ನವದೆಹಲಿ: ಮುಂಬೈನಲ್ಲಿ ಬುಧವಾರ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದಲ್ಲದೆ, ಗಂಗೂಲಿ 65 ವರ್ಷಗಳಲ್ಲಿ ಪೂರ್ಣಾವಧಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನೂತನ ಬಿಸಿಸಿಐ ಕ್ರಿಕೆಟ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಗಂಗೂಲಿ ಭಾರತ ತಂಡದ ನಾಯಕರಾಗಿದ್ದಾಗ ಧರಿಸಿದ್ದ ಬ್ಲೇಜರ್ ನ್ನೇ ಧರಿಸಿದ್ದರು. ಈ ಕುರಿತಾಗಿ ಮಾತನಾಡಿರುವ ಸೌರವ್ ಗಂಗೂಲಿ 'ನಾನು ಭಾರತದ ನಾಯಕನಾಗಿದ್ದಾಗ ನನಗೆ ಬ್ಲೇಜರ್ ಸಿಕ್ಕಿತು. ಆದ್ದರಿಂದ, ನಾನು ಅದನ್ನು ಇಂದು ಧರಿಸಲು ನಿರ್ಧರಿಸಿದೆ. ಆದರೆ, ಅದು ತುಂಬಾ ಸಡಿಲವಾಗಿದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಗಂಗೂಲಿ ನಗುವಿನೊಂದಿಗೆ ಹೇಳಿದರು.ಇದೇ ವೇಳೆ ಗಂಗೂಲಿ ಈ ಹಿಂದೆ ಭಾರತ ತಂಡವನ್ನು ವಿಶ್ವಾಸಾರ್ಹತೆ, ಭ್ರಷ್ಟಾಚಾರ ಮುಕ್ತವಾಗಿ ಮುನ್ನಡೆಸಿದಂತೆಯೇ ಬಿಸಿಸಿಐ ವಿಚಾರದಲ್ಲೂ ಯಾವುದೇ ರಾಜಿ ಇಲ್ಲ ಎಂದು ತಿಳಿಸಿದರು. ಒಂಬತ್ತು ತಿಂಗಳ ಅವಧಿಗೆ 39 ನೇ ಬಿಸಿಸಿಐ ಅಧ್ಯಕ್ಷರಾದ ಗಂಗೂಲಿ ಅವರು ಕೊಹ್ಲಿಯನ್ನು ಎಲ್ಲ ರೀತಿಯಲ್ಲೂ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.
#WATCH Sourav Ganguly while addressing media after taking charge as the President of Board of Control for Cricket (BCCI) in Mumbai: I got this (blazer) when I was the Captain of India. So, I decided to wear it today. But, I didn't realize it's so loose. pic.twitter.com/FgwYmfsyO8
— ANI (@ANI) October 23, 2019
ವಿರಾಟ್ ಈಗ ನಾಯಕ ಮತ್ತು ನಾವು ಒಂದೇ ರೀತಿಯ ಸಂಬಂಧವನ್ನು ಹೊಂದಿದ್ದೇವೆ. ಭಾರತವನ್ನು ಉತ್ತಮವಾಗಿ ಆಡಲು ಅವರು ಏನು ಸಹಾಯ ಮಾಡಬೇಕೋ ಅದನ್ನು ನಾವು ಅವರಿಗೆ ಒದಗಿಸುತ್ತೇವೆ. ಕೊಹ್ಲಿ ಭಾರತೀಯ ತಂಡವನ್ನು ಉನ್ನತ ಮಟ್ಟಕ್ಕೆ ಕರೆದೊಯ್ದಿದ್ದಾರೆ. ನಾವು ಅವರೊಂದಿಗೆ ಇದ್ದೇವೆ ಮತ್ತು ಇರುತ್ತೇವೆ, ಎಂದು ಗಂಗೂಲಿ ತಿಳಿಸಿದರು.ಈ ಸಂದರ್ಭದಲ್ಲಿ ಧೋನಿ ವಿಚಾರವಾಗಿ ಮಾತನಾಡಿದ ಗಂಗೂಲಿ 'ಧೋನಿ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಿಲ್ಲ, ಚಾಂಪಿಯನ್ಸ್ ಬೇಗನೆ ವಿಫಲರಾಗುವುದಿಲ್ಲ, ಎಲ್ಲರೂ ನನ್ನ ಬಗ್ಗೆ ಇದೆ ಹೇಳಿದಾಗ ನಾನು ನಾಲ್ಕು ವರ್ಷಗಳ ಕಾಲ ಆಡಿದ್ದೇನೆ 'ಎಂದು ಗಂಗೂಲಿ ಹೇಳಿದರು.