ಪುಟ್ಬಾಲ್ ವೀಕ್ಷಿಸಲು ರಷ್ಯಾಗೆ ಪ್ರಯಾಣ ಬೆಳೆಸಿದ 60,000 ಬ್ರೆಜಿಲ್ ಅಭಿಮಾನಿಗಳು

     

Updated: Jun 9, 2018 , 11:25 AM IST
ಪುಟ್ಬಾಲ್ ವೀಕ್ಷಿಸಲು ರಷ್ಯಾಗೆ ಪ್ರಯಾಣ ಬೆಳೆಸಿದ 60,000 ಬ್ರೆಜಿಲ್ ಅಭಿಮಾನಿಗಳು

ರಿಯೊ ಡಿ ಜನೈರೊ: ಬ್ರೆಜಿಲ್ ನ  ಕನಿಷ್ಠ 60,000 ನಾಗರಿಕರು 2018 ರ ಫಿಫಾ ವಿಶ್ವಕಪ್ ನಲ್ಲಿ ರಾಷ್ಟ್ರೀಯ ತಂಡವನ್ನು ಬೆಂಬಲಿಸಲು ರಷ್ಯಾಕ್ಕೆ ಪ್ರಯಾಣಿಸುತ್ತಿದ್ದಾರೆ ಎಂದು ಬ್ರೆಜಿಲ್ ವಿದೇಶಾಂಗ ಸಚಿವ ಅಲೊಯ್ಸಿಯೊ ನುನ್ಸ್ ಹೇಳಿದ್ದಾರೆ.

"ಕನಿಷ್ಠ 60,000 ಬ್ರೆಜಿಲ್ ಜನರು ಈಗಾಗಲೇ ಟಿಕೆಟ್ಗಳನ್ನು ಖರೀದಿಸಿದ್ದಾರೆ, ಎಂದು ಗ್ಲೋಬೋ ಟಿವಿ ಸಚಿವರ ಹೇಳಿಕೆಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಸ್ತಾಪಿಸಿದೆ.ಕಝಾನ್, ಸಮಾರಾ, ರಾಸ್ಟೋವ್-ಆನ್-ಡಾನ್, ಸೋಚಿ ಮತ್ತು ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಐದು ತಾತ್ಕಾಲಿಕ ರಾಯಭಾರಿ ಕಚೇರಿಗಳನ್ನು ಬ್ರೆಜಿಲ್ ತೆರೆಯುತ್ತದೆ. ಪ್ರತಿ ದೂತಾವಾಸವು ರಷ್ಯಾ ಭಾಷೆ ಮಾತನಾಡುವವರನ್ನು  ಹಿಡಿದು ಕನಿಷ್ಟ ಮೂರು ಉದ್ಯೋಗಿಗಳನ್ನು ಹೊಂದಿರುತ್ತದೆ ಎನ್ನಲಾಗಿದೆ.

ಈಗಾಗಲೇ ಪಂದ್ಯಾವಳಿಯ ಸಮಯದ ಕಾನೂನು ಸಲಹೆಗಾರರನ್ನು ಬ್ರೆಜಿಲ್ ನೇಮಕ ಮಾಡಿಕೊಂಡಿದೆ ಎಂದು ಟಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಬ್ರೆಜಿಲ್ ವಿದೇಶಾಂಗ ಸಚಿವಾಲಯ ಮತ್ತು ಕ್ರೀಡಾ ಸಚಿವಾಲಯವು ಅಭಿಮಾನಿಗಳಿಗೆ ರಷ್ಯನ್ ಸಂಪ್ರದಾಯಗಳು ಮತ್ತು ಕಾನೂನುಗಳ ಬಗ್ಗೆ ಉತ್ತಮ ತಿಳುವಳಿಕೆ ನೀಡಲು 134-ಪುಟ ಮಾರ್ಗದರ್ಶಿ ನೀಡಿದೆ. ಇದನ್ನು ವಿಮಾನ ನಿಲ್ದಾಣಗಳಲ್ಲಿ ಮತ್ತು ರಷ್ಯಾದ ಬ್ರೆಜಿಲ್ನ ದೂತಾವಾಸ ಕಚೇರಿಗಳಲ್ಲಿ ವಿತರಿಸಲಿದೆ ಎಂದು ತಿಳಿದುಬಂದಿದೆ