ಕುಡಿದು ತೂರಾಡುತ್ತಾ ಬಾಳೆ ಗಿಡಕ್ಕೆ ಪಂಚ್, ಕುಡುಕನ ಕಿತಾಪತಿಯ ವಿಡಿಯೋ ವೈರಲ್.!

Funny video:ಕುಡಿತದ ಗುಂಗಿನಲ್ಲಿ ವ್ಯಕ್ತಿ ಏನು ಮಾಡುತ್ತಾನೆಂಬುದನ್ನೇ ಮೈ ಮರೆತಿರುತ್ತಾನೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕುಡುಕನ ಕಿತಾಪತಿಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.  

Edited by - Zee Kannada News Desk | Last Updated : Dec 22, 2021, 01:30 PM IST
  • ಕುಡುಕನ ಕಿತಾಪತಿಯ ವಿಡಿಯೋ ಸಖತ್ ವೈರಲ್
  • ಕುಡಿದು ತೂರಾಡುತ್ತಾ ಬಾಳೆ ಗಿಡಕ್ಕೆ ಪಂಚ್
  • ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ 30 ಸೆಕೆಂಡಿನ ಈ ಕ್ಲಿಪ್
ಕುಡಿದು ತೂರಾಡುತ್ತಾ ಬಾಳೆ ಗಿಡಕ್ಕೆ ಪಂಚ್, ಕುಡುಕನ ಕಿತಾಪತಿಯ ವಿಡಿಯೋ ವೈರಲ್.!  title=
ಕುಡುಕನ ಕಿತಾಪತಿ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಇದನ್ನೂ ಅರಿತಿದ್ದರು ಹಲವರು ಅದರ ದಾಸರಾಗಿರುತ್ತಾರೆ. ಕಂಠ ಪೂರ್ತಿ ಕುಡಿದು ತೂರಾಡುವ ಒಂದಷ್ಟು ಮಂದಿಗೆ ನಶೆಯಲ್ಲಿ ತಾವೇನು ಮಾಡುತ್ತೇವೆ ಎಂಬುದೇ ಅರಿವಿರುವುದಿಲ್ಲ. ಕುಡಿತದ ಗುಂಗಿನಲ್ಲಿ ವ್ಯಕ್ತಿ ಏನು ಮಾಡುತ್ತಾನೆಂಬುದನ್ನೇ ಮೈ ಮರೆತಿರುತ್ತಾನೆ. 

ಸಾಕಷ್ಟು ಸಂದರ್ಭದಲ್ಲಿ ಪಾನಮತ್ತ ವ್ಯಕ್ತಿಗಳು ಅವಾಂತರಗಳಿಗೆ ಕಾರಣವಾಗುವುದು ಉಂಟು. ಕೆಲವೊಮ್ಮೆ ಇವರ ಕಿತಾಪತಿಗಳಿಂದ ತಮಾಷೆಯ ಸನ್ನಿವೇಶ ಸೃಷ್ಟಿಯಾಗುತ್ತದೆ. ಈಗ ಅಂತಹ ಒಂದು ಕಾಮಿಡಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.  

ಇದನ್ನೂ ಓದಿ: ಮುಂಬೈನಲ್ಲಿ ವಿಜಯ್ ದೇವರಕೊಂಡ ಜತೆ ರಶ್ಮಿಕಾ ಡಿನ್ನರ್ ಪಾರ್ಟಿ.. ಶುರುವಾಯ್ತು ಹೊಸ ಗಾಸಿಪ್.!

ಇಲ್ಲೊಬ್ಬ ಕುಡಿದು ತೂರಾಡುತ್ತಾ ಬಾಳೆ ಗಿಡಕ್ಕೆ ಪಂಚ್ ಕೊಟ್ಟಿದ್ದಾನೆ. ಇದನ್ನು ಕಂಡು ಅಲ್ಲಿದ್ದವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಸಮರ ಕಲೆ ವೀರಬಂತೆ ಎದುರಿಗಿದ್ದ ಬಾಳೆಗಿಡಕ್ಕೆ ಪಂಚ್ ಕೊಟ್ಟು ಶಕ್ತಿ ಪ್ರದರ್ಶಿಸಿದ್ದಾನೆ. ಈ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ತಮಾಷೆಯ ದೃಶ್ಯವನ್ನು ಹಂಚಿಕೊಂಡಿದ್ದಾರೆ. 30 ಸೆಕೆಂಡಿನ ಈ ಕ್ಲಿಪ್ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.

ಕುಡಿತದ ಗುಂಗಿನಲ್ಲಿ ವ್ಯಕ್ತಿ ಏನು ಮಾಡುತ್ತಾನೆಂಬುದನ್ನೇ ಮೈ ಮರೆತಿರುತ್ತಾನೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕುಡುಕನ ಕಿತಾಪತಿಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Funny Viral Video: ಪತಿರಾಯನ ಚೇಷ್ಟೆ! ಅತ್ತೆ ತಲೆ ಮೇಲೆ ಮೊಟ್ಟೆ ಹೊಡೆದ ಸೊಸೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News