Video : ಈ 4 ಅಕ್ಷರ ಪದ ಹೇಳಲು ನಾಚಿನೀರಾದ ರಾಹುಲ್ ದ್ರಾವಿಡ್

ಪಾಕಿಸ್ತಾನ್ ತಂಡವು ಉತ್ತಮ ಬೌಲರ್​ಗಳನ್ನು ಹೊಂದಿದ್ದಾರೆ ಎಂಬುದನ್ನು ನಾನು ಗೌರವಿಸುತ್ತೇನೆ.

Written by - Channabasava A Kashinakunti | Last Updated : Sep 4, 2022, 06:05 PM IST
  • ಸೂಪರ್ 4 ಹಂತದ ಭಾರತ-ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯ
  • ಈ 4 ಅಕ್ಷರ ಆ ಪದ ಬಳಸಲು ನಾಚಿಕೊಂಡ ದ್ರಾವಿಡ್
  • ದ್ರಾವಿಡ್ ಜೋರಾಗಿ ನಕ್ಕರು
Video : ಈ 4 ಅಕ್ಷರ ಪದ ಹೇಳಲು ನಾಚಿನೀರಾದ ರಾಹುಲ್ ದ್ರಾವಿಡ್ title=

ದುಬೈ : ಪಾಕಿಸ್ತಾನ್ ತಂಡವು ಉತ್ತಮ ಬೌಲರ್​ಗಳನ್ನು ಹೊಂದಿದ್ದಾರೆ ಎಂಬುದನ್ನು ನಾನು ಗೌರವಿಸುತ್ತೇನೆ. ಹಾಗೆಯೇ ನಮ್ಮಲ್ಲೂ ಅತ್ಯುತ್ತಮ ಬೌಲರ್​ಗಳಿದ್ದಾರೆ. ಏಕೆಂದರೆ ನಮ್ಮ ಬೌಲರ್​ಗಳೂ ಕೂಡ ರಿಸಲ್ಟ್ ನಿರ್ಧರಿಸುವಂತಹ ಪ್ರದರ್ಶನ ನೀಡಿದ್ದಾರೆ ಎಂದು ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. 

ಏಷ್ಯಾ ಕಪ್ 2022 ರ ಸೂಪರ್ 4 ಹಂತದ ಭಾರತ-ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಪಾಕ್ ಪತ್ರಕರ್ತರು ಬೌಲಿಂಗ್ ಲೈನ್ ಅಪ್ ಗಳ ಬಗ್ಗೆ ಪ್ರಶ್ನಿಸಿದರು, ಅವರ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಕೋಚ್ ರಾಹುಲ್ ದ್ರಾವಿಡ್ ಈ 4 ಅಕ್ಷರ ಆ ಪದವನ್ನು ಬಳಸಲು ನಾಚಿಕೊಂಡರು. ನಾನು ಆ ಪದ ಬಲಿಸಿದ್ರೆ ಚನ್ನಾಗಿತ್ತು. ಆದ್ರೆ, ಅದನ್ನು ಹೇಳಲು ಆಗುವುದಿಲ್ಲ ಎಂದು ದ್ರಾವಿಡ್ ಜೋರಾಗಿ ನಕ್ಕರು ನಂತರ ಪತ್ರಕರ್ತರು ಅಂತಹ ಪದವೇ ಎಂದು ಪ್ರಶ್ನಿಸಿದರು. ಇದಕ್ಕೆ ನಗುತ್ತಾ ಉತ್ತರಿಸಿದ ದ್ರಾವಿಡ್, ಹೌದು, ಎಸ್ (S)​ ನಿಂದ ಆರಂಭವಾಗುತ್ತದೆ. ಅಲ್ಲದೆ ಅದು 4 ಅಕ್ಷರಗಳ ಪದ ಎಂದು ಸುಳಿವು ನೀಡಿದರು.

ಇದನ್ನೂ ಓದಿ : Asia Cup 2022 ರಲ್ಲಿ ಹೆಚ್ಚು ರನ್ ಗಳಿಸಿದ್ದು ರೋಹಿತ್-ವಿರಾಟ್ ಅಲ್ಲ, ಈ ಆಟಗಾರ!

ಹಾಗೆ ಮುಂದುವರೆದು ಟೀಂ ಇಂಡಿಯಾ ಬೌಲಿಂಗ್ ಅಟ್ಯಾಕ್ ಗ್ಲಾಮರಸ್ ಆಗಿ ಕಾಣದೇ ಇರಬಹುದು. ರಿಸಲ್ಟ್ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದರು.

ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ದ್ರಾವಿಡ್ ಈ ಸಂಭಾಷಣೆ ವೇಳೆ ಬಳಸಲು ಮುಂದಾಗಿದ್ದ ಪದ ಯಾವುದು ಎಂಬ ಕುತೂಹಲ ಫ್ಯಾನ್ಸ್ ಗಳಲ್ಲಿ ಮೂಡಿದೆ.

ಸಧ್ಯ ದ್ರಾವಿಡ್ ಸುದ್ದಿಗೋಷ್ಠಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಅಂದಹಾಗೆ ದ್ರಾವಿಡ್ ಬಳಸಲು ಹಿಂಜರಿದ ಪದ ಯಾವುದು? ಎಂಬುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಉತ್ತರಿಸಿದ್ದಾರೆ. ಈ ಕೆಳಗಿದೆ ನೋಡಿ..

ಇದನ್ನೂ ಓದಿ : IND vs Pak : ಪಾಕ್ ವಿರುದ್ಧ ಈ ಇಬ್ಬರು ಆಟಗಾರ ಬಗ್ಗೆ ಎಚ್ಚರಿವಹಿಸಬೇಕಾಗಿದೆ ಕ್ಯಾಪ್ಟನ್ ರೋಹಿತ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News