ಡೇವಿಡ್ ವಾರ್ನರ್ ತ್ರಿಶತಕ: ಹಲವು ಟೆಸ್ಟ್ ದಾಖಲೆಗಳು ಪುಡಿ

ಅಡಿಲೇಡ್‌ನಲ್ಲಿ ಶನಿವಾರ ನಡೆದ ಎರಡನೇ ಟೆಸ್ಟ್‌ನ ಎರಡನೇ ದಿನ ಡೇವಿಡ್ ವಾರ್ನರ್ ಪಾಕಿಸ್ತಾನ ವಿರುದ್ಧ ತ್ರಿಶತಕ ಬಾರಿಸಿ ಹಲವು ದಾಖಲೆಗಳನ್ನು ಅಳಿಸಿ ಹಾಕಿದರು. 

Updated: Nov 30, 2019 , 01:54 PM IST
ಡೇವಿಡ್ ವಾರ್ನರ್ ತ್ರಿಶತಕ: ಹಲವು ಟೆಸ್ಟ್ ದಾಖಲೆಗಳು ಪುಡಿ
Photo courtesy: Twitter

ನವದೆಹಲಿ: ಅಡಿಲೇಡ್‌ನಲ್ಲಿ ಶನಿವಾರ ನಡೆದ ಎರಡನೇ ಟೆಸ್ಟ್‌ನ ಎರಡನೇ ದಿನ ಡೇವಿಡ್ ವಾರ್ನರ್ ಪಾಕಿಸ್ತಾನ ವಿರುದ್ಧ ತ್ರಿಶತಕ ಬಾರಿಸಿ ಹಲವು ದಾಖಲೆಗಳನ್ನು ಅಳಿಸಿ ಹಾಕಿದರು. 

33 ರ ಹರೆಯದ ಎಡಗೈ ಬ್ಯಾಟ್ಸ್‌ಮನ್ ಹಗಲು ರಾತ್ರಿ ಟೆಸ್ಟ್ ಕ್ರಿಕೆಟ್‌ ಪಂದ್ಯದಲ್ಲಿ ರನ್ ಗಳಿಸಿದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಇದಕ್ಕೂ ಮೊದಲು ಅಜರ್ ಅಲಿ ಗುಲಾಬಿ ಚೆಂಡಿನ ವಿರುದ್ಧ 456 ರನ್ ಗಳಿಸಿದ ದಾಖಲೆ ಹೊಂದಿದ್ದರು. 2019 ರಲ್ಲಿ ಅತಿ ಹೆಚ್ಚು ಟೆಸ್ಟ್ ಸ್ಕೋರ್ ದಾಖಲಿಸಿದ ಭಾರತೀಯ ನಾಯಕ ವಿರಾಟ್ ಕೊಹ್ಲಿಯನ್ನು ಡೇವಿಡ್ ವಾರ್ನರ್ ಮೀರಿಸಿದ್ದಾರೆ. ವಾರ್ನರ್ 37 ಬೌಂಡರಿಗಳು ಸೇರಿದಂತೆ 389 ಎಸೆತಗಳಲ್ಲಿ ಡೇವಿಡ್ ವಾರ್ನರ್ ಮಾಂತ್ರಿಕ ಟ್ರಿಪಲ್ ಅಂಕಿಗಳನ್ನು ತಲುಪಿದರು.

ಆಸ್ಟ್ರೇಲಿಯಾ 589/3 ಕ್ಕೆ ತಮ್ಮ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು, ಇದು ಹಗಲು-ರಾತ್ರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೊತ್ತವಾಗಿದೆ. ಡೇವಿಡ್ ವಾರ್ನರ್ 418 ಎಸೆತಗಳಲ್ಲಿ 335 ರನ್‌ ಗಳಿಸಿ ಅಜೇಯರಾಗಿ ಉಳಿದರು, ಇದರಲ್ಲಿ 39 ಬೌಂಡರಿಗಳು ಒಂದು ಸಿಕ್ಸರ್ ಸೇರಿವೆ. ಈ ಹಿಂದೆ 2015 ರಲ್ಲಿ ಪರ್ತ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 253 ರನ್ ಗಳಿಸಿದ್ದು ಅತ್ಯುತ್ತಮ ಮೊತ್ತವಾಗಿತ್ತು.

ಇದೇ ವೇಳೆ ವಾರ್ನರ್ ಅಜರ್ ಅಲಿಯ 302 ರನ್ ಅನ್ನು ಹಿಂದಿಕ್ಕಿ ಹಗಲು-ರಾತ್ರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಕೋರ್ ದಾಖಲಿಸಿದರು. ಅಡಿಲೇಡ್ ಓವಲ್‌ನಲ್ಲಿ ತ್ರಿಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ವಾರ್ನರ್ ಪಾತ್ರರಾದರು. 1932 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಡಾನ್ ಬ್ರಾಡ್ಮನ್ 299 ಗಳಿಸಿದ್ದರು.