ಭಿಕ್ಷುಕನನ್ನು ಕೂಡಾ ರಾಜ ಪದವಿಗೆ ಏರಿಸುತ್ತದೆ ಕಾಳ ಸರ್ಪ ಯೋಗ! ಕಾಳ ಸರ್ಪ ಯೋಗಕ್ಕೂ ದೋಷಕ್ಕೂ ಇದೆ ವ್ಯತ್ಯಾಸ

ಜನ್ಮ ದಿನಾಂಕ, ಸಮಯಕ್ಕೆ ಅನುಗುಣವಾಗಿ ಜಾತಕದಲ್ಲಿ ಹಲವು ರೀತಿಯ ಯೋಗಗಳು ಕೂಡಿ ಬರುತ್ತವೆ. ಅಂತಹ ಒಂದು ಯೋಗವೆಂದರೆ ಕಾಳಸರ್ಪ ಯೋಗ.

Written by - Ranjitha R K | Last Updated : Feb 3, 2023, 12:25 PM IST
  • ಪ್ರತಿಯೊಬ್ಬ ಮನುಷ್ಯ ಕೂಡಾ ತನ್ನದೇ ಆದ ಹಣೆಬರಹವನ್ನು ಹೊಂದಿರುತ್ತಾನೆ.
  • ಜಾತಕದಲ್ಲಿ ಹಲವು ರೀತಿಯ ಯೋಗಗಳು ಕೂಡಿ ಬರುತ್ತವೆ.
  • ಕೆಲವು ಯೋಗಗಳು ಮಿಶ್ರ ಫಲಿತಾಂಶಗಳನ್ನು ನೀಡುತ್ತವೆ.
ಭಿಕ್ಷುಕನನ್ನು ಕೂಡಾ ರಾಜ ಪದವಿಗೆ ಏರಿಸುತ್ತದೆ ಕಾಳ ಸರ್ಪ ಯೋಗ!   ಕಾಳ ಸರ್ಪ  ಯೋಗಕ್ಕೂ ದೋಷಕ್ಕೂ ಇದೆ ವ್ಯತ್ಯಾಸ

ಬೆಂಗಳೂರು : ನಂಬಿಕೆಗಳ ಪ್ರಕಾರ ಹೇಳುವುದಾದರೆ ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಮನುಷ್ಯ ಕೂಡಾ ತನ್ನದೇ ಆದ ಹಣೆಬರಹವನ್ನು ಹೊಂದಿರುತ್ತಾನೆ. ಜನ್ಮ ದಿನಾಂಕ, ಸಮಯಕ್ಕೆ ಅನುಗುಣವಾಗಿ ಜಾತಕದಲ್ಲಿ ಹಲವು ರೀತಿಯ ಯೋಗಗಳು ಕೂಡಿ ಬರುತ್ತವೆ. ಇವುಗಳಲ್ಲಿ ಕೆಲವು ಯೋಗಗಳು ತುಂಬಾ ಒಳ್ಳೆಯದ್ದಾಗಿದ್ದರೆ ಇನ್ನು ಕೆಲವು ತುಂಬಾ ಕೆಟ್ಟದಾಗಿರಬಹುದು. ಕೆಲವು ಯೋಗಗಳು ಮಿಶ್ರ ಫಲಿತಾಂಶಗಳನ್ನು ನೀಡುವಂಥದ್ದಾಗಿರುತ್ತದೆ. ಅಂತಹ ಒಂದು ಯೋಗವೆಂದರೆ ಕಾಳಸರ್ಪ ಯೋಗ. ಯಾರ ಜಾತಕದಲ್ಲಿ ಕಾಳಸರ್ಪ ದೋಷವಿರುತ್ತದೆಯೋ ಅವರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕಾಲ ಸರ್ಪ ಯೋಗ ಹಾಗಲ್ಲ. ಈ ಯೋಗವು ಕಡು ಬಡವನನ್ನು ಕೋಟ್ಯಾಧಿಪತಿಯನ್ನಾಗಿ ಮಾಡಬಹುದು. 

ಕಾಳಸರ್ಪ ಯೋಗ : 
ಖಗೋಳ ಲೆಕ್ಕಾಚಾರದ ರಾಹು-ಕೇತು ಗ್ರಹಗಳಿಗೆ ಎರಡು ಧ್ರುವಗಳು. ರಾಹುವಿನದ್ದು ಉತ್ತರ ಧ್ರುವವಾದರೆ ಕೇತು ದಕ್ಷಿಣ ಧ್ರುವ. ರಾಹುವಿನ ಹಾವಿನ ತಲೆಯನ್ನು ಹೊಂದಿದ್ದರೆ, ಕೇತುವಿನ ಹಾವಿನ ಬಾಲವನ್ನು ಹೊಂದಿರುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯ ಜಾತಕದಲ್ಲಿ ರಾಹು ಮತ್ತು ಕೇತು ಗ್ರಹಗಳು ಹಿಮ್ಮುಖವಾಗಿಯೇ ಚಲಿಸುತ್ತದೆ.  ಹೀಗೆ ರಾಹು ಮತ್ತು ಕೇತು ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಇತರ ಗ್ರಹಗಳು ನಡುವೆ ಬಂದರೆ, ಆಗ ಕಾಲ ಸರ್ಪ ದೋಷವನ್ನು ಎದುರಿಸಬೇಕಾಗುತ್ತದೆ. ಕಾಲ ಸರ್ಪ ಯೋಗದಲ್ಲಿ 12 ವಿಧಗಳಿವೆ.

ಇದನ್ನೂ ಓದಿ : Astro Tips: 5 ರೂ. ನಾಣ್ಯದಲ್ಲಿದೆ ಮ್ಯಾಜಿಕ್, ಈ ಟ್ರಿಕ್‌ನಿಂದ ರಾತ್ರೋರಾತ್ರಿ ಹೊಳೆಯುತ್ತೆ ನಿಮ್ಮ ಅದೃಷ್ಟ.!

 ಕಾಲ ಸರ್ಪ ಯೋಗದ ಲಾಭವೇನು ? :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರಪಂಚದ ಎಲ್ಲಾ ಪ್ರಸಿದ್ಧ ಮತ್ತು ಪ್ರಭಾವಿ ವ್ಯಕ್ತಿಗಳ ಜಾತಕದಲ್ಲಿ ಕಾಲ ಸರ್ಪ ಯೋಗವನ್ನು ಕಾಣಬಹುದು. ಯಾವ ವ್ಯಕ್ತಿಯ ಜಾತಕದಲ್ಲಿ ಈ ಎರಡೂ ಛಾಯಾಗ್ರಹಗಳು ಅಂದರೆ ರಾಹು ಮತ್ತು ಕೇತು ಶುಭ ಸ್ಥಾನದಲ್ಲಿದೆಯೋ, ಆ ವ್ಯಕ್ತಿ ಎಲ್ಲಾ ಕಷ್ಟಗಳನ್ನೂ ಮೀರಿ ಹಣ ಗಳಿಸುತ್ತಾನೆ. ಶ್ರೀಮಂತನಾಗುತ್ತಾನೆ. ಆದರೆ ಎರಡೂ ಗ್ರಹಗಳು ಅಶುಭ ಸ್ಥಾನದಲ್ಲಿದ್ದಾಗ, ವ್ಯಕ್ತಿ ರಾಜನಿಂದ ಭಿಕ್ಷುಕನಾಗಬೇಕಾಗುತ್ತದೆ.  

ಇದನ್ನೂ ಓದಿ :  Surya Shani Yuti 2023: ಸೂರ್ಯ ಶನಿ ಯುತಿ, ಈ 3 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ!

 

(  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News