close

News WrapGet Handpicked Stories from our editors directly to your mailbox

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಈಗ ದುಬಾರಿ ಕಾರಿನ ಒಡೆಯ!

ಮರ್ಸಿಡೀಸ್ ಬೆಂಝ್ ಜಿಎಲ್‍ಇ ಕಾರಿನ ಬೇಸ್ ವರ್ಷನ್ 250 ಡಿ ಬೆಲೆ 61.75 ಲಕ್ಷ ರೂ.ಗಳಾಗಿದ್ದು, ಟಾಪ್-ಎಂಡ್ 350 ಜಿ ರೂಪಾಂತರದ ದೆಹಲಿಯ ಎಕ್ಸ್ ಶೋರೂಮ್ ಬೆಲೆ 77.82 ಲಕ್ಷ ರೂ. ಗಳಾಗಿವೆ.  

Updated: Aug 5, 2019 , 05:22 PM IST
ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಈಗ ದುಬಾರಿ ಕಾರಿನ ಒಡೆಯ!

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಟೀಂ ಇಂಡಿಯಾದ ಅಂಡರ್ 19 ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ದುಬಾರಿ ಕಾರಾದ ಮರ್ಸಿಡೀಸ್ ಬೆಂಝ್ ಜಿಎಲ್‍ಇ ಖರೀದಿಸಿದ್ದಾರೆ. 

ಇತ್ತೀಚೆಗಷ್ಟೇ ಬಾಲಿವುಡ್ ನಟಿ ಕಂಗನಾ ರಾವತ್ ಮರ್ಸಿಡೀಸ್ ಬೆಂಝ್ ಜಿಎಲ್‍ಇ ಕಾರು ಖರೀದಿಸಿ, ಫೋಟೋಗೆ ಫೋಸ್ ನೀಡಿದ್ದರು. ಈ ಬೆನ್ನಲ್ಲೇ ರಾಹುಲ್ ದ್ರಾವಿಡ್ ಸಹ ಈ ದುಬಾರಿ ಕಾರು ಖರೀದಿಸಿದ್ದಾರೆ. ಅಷ್ಟೇ ಅಲ್ಲ, ಕಾರಿನೊಳಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮವನ್ನು ಆಚರಿಸಿದ್ದಾರೆ. 

ಅಷ್ಟಕ್ಕೂ ಇದು ದ್ರಾವಿಡ್ ಒಡೆತನದ ಮೊದಲ ಐಷಾರಾಮಿ ಕಾರೇನೂ ಅಲ್ಲ. ಮ್ಯಾನ್-ಆಫ್-ದಿ-ಮ್ಯಾಚ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಹ್ಯುಂಡೈ ಟಕ್ಸನ್ ಅನ್ನು ಪಡೆದಿದ್ದ ದ್ರಾವಿಡ್ ಬಳಿ ಆಡಿ ಕ್ಯೂ 5 ಐಷಾರಾಮಿ ಎಸ್‌ಯುವಿ ಮತ್ತು ಬಿಎಂಡಬ್ಲ್ಯು 5-ಸೀರಿಸ್ ಸೆಡಾನ್ ನಂತಹ ಐಶಾರಾಮಿ ವಾಹನಗಳಿವೆ. ಆದರೂ, ಇದು ದ್ರಾವಿಡ್ ಒಡೆತನದ ಮೊದಲ ಮೊದಲ ಮರ್ಸಿಡಿಸ್ ಬೆಂಜ್ ಕಾರಾಗಿದೆ. 

ಮರ್ಸಿಡೀಸ್ ಬೆಂಝ್ ಜಿಎಲ್‍ಇ ಕಾರಿನ ಬೇಸ್ ವರ್ಷನ್ 250 ಡಿ ಬೆಲೆ 61.75 ಲಕ್ಷ ರೂ.ಗಳಾಗಿದ್ದು, ಟಾಪ್-ಎಂಡ್ 350 ಜಿ ರೂಪಾಂತರದ ದೆಹಲಿಯ ಎಕ್ಸ್ ಶೋರೂಮ್ ಬೆಲೆ 77.82 ಲಕ್ಷ ರೂ. ಗಳಾಗಿವೆ.