Asia Cup 2022: ಏಷ್ಯಾಕಪ್-ಟಿ20ಯಲ್ಲಿ ಟೀಂ ಇಂಡಿಯಾದ ಈ ದಾಖಲೆಗಳನ್ನು ಕಂಡು ದಂಗಾದ ಪಾಕ್ ಪಡೆ

ಪ್ರಸ್ತುತ ಏಷ್ಯಾಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಅವರು ಋತುವಿನಲ್ಲಿ ಅಜೇಯರಾಗಿದ್ದಾರೆ. ಗುಂಪು ಹಂತದಲ್ಲಿ ತಮ್ಮ ಎರಡೂ ಪಂದ್ಯಗಳನ್ನು ಗೆದ್ದಿದ್ದಾರೆ.

Written by - Bhavishya Shetty | Last Updated : Sep 4, 2022, 03:27 PM IST
    • ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹಣಾಹಣಿ
    • ಏಷ್ಯಾಕಪ್ ನಲ್ಲಿ ಭಾರತ ಮಾಡಿರುವ ಸಾಧನೆ ಕಂಡು ದಂಗಾದ ಪಾಕಿಸ್ತಾನ
    • ಸಾಂಪ್ರದಾಯಿಕ ಎದುರಾಳಿ ತಂಡಗಳ ಹಣಾಹಣಿಗಾಗಿ ನೋಡಲು ಕ್ರಿಕೆಟ್ ಪ್ರೇಮಿಗಳ ಕಾತರ
Asia Cup 2022: ಏಷ್ಯಾಕಪ್-ಟಿ20ಯಲ್ಲಿ ಟೀಂ ಇಂಡಿಯಾದ ಈ ದಾಖಲೆಗಳನ್ನು ಕಂಡು ದಂಗಾದ ಪಾಕ್ ಪಡೆ title=
Asia Cup 2022

ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್-2022 ಪಂದ್ಯವು ಇಂದು ಸಂಜೆ 7.30ಕ್ಕೆ ದುಬೈನಲ್ಲಿ ನಡೆಯಲಿದೆ. ಈ ಎರಡು ಸಾಂಪ್ರದಾಯಿಕ ಎದುರಾಳಿ ತಂಡಗಳ ಹಣಾಹಣಿಗಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಶೇಷವೆಂದರೆ 8 ದಿನಗಳೊಳಗೆ ಈ ತಂಡಗಳು ಎರಡನೇ ಬಾರಿಗೆ ಹಣಾಹಣಿ ನಡೆಸಲಿವೆ. ಇದಕ್ಕೂ ಮುನ್ನ ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ದುಬೈನಲ್ಲಿಯೇ ಮುಖಾಮುಖಿಯಾಗಿದ್ದವು. ನಂತರ ಭಾರತ ಕೊನೆಯ ಓವರ್‌ನಲ್ಲಿ ರೋಚಕ ರೀತಿಯಲ್ಲಿ ಗೆಲುವು ಸಾಧಿಸಿತು.  ಇನ್ನು ಏಷ್ಯಾಕಪ್ ಟಿ20ಯಲ್ಲಿ ಭಾರತದ ದಾಖಲೆಗಳನ್ನು ಸರಿಗಟ್ಟಲು ಸಾಧ್ಯವಿಲ್ಲ.

ಇದನ್ನೂ ಓದಿ: IND vs Pak : ಪಾಕ್ ವಿರುದ್ಧ ಈ ಇಬ್ಬರು ಆಟಗಾರ ಬಗ್ಗೆ ಎಚ್ಚರಿವಹಿಸಬೇಕಾಗಿದೆ ಕ್ಯಾಪ್ಟನ್ ರೋಹಿತ್!

ಪ್ರಸ್ತುತ ಏಷ್ಯಾಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಅವರು ಋತುವಿನಲ್ಲಿ ಅಜೇಯರಾಗಿದ್ದಾರೆ. ಗುಂಪು ಹಂತದಲ್ಲಿ ತಮ್ಮ ಎರಡೂ ಪಂದ್ಯಗಳನ್ನು ಗೆದ್ದಿದ್ದಾರೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿದ್ದು,  ಎರಡನೇ ಪಂದ್ಯದಲ್ಲಿ ಹಾಂಕಾಂಗ್ ಅನ್ನು ಸೋಲಿಸಿದ್ದಾರೆ. ಈ ಮೂಲಕ ಎ ಗುಂಪಿನಲ್ಲಿ ತಂಡ ಅಗ್ರಸ್ಥಾನ ಗಳಿಸಿದೆ.

ಇನ್ನು ಪಾಕಿಸ್ತಾನದ ಬಗ್ಗೆ ಹೇಳುವುದಾದರೆ, ಅದು 2 ರಲ್ಲಿ ಒಂದು ಪಂದ್ಯವನ್ನು ಗೆದ್ದಿದೆ. ಆದರೆ, ಬಾಬರ್ ಅಜಂ ನೇತೃತ್ವದ ತಂಡ ಭಾರತಕ್ಕೆ ಕಠಿಣ ಪೈಪೋಟಿ ನೀಡಿತ್ತು. ಎರಡನೇ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು 155 ರನ್ ಗಳ ಬೃಹತ್ ಅಂತರದಿಂದ ಸೋಲಿಸಿತು.

ಭಾರತದ ಮೇಲುಗೈ:

ಈ ಎರಡು ತಂಡಗಳ ನಡುವಿನ ಮುಖಾಮುಖಿ ದಾಖಲೆಯ ಬಗ್ಗೆ ನಾವು ಮಾತನಾಡಿದರೆ, ಭಾರತವು ಮೇಲುಗೈ ಸಾಧಿಸಿದೆ. ರಾಜಕೀಯ ಮತ್ತು ಕಾರ್ಯತಂತ್ರದ ವಿವಾದಗಳ ಕಾರಣ, ಇಬ್ಬರ ನಡುವೆ ಹೆಚ್ಚಿನ ಟಿ20 ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ 10 ಟಿ20 ಪಂದ್ಯಗಳು ನಡೆದಿವೆ. ಟೀಮ್ ಇಂಡಿಯಾದ ಗೆಲುವು ಶೇಕಡಾವಾರು 80ರಷ್ಟಿದೆ.ಏಕೆಂದರೆ ಅದು 10 ರಲ್ಲಿ 8 ಬಾರಿ ಪಾಕಿಸ್ತಾನವನ್ನು T20 ನಲ್ಲಿ ಸೋಲಿಸಿದೆ. ಪಾಕಿಸ್ತಾನ ಕೇವಲ 2 ಸಂದರ್ಭಗಳಲ್ಲಿ ಮಾತ್ರ ಗೆದ್ದಿದೆ. ಪಾಕಿಸ್ತಾನ ವಿರುದ್ಧ ಭಾರತ ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ.

ಇದನ್ನೂ ಓದಿ: IPL 2023 : 2023 ರಲ್ಲಿ ಸಿಎಸ್​​ಕೆ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ ಧೋನಿ : ಟೀಂ ಸಿಇಒ ಸ್ಪಷ್ಟನೆ

ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸೋತಿಲ್ಲ:

ಭಾರತ ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ತಂಡವಾಗಿದೆ. 7 ಬಾರಿ ಪ್ರಶಸ್ತಿಯನ್ನು ವಶಪಡಿಸಿಕೊಂಡಿದೆ. ಟಿ20 ಮಾದರಿಯಲ್ಲಿ ಏಷ್ಯಾಕಪ್‌ನಲ್ಲಿ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ. ಈ ಹಿಂದೆ 2016ರಲ್ಲಿ ಟಿ20 ಮಾದರಿಯಲ್ಲಿ ಏಷ್ಯಾಕಪ್‌ ನಡೆದಿತ್ತು. ಆಗಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಟೀಂ ಇಂಡಿಯಾ ಗೆದ್ದಿತ್ತು. ಭಾರತ ತಂಡದ ನಾಯಕತ್ವವನ್ನು ಅನುಭವಿ ಮಹೇಂದ್ರ ಸಿಂಗ್ ಧೋನಿ ನಿಭಾಯಿಸಿದ್ದರು. ಮೀರ್ಪುರದಲ್ಲಿ ನಡೆದ ಆ ಪಂದ್ಯದಲ್ಲಿ 51 ಎಸೆತಗಳಲ್ಲಿ 49 ರನ್ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯದ ಶ್ರೇಷ್ಠ ಪ್ರಶಸ್ತಿ ಪಡೆದರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News