ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅನುಭವಿ ಸೌರವ್ ಘೋಸಾಲ್ ಸ್ಕ್ವಾಷ್‌ನಲ್ಲಿ ಕಂಚಿನ ಪದಕ ಗೆಲ್ಲುವುದರೊಂದಿಗೆ ವೈಯಕ್ತಿಕ ವಿಭಾಗದಲ್ಲಿ ಪದಕವನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಮಾಜಿ ಚಾಂಪಿಯನ್ ಜೇಮ್ಸ್ ವಿಲ್‌ಸ್ಟ್ರೋಪ್ ಅವರನ್ನು 11-6 11-1 11-4 ರಿಂದ ಸೋಲಿಸುವ ಮೂಲಕ ಅವರು ಈಗ ದಾಖಲೆಯನ್ನು ನಿರ್ಮಿಸಿದ್ದಾರೆ.
2006 - First Indian to win Asian Games Medal
2013 - First Indian to reach Quarter Finals of World Championships
2022 - First Indian to win CWG Individual MedalRunning the show since ages, SAURAV LEGEND GHOSHAL for you! https://t.co/vxbx2gD80G
— Prithvi (@Eighty7_Fifty8) August 3, 2022
ಈ ಸಾಧನೆಯ ನಂತರ ಅವರು ಆನಂದ ಭಾಷ್ಪವನ್ನು ಸುರಿಸಿದರು. ಭಾರತ ಇದುವರೆಗೂ ಕೂಡ ಸ್ಕ್ವಾಷ್‌ನ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದಿರಲಿಲ್ಲ.ಈಗ ಮಾಜಿ ಚಾಂಪಿಯನ್‌ನನ್ನು ಸೋಲಿಸುವ ಮೂಲಕ ಘೋಸಾಲ್ ದಾಖಲೆಯನ್ನು ನಿರ್ಮಿಸಿದ್ದಾರೆ.ಈ ಪದಕದೊಂದಿಗೆ ಭಾರತ ಈಗ ಕ್ರೀಡಾಕೂಟದಲ್ಲಿ ಒಟ್ಟು 15 ಪದಕಗಳನ್ನು ಗೆದ್ದಂತಾಗಿದೆ.
ಇದನ್ನೂ ಓದಿ: ಬೆಲ್ಲದ ಮೇಲಿನ GST ಖಂಡಿಸಿ ರೈತರಿಂದ ಬೃಹತ್ ಪ್ರತಿಭಟನೆ
ಘೋಸಾಲ್ ಅವರು ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 3-0 (11-9 11-4 11-1) ನ್ಯೂಜಿಲೆಂಡ್‌ನ ಪಾಲ್ ಕೋಲ್ ವಿರುದ್ಧ ಸೋತಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.