ವಿರಾಟ್ ಕೊಹ್ಲಿ ಫಿಟ್ನೆಸ್ ಕ್ರಾಂತಿ ಆಫ್ಘಾನ್ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದು ಹೇಗೆ ಗೊತ್ತಾ?

ಹೌದು,ವಿರಾಟ್ ಕೊಹ್ಲಿ  ಕ್ರಿಕೆಟ್ ಮೈದಾನಕ್ಕೆ ಇಳಿದರೆ ಸಾಕು ಅದು ಟೆಸ್ಟ್ ಇರಲಿ,ಏಕದಿನ ಇರಲಿ ಅಥವಾ ಟ್ವೆಂಟಿ ಇರಲಿ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಅವರು ಅಚ್ಚಳಿಯದ ದಾಪುಗಾಲು. ಹಾಗಾದಾರೆ ಈ ರೀತಿ ಪ್ರದರ್ಶನ ನೀಡಲು ಹೇಗೆ ಸಾಧ್ಯ ಅಂತಿರಾ? ಇದಕ್ಕೆ ಕಾರಣ ಕೊಹ್ಲಿಯಲ್ಲಿರುವ ಫಿಟ್ ನೆಸ್ ಅವರ ಎಲ್ಲ ದಾಖಲೆಗಳ ಹಿಂದಿರುವ ಗುಟ್ಟು.

Last Updated : Sep 22, 2018, 11:18 AM IST
ವಿರಾಟ್ ಕೊಹ್ಲಿ ಫಿಟ್ನೆಸ್ ಕ್ರಾಂತಿ ಆಫ್ಘಾನ್ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದು ಹೇಗೆ ಗೊತ್ತಾ?  title=

ನವದೆಹಲಿ: ಹೌದು,ವಿರಾಟ್ ಕೊಹ್ಲಿ  ಕ್ರಿಕೆಟ್ ಮೈದಾನಕ್ಕೆ ಇಳಿದರೆ ಸಾಕು ಅದು ಟೆಸ್ಟ್ ಇರಲಿ,ಏಕದಿನ ಇರಲಿ ಅಥವಾ ಟ್ವೆಂಟಿ ಇರಲಿ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಅವರು ಅಚ್ಚಳಿಯದ ದಾಪುಗಾಲು. ಹಾಗಾದಾರೆ ಈ ರೀತಿ ಪ್ರದರ್ಶನ ನೀಡಲು ಹೇಗೆ ಸಾಧ್ಯ ಅಂತಿರಾ? ಇದಕ್ಕೆ ಕಾರಣ ಕೊಹ್ಲಿಯಲ್ಲಿರುವ ಫಿಟ್ ನೆಸ್ ಅವರ ಎಲ್ಲ ದಾಖಲೆಗಳ ಹಿಂದಿರುವ ಗುಟ್ಟು.

ಈಗ ಇನ್ನೊಂದು ವಿಷಯವೇನೆಂದರೆ ಇತ್ತೀಚೆಗಷ್ಟೇ ಕ್ರಿಕೆಟ್ ಪಾದಾರ್ಪಣೆ ಮಾಡಿರುವ ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರರಿಗೆ ಫಿಟ್ ನೆಸ್ ನಲ್ಲಿ ಕೊಹ್ಲಿ ರೋಲ್ ಮಾಡಲ್ ಅಂತೆ! ಅದಕ್ಕೆ ಅವರು ಸಹಿತ ಕೊಹ್ಲಿ ಮಾದರಿಯಲ್ಲಿ ಫಿಟ್ ನೆಸ್ ಮಂತ್ರಕ್ಕೆ ಮೊರೆಹೋಗಿದ್ದಾರೆ.

ಇತ್ತೀಚಿಗೆ ಬಾಂಗ್ಲಾದೇಶದ ವಿರುದ್ದ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅಫ್ಘಾನಿಸ್ತಾನ್ ತಂಡದ ರಶಿದ್ ಖಾನ್ ಪಂದ್ಯದ ನಂತರ ಮಾತನಾಡಿದ ಅವರು "ನಾವು ವೃತ್ತಿಪರ ಆಟಗಾರರಾಗಿರುವುದರಿಂದ ಮುಂದಿನ ಆಟಕ್ಕೆ ಸಿದ್ದರಾಗಿರಬೇಕು. ಅದು 16 ಗಂಟೆ 10 ಅಥವಾ 12 ಗಂಟೆಯಾಗಲಿ ಸಿದ್ದರಾಗಿರಬೇಕು. ಕಳೆದ ಆರು ತಿಂಗಳಿಂದ ನಾವು ನಮ್ಮ ಫಿಟ್ ನೆಸ್ ನಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದ್ದೇವೆ "ಎಂದು ತಿಳಿಸಿದ್ದರು.

ಈಗ ಅಫ್ಘಾನಿಸ್ತಾನ್ ತಂಡದ ಟೀಮ್ ಮ್ಯಾನೇಜರ್ ಹೇಳುವಂತೆ " ಎಲ್ಲ ಆಟಗಾರರು ಸಹಿತ ಅವರದೆ ಆದರ್ಶ ವ್ಯಕ್ತಿಗಳನ್ನು ಹೊಂದಿದ್ದಾರೆ,ಅವರಂತೆ ಕೂಡ ಅನುಸರಿಸುತ್ತಾರೆ.ಬಹುಷಃ ರಶಿದ್ ಅವರ ಫಿಟ್ನೆಸ್ ವಿರಾಟ್ ಕೊಹ್ಲಿ ಅವರನ್ನು  ಪಾಲಿಸುವಂತೆ ಕಾಣಿಸುತ್ತದೆ. ಏಕೆಂದರೆ ವಿರಾಟ್ ಬಹಳ ಫಿಟ್ ಆಗಿರುವಂತಹ ಕ್ರಿಕೆಟರ್,ಅದು ರಶಿದ್ ಗೆ ಕೂಡ ತಿಳಿದಿದೆ. ಎಂದು ಅವರು" ತಿಳಿಸಿದ್ದಾರೆ.

Trending News