ಸತತ ಎರಡನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಜ್: ಟೆನಿಸ್ ಇತಿಹಾಸದಲ್ಲಿ ಅಪರೂಪದ ಸಾಧನೆ

Carlos Alcaraz: ವಿಂಬಲ್ಡನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ 2024ರ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಇತಿಹಾಸದ ಪುಟಗಳಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇದು ಅಲ್ಕರಾಜ್ ಅವರ ಸತತ ಎರಡನೇ ವಿಂಬಲ್ಡನ್ ಪ್ರಶಸ್ತಿಯಾಗಿದೆ.

Written by - Yashaswini V | Last Updated : Jul 15, 2024, 08:52 AM IST
  • ಟೆನಿಸ್ ಇತಿಹಾಸದಲ್ಲಿ ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಕಾರ್ಲೋಸ್ ಅಲ್ಕರಾಜ್ ಪಾತ್ರರಾಗಿದ್ದಾರೆ.
  • ಈ ಮೂಲಕ 21 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲೇ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದ ಓಪನ್ ಎರಾ ದಾಖಲೆಯನ್ನು ಸರಿಗಟ್ಟಿದರು.
ಸತತ ಎರಡನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಜ್: ಟೆನಿಸ್ ಇತಿಹಾಸದಲ್ಲಿ ಅಪರೂಪದ ಸಾಧನೆ  title=

Carlos Alcaraz: ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ಭಾನುವಾರ (ಜುಲೈ 14) ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ (Wimbledon Men's Singles Final) ಪಂದ್ಯದಲ್ಲಿ ಏಳು ಬಾರಿ ಚಾಂಪಿಯನ್ ನೋವಾಕ್ ಜೊಕೊವಿಕ್ ವಿರುದ್ಧ ನೇರ ಸೆಣಸಾಟ ನಡೆಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ (Carlos Alcaraz), ನೊವಾಕ್‌ ಜೊಕೊವಿಕ್‌ ಅವರನ್ನು 6-2, 6-2, 7-6 ಸೆಟ್‌ಗಳಿಂದ ಸೋಲಿಸುವ ಮೂಲಕ ಸತತ ಎರಡನೇ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು (Wimbledon Grand Slam Title) ಗೆದ್ದುಕೊಂಡರು.  ಗಮನಾರ್ಹವಾಗಿ ಇದು ಕಾರ್ಲೋಸ್ ಅಲ್ಕರಾಜ್ ಅವರ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ. 2023 ರಲ್ಲಿ ಮೊದಲ ಬಾರಿಗೆ, ಕಾರ್ಲೋಸ್ ಅಲ್ಕರಾಜ್ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ತಮ್ಮ ಮೊದಲ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದರು. 

ಅದ್ಭುತ ವಿಶ್ವದಾಖಲೆ ನಿರ್ಮಿಸಿದ ಕಾರ್ಲೋಸ್ ಅಲ್ಕರಾಜ್: 
ವಿಂಬಲ್ಡನ್ ಫೈನಲ್‌ನಲ್ಲಿ  ನೊವಾಕ್ ಜೊಕೊವಿಕ್ (Novak Djokovic) ಅವರನ್ನು ಸೋಲಿಸುವ ಮೂಲಕ 2024ರ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್  ಹಲವು ದಾಖಲೆಗಳನ್ನು ಮುರಿದಿದ್ದಾರೆ. ಈ ಗೆಲುವಿನೊಂದಿಗೆ ಕಾರ್ಲೋಸ್ ಅಲ್ಕರಾಜ್ ಮತ್ತೊಮ್ಮೆ ವಿಶ್ವದ ನಂಬರ್ ಒನ್ ಆಟಗಾರ ಎನಿಸಿಕೊಂಡಿದ್ದಾರೆ. ಈ ವರ್ಷವೇ, ಅಲ್ಕಾರಾಜ್ ಅವರು ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸುವ ಮೂಲಕ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದರು. 

ಇದನ್ನೂ ಓದಿ- ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದ್ರೆ ಭಾರತವನ್ನೇ ಮರೆಯುವಂತೆ ಮಾಡುತ್ತೇವೆ! ಪಾಕ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ

ಓಪನ್ ಎರಾ ದಾಖಲೆ: 
ಟೆನಿಸ್ ಇತಿಹಾಸದಲ್ಲಿ ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಕಾರ್ಲೋಸ್ ಅಲ್ಕರಾಜ್ ಪಾತ್ರರಾಗಿದ್ದಾರೆ. ಈ ಮೂಲಕ 21 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲೇ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದ ಓಪನ್ ಎರಾ ದಾಖಲೆಯನ್ನು ಸರಿಗಟ್ಟಿದರು.

ಅಲ್ಕರಾಜ್ ವಿಶ್ವ ನಂ.3 ವೃತ್ತಿಪರ ಯುಗದಲ್ಲಿ ಫೆಡರರ್ ನಂತರ ತನ್ನ ಮೊದಲ ನಾಲ್ಕು ಪ್ರಮುಖ ಫೈನಲ್‌ಗಳಲ್ಲಿ ಗೆಲುವು ದಾಖಲಿಸಿದ ಎರಡನೇ ಆಟಗಾರನಾಗಿದ್ದಾನೆ. 

ಇದನ್ನೂ ಓದಿ- “ನಾನು ಹೋರಡುತ್ತೇನೆ; ನೀವು ನನ್ನನ್ನು ನೋಡಲೂ ಸಾಧ್ಯವಾಗುವುದಿಲ್ಲ”- ಭಾರತ ತೊರೆಯುವ ವದಂತಿ ಮಧ್ಯೆ ವಿರಾಟ್ ಕೊಹ್ಲಿ ಸೆನ್ಸೇಷನಲ್ ಹೇಳಿಕೆ!

ಮತ್ತೊಮ್ಮೆ ವಿಶ್ವದ ನಂಬರ್ ಒನ್ ಆಟಗಾರ ಎನಿಸಿಕೊಂಡ ಕಾರ್ಲೋಸ್ ಅಲ್ಕರಾಜ್: 
2023 ರಲ್ಲಿ ಮೊದಲ ಬಾರಿಗೆ, ಕಾರ್ಲೋಸ್ ಅಲ್ಕರಾಜ್ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ತಮ್ಮ ಮೊದಲ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದ ಕಾರ್ಲೋಸ್ ಅಲ್ಕರಾಜ್, ಈ ಗೆಲುವಿನೊಂದಿಗೆ ಮತ್ತೊಮ್ಮೆ ವಿಶ್ವದ ನಂಬರ್ ಒನ್ ಆಟಗಾರ ಎನಿಸಿಕೊಂಡಿದ್ದಾರೆ.  

ಈ ಸಾಧನೆ ಮಾಡಿದ ಸ್ಪೇನ್‌ನ ಎರಡನೇ ಆಟಗಾರ: 
ರಾಫೆಲ್ ನಡಾಲ್ ನಂತರ, ಕಾರ್ಲೋಸ್ ಅಲ್ಕರಾಜ್ ಒಂದಕ್ಕಿಂತ ಹೆಚ್ಚು ಬಾರಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಸ್ಪೇನ್‌ನ ಎರಡನೇ ಆಟಗಾರರಾದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News