IND vs NZ, 1st Test Match: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾಗೆ ಹೊಸ ಚೆಂಡು ಮಾರಕವಾಗಿ ಪರಿಣಮಿಸಿದೆ. ಏಕೆಂದರೆ ಮೊದಲ ಬಾಲ್‌ನಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಭಾರತ ತಂಡವು, ಹೊಸ ಚೆಂಡಿನಿಂದಾಗಿ ಕೇವಲ 62 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಳ್ಳಬೇಕಾಯಿತು.
ಹೌದು, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿತು. ಕೇವಲ 62 ರನ್ ಅಂತರದಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಈ ದಿಢೀರ್ ಪತನಕ್ಕೆ ಹೊಸ ಚೆಂಡು ಕಾರಣವೆಂದು ಹೇಳಲಾಗುತ್ತಿದೆ. ರಿಷಭ್ ಪಂತ್ ಕ್ರೀಸ್‌ನಲ್ಲಿದಷ್ಟು ಕಾಲ ಉತ್ತಮವಾಗಿಯೇ ರನ್ ಕಲೆಹಾಕುತ್ತಿದ್ದ ಭಾರತ ನಂತರ ಒಂದರ ಹಿಂದೆ ಒಂದರಂತೆ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದನ್ನೂ ಓದಿ: IND vs NZ, 1st Test: ರಿಷಭ್ ಪಂತ್ ಹೆಗಲೆರಿದ ಸಚಿನ್ ತೆಂಡೂಲ್ಕರ್‌ಗೆ ಕಾಡಿದ್ದ ʼನರ್ವಸ್ 90ʼ ಭೂತ..!
ಅದ್ಭುತವಾಗಿ ಆಟವಾಡಬೇಕಿದ್ದ ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ, ಆರ್.ಅಶ್ವಿನ್ ಬೇಗನೆ ವಿಕೆಟ್ ಒಪ್ಪಿಸಿದರು. ಹೀಗಾಗಿ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ ಹೊಸ ಚೆಂಡು ಮುಳುವಾಯ್ತು ಅನ್ನೋ ಚರ್ಚೆ ಆರಂಭವಾಗಿದೆ. ಟೀಂ ಇಂಡಿಯಾದ ಇನ್ನಿಂಗ್ಸ್‌ನ 81ನೇ ಓವರ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಅಂಪೈರ್‌ಗಳು ಹೊಸ ಚೆಂಡು ನೀಡಿದ ಬಳಿಕವೇ ಭಾರತ ಪರವಿದ್ದ ಪಂದ್ಯವು ಕಿವೀಸ್ ಪರ ವಾಲಿತು ಎನ್ನಲಾಗಿದೆ. ಈ ವೇಳೆ ಭಾರತ ಕೇವಲ 3 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿತ್ತು. 146 ರನ್ ಗಳಿಸಿದ್ದ ಸರ್ಫರಾಜ್ ಖಾನ್ ಮತ್ತು 87 ರನ್ ಸಿಡಿಸಿದ್ದ ರಿಷಭ್ ಪಂತ್ ಕ್ರೀಸ್‌ನಲ್ಲಿದ್ದರು. ಆಗ ನ್ಯೂಜಿಲೆಂಡ್‌ನ ಟಿಮ್ ಸೌಥಿ ಹೊಸ ಚೆಂಡಿನೊಂದಿಗೆ ಬೌಲಿಂಗ್ ಆರಂಭಿಸಿದರು. ಆ ಓವರ್‌ನಲ್ಲಿ ಭಾರತ ತಂಡವು ಕೇವಲ 1 ರನ್ ಮಾತ್ರ ಕಲೆ ಹಾಕಿತ್ತು.
Will O'Rourke strikes! It's the big wicket of Rishabh Pant who chops on for 99. The India lead is 77 with five wickets in hand. Follow play LIVE in NZ on @skysportnz or @SENZ_Radio LIVE scoring | https://t.co/yADjMlJjpO 🏏 #INDvNZ #CricketNation pic.twitter.com/JNWtEEIXmg
— BLACKCAPS (@BLACKCAPS) October 19, 2024
Will O'Rourke strikes! It's the big wicket of Rishabh Pant who chops on for 99. The India lead is 77 with five wickets in hand. Follow play LIVE in NZ on @skysportnz or @SENZ_Radio LIVE scoring | https://t.co/yADjMlJjpO 🏏 #INDvNZ #CricketNation pic.twitter.com/JNWtEEIXmg
— BLACKCAPS (@BLACKCAPS) October 19, 2024
ಈ ವೇಳೆಗಾಗಲೇ ಚೆಂಡು ಹೆಚ್ಚು ತಿರುವು ಪಡೆಯುತ್ತಿರುವುದು ನಂತರದ ಓವರ್‌ನಲ್ಲಿ ಖಾತ್ರಿಯಾಗಿತ್ತು. ಮ್ಯಾಟ್ ಹೆನ್ರಿ ಎಸೆದ ಆ ಓವರ್‌ನಲ್ಲಿ ಸಹ ಕೇವಲ 1 ರನ್ ದೊರೆಯಿತು. ಈ ವೇಳೆ ಚೆಂಡು ತಿರುವು ಪಡೆಯುತ್ತಿರುವುದನ್ನು ಮನಗಂಡ ನ್ಯೂಜಿಲೆಂಡ್ ಬೌಲರ್‌ಗಳು ಕ್ರಮೇಣ ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾದರು. ಸರ್ಫರಾಜ್ 150 ರನ್ ಗಳಿಸಿ ಟಿಮ್ ಸೌಥಿ ಬೌಲಿಂಗ್‌ನಲ್ಲಿ ಔಟಾದರೆ, ಅವರ ಹಿಂದೆಯೇ ವಿಲಿಯಂ ರೌರ್ಕಿ ಬೌಲಿಂಗ್‌ನಲ್ಲಿ 99ರನ್ ಗಳಿಸಿದ್ದ ಪಂತ್ ಸಹ ಔಟಾಗಿ ಪೆವಿಲಿಯನ್ ಸೇರಿದರು.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ ಸರ್ಫರಾಜ್; ಕಳೆದ 10 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ
ಭಾರತ ತಂಡ ಎದುರಿಸಿದ ಮೊದಲ ಚೆಂಡಿನಲ್ಲಿ ಒಟ್ಟು 80 ಓವರ್‌ಗಳನ್ನು ಆಡಲಾಗಿತ್ತು. ಆಗ ಭಾರತ ತಂಡವು 5ರ ಸರಾಸರಿಯಲ್ಲಿ 400 ರನ್ ಕಲೆ ಹಾಕಿ ಕೇವಲ 3 ವಿಕೆಟ್ ಕಳೆದುಕೊಂಡಿತ್ತು. ಆದರೆ 81ನೇ ಓವರ್‌ನಲ್ಲಿ ಹೊಸ ಚೆಂಡು ಬಂದ ಬಳಿಕ ಕೇವಲ 19 ಓವರ್‌ನಲ್ಲಿ ಕೇವಲ 3.18 ಸರಾಸರಿಯಲ್ಲಿ 62 ರನ್‌ಗೆ 7 ವಿಕೆಟ್ ಕಳೆದುಕೊಂಡಿತು. ಹೀಗಾಗಿ ಭಾರತಕ್ಕೆ ಹೊಸ ಚೆಂಡು ಮಾರಕವಾಯಿತು ಅಂತಾ ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.