ಪಂದ್ಯದ ವೇಳೆ ಬೌಲರ್ ಗೆ ಮುತ್ತಿಟ್ಟ ನಾಯಕ, ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ ವಿಡಿಯೋ

ಬಿಗ್ ಬ್ಯಾಷ್ ಲೀಗ್ (BBL) ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಆಡುತ್ತಿದೆ. ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ಲೈವ್ ಪಂದ್ಯದ ವೇಳೆ ಕಂಡು ಬಂದ ದೃಶ್ಯ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ.  

Written by - Ranjitha R K | Last Updated : Dec 23, 2021, 12:59 PM IST
  • ಮೈದಾನದಲ್ಲೇ ಸಹ ಆಟಗಾರನಿಗೆ ಮುತ್ತು
  • ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ವಿಡಿಯೋ
  • ಎಲ್ಲರನ್ನು ಆಶ್ಚರ್ಯಗೊಳಿಸಿದ ದೃಶ್ಯ
ಪಂದ್ಯದ ವೇಳೆ ಬೌಲರ್ ಗೆ ಮುತ್ತಿಟ್ಟ ನಾಯಕ, ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ ವಿಡಿಯೋ title=
ಮೈದಾನದಲ್ಲೇ ಸಹ ಆಟಗಾರನಿಗೆ ಮುತ್ತು (photo twitter)

ನವದೆಹಲಿ : ಆಸ್ಟ್ರೇಲಿಯಾದಲ್ಲಿ  ಈಗ ಬಿಗ್ ಬ್ಯಾಷ್ ಲೀಗ್ (BBL) ನಡೆಯುತ್ತಿದೆ. ಕೆಲವೊಮ್ಮೆ ಆಟಕ್ಕಿಂತ ಆಟದ ಮಧ್ಯೆ ನಡೆಯುವಂಥ ಘಟನೆಗಳೇ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವಿನ ಪಂದ್ಯದಲ್ಲಿ ನಡೆದ ಇಂಥಹ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಇಲ್ಲಿ . ಅಡಿಲೇಡ್ ಸ್ಟ್ರೈಕರ್ಸ್  ನಾಯಕ ಪೀಟರ್ ಸಿಡ್ಲ್ ತಮ್ಮ ಬೌಲರ್‌ಗೆ ಮೈದಾನದಲ್ಲೇ ಮುತ್ತಿಕ್ಕುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ. 

ಕ್ರಿಕೆಟ್ ಮೈದಾನದಲ್ಲೇ ಮುತ್ತಿಟ್ಟ ನಾಯಕ :   
ಬಿಗ್ ಬ್ಯಾಷ್ ಲೀಗ್ (BBL) ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಆಡುತ್ತಿದೆ. ಅಡಿಲೇಡ್ ಸ್ಟ್ರೈಕರ್ಸ್ (Adelaide Strikers) ಮತ್ತು ಸಿಡ್ನಿ ಸಿಕ್ಸರ್ಸ್ (Sydney Sixers) ನಡುವೆ ಪಂದ್ಯ ನಡೆಯುತ್ತಿತ್ತು. ಈ ಲೈವ್ ಪಂದ್ಯದ ವೇಳೆ ಕಂಡು ಬಂದ ದೃಶ್ಯ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ. ಅಲ್ಲದೆ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿದೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡ 147 ರನ್ ಗಳನ್ನು ಕಲೆ ಹಾಕುವಲ್ಲಿ ಸಫಲವಾಯಿತು. ಈ ಗುರಿಯನ್ನು ಬೆನ್ನಟ್ಟಿದ ಸಿಡ್ನಿ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಅಡಿಲೇಡ್ ನಾಯಕ ಪೀಟರ್ ಸಿಡ್ಲ್  (Peter Siddle)ಮೊದಲ ಓವರ್ ಅನ್ನು ಬೌಲರ್ ಡೇನಿಯಲ್ ವೊರಾಲ್ ಗೆ (Daniel Worrall)ನೀಡಿದರು. ಈ ವೇಳೆ, ಪೀಟರ್ ಬೌಲರ್ ಡೇನಿಯಲ್ ವೊರಾಲ್ ಕೆನ್ನೆಗೆ ಮುತ್ತಿಟ್ಟ ದೃಶ್ಯ ಕಂಡು ಬಂತು. 

ಇದನ್ನೂ ಓದಿ : IPL 2022 Mega Auctionನಲ್ಲಿ ಈ ಆಟಗಾರರಿಗೆ ಖರೀದಿದಾರರೇ ಇಲ್ಲ, ಮುಗಿದೇ ಹೋಯಿತು ಇವರ ವೃತ್ತಿ ಜೀವನ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋ :
ಲೈವ್ ಪಂದ್ಯದ ಸಮಯದಲ್ಲಿ ಪೀಟರ್ ಸಿಡ್ಲ್ ಅವರು ತಮ್ಮ ಸಹ ಬೌಲರ್ ಡೇನಿಯಲ್ ವೊರೆಲ್ ಅವರನ್ನು ಚುಂಬಿಸಿದ್ದು, ನಂತರ ಇಬ್ಬರೂ ಮಸ್ತಿ ಮಾಡಿರುವ ದೃಶ್ಯ ಕೂಡಾ ಕಂಡು ಬಂತು. ಇದೀಗ ಪೀಟರ್ ಸಿಡ್ಲ್  ಮುತ್ತಿಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral video) ಆಗುತ್ತಿದೆ. ಈ ವಿಡಿಯೋವನ್ನು ಅಭಿಮಾನಿಗಳು ತುಂಬಾ ಮೆಚ್ಚಿಕೊಂಡಿದ್ದಾರೆ. 

 

ಪಂದ್ಯ ಗೆದ್ದ ಸಿಡ್ನಿ ತಂಡ : 
ಮೊದಲು ಬ್ಯಾಟಿಂಗ್ ಮಾಡಿದ ಅಡಿಲೇಡ್ ತಂಡ 147 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಸಿಡ್ನಿ ತಂಡ 6 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಯಿತು. ಅಡಿಲೇಡ್‌ನ ನಾಯಕ ಪೀಟರ್ ಸಿಡ್ಲ್ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅಲ್ಲದೆ, ಡೇನಿಯಲ್ ವೊರೆಲ್ ಗೆ ಕೂಡಾ ಈ ಯಶಸ್ಸು ಸಿಗಲಿಲ್ಲ. ಅಡಿಲೇಡ್ ತಂಡದ ಪರ ರಶೀದ್ ಖಾನ್ 3 ವಿಕೆಟ್ ಪಡೆದರೆ, ಸಿಡ್ನಿ ಪರ ಸಿಲ್ಕ್ ಕೊನೆಯ ಓವರ್‌ಗಳಲ್ಲಿ ಬಿರುಸಿನ ಆಟವಾಡಿದರು. 24 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 36 ರನ್ ಗಳಿಸಿದರು.

ಇದನ್ನೂ ಓದಿ : IND vs SA:ಆಟಗಾರರಿಗೆ ಕೊರೊನಾ ತಗುಲಿದಲ್ಲಿ ರದ್ದಾಗುತ್ತಾ ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಪ್ರವಾಸ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News