IPL 2022, GT vs DC: ದೆಹಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಕನದಲ್ಲಿ ಯಾರಿಗೆ ಗೆಲುವು..?

5 ಬಾರಿ ಐಪಿಎಲ್ ಚಾಂಪಿಯನ್ ಮುಂಬೈಗೆ ಸೋಲಿನ ರುಚಿ ತೋರಿಸಿರುವ ದೆಹಲಿ 13ನೇ ಆವೃತ್ತಿಯ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು.

Written by - Puttaraj K Alur | Last Updated : Apr 2, 2022, 04:36 PM IST
  • ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ವಿಶ್ವಾಸದಲ್ಲಿರುವ ದೆಹಲಿ ಕ್ಯಾಪಿಟಲ್ಸ್
  • ಮತ್ತೊಂದು ಗೆಲುವಿನ ಮೇಲೆ ಕಣ್ಣೀಟ್ಟಿರುವ ಗುಜರಾತ್ ಟೈಟಾನ್ಸ್
  • ಬಲಿಷ್ಠ ತಂಡಗಳ ನಡುವಿನ ಕದನದಲ್ಲಿ ಯಾರಿಗೆ ಸಿಗುತ್ತೆ ಗೆಲುವು..?
IPL 2022, GT vs DC: ದೆಹಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಕನದಲ್ಲಿ ಯಾರಿಗೆ ಗೆಲುವು..? title=
ದೆಹಲಿ ಮತ್ತು ಗುಜರಾತ್ ಸೆಣಸಾಟ!

ನವದೆಹಲಿ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂದು ಸಂಜೆ ಬಲಿಷ್ಠ ದೆಹಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್(GT vs DC) ನಡುವೆ ಸೆಣಸಾಟ ನಡೆಯಲಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿ(Indian Premier League 2022)ಯ 10ನೇ ಪಂದ್ಯವು ಭಾರೀ ಕುತೂಹಲ ಮೂಡಿಸಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಣಿಸಿರುವ ದೆಹಲಿ ಕ್ಯಾಪಿಟಲ್ಸ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಮುಂಬೈ ವಿರುದ್ಧ 4 ವಿಕೆಟ್ ಗಳ ಗೆಲುವು ಸಾಧಿಸಿದ್ದ ರಿಷಭ್ ಪಂತ್(Rishabh Pant) ನೇತೃತ್ವದ ದೆಹಲಿ ಕ್ಯಾಪಿಟಲ್ಸ್ ಬ್ಯಾಟಿಂಗ್-ಬೌಲಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ. ನಾಯಕ ರಿಷಭ್ ಪಂತ್, ಆರಂಭಿಕ ಆಟಗಾರ ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್ದೀಪ್ ಸಿಂಗ್, ಲಲಿತ್ ಯಾದವ್, ರೋವ್ಮನ್ ಪೊವೆಲ್ ದೆಹಲಿ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಅದೇ ರೀತಿ ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ, ಶ್ರೀಕರ್ ಭರತ್, ಸರ್ಫರಾಜ್ ಖಾನ್, ಅನ್ರಿಚ್ ನೋರ್ಟ್ಜೆ, ಚೇತನ್ ಸಕರಿಯಾ ಮುಂತಾದವರು ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ಇದನ್ನೂ ಓದಿ: IPL 2022: ಕ್ರಿಕೆಟ್ ಅಭಿಮಾನಿಗಳಿಗೆ ಯುಗಾದಿ ಉಡುಗೊರೆ

5 ಬಾರಿ ಐಪಿಎಲ್ ಚಾಂಪಿಯನ್ ಮುಂಬೈಗೆ ಸೋಲಿನ ರುಚಿ ತೋರಿಸಿರುವ ದೆಹಲಿ(Delhi Capitals) 13ನೇ ಆವೃತ್ತಿಯ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಈ ಬಾರಿಯೂ ದೆಹಲಿ ತಂಡದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಇನ್ನು ಪ್ರಸಕ್ತ ಟೂರ್ನಿಯಲ್ಲಿ ಹೊಸ ತಂಡವಾಗಿ ಸೇರ್ಪಡೆಗೊಂಡಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತನ್ನ ಮೊದಲ ಪಂದ್ಯದಲ್ಲಿಯೇ ಲಕ್ನೋ ವಿರುದ್ಧ ಗೆದ್ದು ಶುಭಾರಂಭ ಮಾಡಿತ್ತು. ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿರುವ ಈ ತಂಡದ ಮೇಲೆಯೂ ನಿರೀಕ್ಷೆ ಹೆಚ್ಚಾಗಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಬಲಿಷ್ಠವಾಗಿರುವ ಗುಜರಾತ್ ಇಂದು ದೆಹಲಿಗೆ ಯಾವ ರೀತಿಯ ಸವಾಲು ಒಡ್ಡಲಿದೆ ಎಂಬುದು ಕುತೂಹಲ ಕೆರಳಿಸಿದೆ. ಹಾರ್ಡ್ ಹಿಟ್ಟರ್ ಹಾರ್ದಿಕ್ ಪಾಂಡ್ಯ(Hardik Pandya), ಆಸ್ಟ್ರೇಲಿಯಾದ ಸ್ಟಾರ್ ಆಟಗಾರ  ಮ್ಯಾಥ್ಯೂ ವೇಡ್, ಶುಬ್ಮನ್ ಗಿಲ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಮುಂತಾದವರು ಗುಜರಾತ್ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಅದೇ ರೀತಿ ರಶೀದ್ ಖಾನ್, ಲಾಕಿ ಫರ್ಗುಸನ್, ವರುಣ್ ಆರೋನ್, ಮೊಹಮ್ಮದ್ ಶಮಿ, ವೃದ್ಧಿಮಾನ್ ಸಹಾ ಮುಂತಾದವರು ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಭರ್ಜರಿ ಪೈಪೋಟಿ ನಡೆಯುವ ನಿರೀಕ್ಷೆಗಳಿವೆ. ಅಂತಿಮವಾಗಿ ಯಾರಿಗೆ ವಿಜಯಲಕ್ಷ್ಮಿ ಒಲಿಯಲ್ಲಿದ್ದಾಳೆಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2022, MI vs RR: ಮುಂಬೈ ಇಂಡಿಯನ್ಸ್‌ಗೆ ರಾಜಸ್ಥಾನ್ ರಾಯಲ್ಸ್ ಸವಾಲು

ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:

ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್ ಸದಾರಂಗನಿ, ರಶೀದ್ ಖಾನ್, ಲಾಕಿ ಫರ್ಗುಸನ್, ವರುಣ್ ಆರೋನ್, ಮೊಹಮ್ಮದ್ ಶಮಿ, ವೃದ್ಧಿಮಾನ್ ಸಹಾ, ಜಯಂತದೀಪ್ ಸಂಗ್ವಾನ್, ಗುರುಕೀರತ್ ಸಿಂಗ್ ಮಾನ್, ಅಲ್ಜಾರಿ ಜೋಸೆಫ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ದರ್ಶನ್ ನಲ್ಕಂಡೆ, ರಹಮಾನುಲ್ಲಾ ಗುರ್ಬಾಜ್, ಡೊಮಿನಿಕ್ ಡ್ರೇಕ್ಸ್, ಸಾಯಿ ಸುದರ್ಶನ್, ಯಶ್ ದಯಾಳ್, ನೂರ್ ಅಹ್ಮದ್

ಡೆಲ್ಲಿ ಕ್ಯಾಪಿಟಲ್ಸ್ : ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್‌ದೀಪ್ ಸಿಂಗ್, ಲಲಿತ್ ಯಾದವ್, ರೋವ್‌ಮನ್ ಪೊವೆಲ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ, ಶ್ರೀಕರ್ ಭರತ್, ಸರ್ಫರಾಜ್ ಖಾನ್, ಲುಂಗಿ ಎನ್‍ಜಿಡಿ, ಮುಸ್ತಾಫಿಜುರ್ ರೆಹಮಾನ್, ಅಶ್ವಿನ್ ಹೆಬ್ಬಾರ್, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್

ಐಪಿಎಲ್‌ ಪಂದ್ಯ: 10

ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್  

ದಿನಾಂಕ: ಏಪ್ರಿಲ್ 02, ಶನಿವಾರ

ಸ್ಥಳ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ

ಸಮಯ: ಸಂಜೆ 7.30ಕ್ಕೆ

=================================================================

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News