21 ವರ್ಷ, 700 ವಿಕೆಟ್, ಅಗಾಧ ನೆನಪು… ಕ್ರಿಕೆಟ್ ಲೋಕದ GOAT ಜೇಮ್ಸ್ ಆಂಡರ್ಸನ್ ನಿವೃತ್ತಿ ಘೋಷಣೆ

James Anderson Announces Retirement: 41 ವರ್ಷದ ಆಂಡರ್ಸನ್ 2003ರಲ್ಲಿ ಲಾರ್ಡ್ಸ್‌’ನಲ್ಲಿ ಟೆಸ್ಟ್‌’ಗೆ ಪದಾರ್ಪಣೆ ಮಾಡಿದ್ದರು. 187 ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್ ಪಡೆದಿದ್ದಾರೆ. ಆಂಡರ್ಸನ್ 700 ಟೆಸ್ಟ್ ವಿಕೆಟ್‌’ಗಳ ಎವರೆಸ್ಟ್ ಅನ್ನು ತಲುಪಿದ ಮೊದಲ ವೇಗದ ಬೌಲರ್.

Written by - Bhavishya Shetty | Last Updated : May 11, 2024, 06:44 PM IST
    • ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಕ್ರಿಕೆಟ್‌’ಗೆ ನಿವೃತ್ತಿ
    • 41 ವರ್ಷದ ಆಂಡರ್ಸನ್ 2003ರಲ್ಲಿ ಲಾರ್ಡ್ಸ್‌’ನಲ್ಲಿ ಟೆಸ್ಟ್‌’ಗೆ ಪದಾರ್ಪಣೆ ಮಾಡಿದ್ದರು
    • 187 ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್ ಪಡೆದಿದ್ದಾರೆ
21 ವರ್ಷ, 700 ವಿಕೆಟ್, ಅಗಾಧ ನೆನಪು… ಕ್ರಿಕೆಟ್ ಲೋಕದ GOAT ಜೇಮ್ಸ್ ಆಂಡರ್ಸನ್ ನಿವೃತ್ತಿ ಘೋಷಣೆ title=
James Anderson

James Anderson Announces Retirement: ಇಂಗ್ಲೆಂಡ್‌’ನ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ. ಆಂಡರ್ಸನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಈ ವರ್ಷದ ಜುಲೈ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೆಕ್ಕಾ ಆಫ್ ಕ್ರಿಕೆಟ್, ಲಾರ್ಡ್ಸ್‌’ನಲ್ಲಿ ಆಡಲಿದ್ದಾರೆ. ಈ ಟೆಸ್ಟ್ ಪಂದ್ಯ ಜುಲೈ 10-14ರ ಅವಧಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ಹಾಗೂ ನನ್ನ ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು: ಸಿಎಂ ಸಿದ್ದರಾಮಯ್ಯ

41 ವರ್ಷದ ಆಂಡರ್ಸನ್ 2003ರಲ್ಲಿ ಲಾರ್ಡ್ಸ್‌’ನಲ್ಲಿ ಟೆಸ್ಟ್‌’ಗೆ ಪದಾರ್ಪಣೆ ಮಾಡಿದ್ದರು. 187 ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್ ಪಡೆದಿದ್ದಾರೆ. ಆಂಡರ್ಸನ್ 700 ಟೆಸ್ಟ್ ವಿಕೆಟ್‌’ಗಳ ಎವರೆಸ್ಟ್ ಅನ್ನು ತಲುಪಿದ ಮೊದಲ ವೇಗದ ಬೌಲರ್. ಭಾರತ ವಿರುದ್ಧದ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅವರನ್ನು ಔಟ್ ಮಾಡುವ ಮೂಲಕ ಆಂಡರ್ಸನ್ ಈ ವರ್ಷ 700 ವಿಕೆಟ್ ಪೂರೈಸಿದರು.

ಇದನ್ನೂ ಓದಿ:  ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಈತ ಆಡಲಿ: ಸೌರವ್ ಗಂಗೂಲಿ

ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿದ ಆಂಡರ್ಸನ್, 'ಈ ಬೇಸಿಗೆಯಲ್ಲಿ ಲಾರ್ಡ್ಸ್‌’ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಆಗಿರುತ್ತದೆ. ನಾನು ಬಾಲ್ಯದಿಂದಲೂ ಪ್ರೀತಿಸುತ್ತಿದ್ದ ಕ್ರೀಡೆಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ. ಈ 20 ವರ್ಷಗಳು ನನಗೆ ನಂಬಲಸಾಧ್ಯವಾದವು. ಇಂಗ್ಲೆಂಡ್ ಪರ ಆಡುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಈ ಆಟದಿಂದ ಹಿಂದೆ ಸರಿಯಲು ಮತ್ತು ಇತರರಿಗೆ ಅವಕಾಶ ನೀಡಲು ಇದು ಸರಿಯಾದ ಸಮಯ. ನನ್ನ ಕನಸು ನನಸಾಗುವಂತೆ ಅವರ ಕನಸುಗಳನ್ನು ನನಸು ಮಾಡಬೇಕು. ಇದಕ್ಕಿಂತ ದೊಡ್ಡ ಭಾವನೆ ಇನ್ನೊಂದಿಲ್ಲ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News