನ ರಾಶಿ:  ಈ ರಾಶಿಯವರು ಅನಗತ್ಯ ವಾದ-ವಿವಾದಗಳಿಗೆ ಎಡೆಮಾಡಿಕೊಡಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಯಾರನ್ನೂ ಹಗುರವಾಗಿ ಪರಿಗಣಿಸಬೇಡಿ. ಇದು ಭವಿಷ್ಯದಲ್ಲಿ ನಿಮ್ಮ ಬೆಳವಣಿಗೆಗೆ ತೊಂದರೆ ಉಂಟು ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News