Under-19 World Cup 2024: ಭಾರತಕ್ಕೆ ಹೀನಾಯ ಸೋಲು, ಆಸ್ಟ್ರೇಲಿಯಾ ಚಾಂಪಿಯನ್

ICC Under 19 World Cup 2024: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 253 ರನ್ ಪೇರಿಸಿತ್ತು. ಗೆಲುವಿನ ಗುರಿ ಬೆನ್ನತ್ತಿದ ಭಾರತ ತಂಡವು 43.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 174 ರನ್‌ ಗಳಿಸಲಷ್ಟೇ ಶಕ್ತವಾಯಿತು.

Written by - Puttaraj K Alur | Last Updated : Feb 11, 2024, 10:54 PM IST
  • ಕಮರಿದ ಐಸಿಸಿ ಅಂಡರ್‌ 19 ವಿಶ್ವಕಪ್‌ ಗೆಲ್ಲುವ ಟೀಂ ಇಂಡಿಯಾದ ಆಸೆ
  • ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಎಡವಿದ ಭಾರತ
  • 4ನೇ ಬಾರಿಗೆ Under-19 ವಿಶ್ವಕಪತ್‌ ಎತ್ತಿಹಿಡಿದ ಬಲಿಷ್ಠ ಆಸ್ಟ್ರೇಲಿಯಾ
Under-19 World Cup 2024: ಭಾರತಕ್ಕೆ ಹೀನಾಯ ಸೋಲು, ಆಸ್ಟ್ರೇಲಿಯಾ ಚಾಂಪಿಯನ್ title=
ಕಮರಿದ ಟೀಂ ಇಂಡಿಯಾದ ಆಸೆ!

Under-19 World Cup 2024: ಐಸಿಸಿ ಅಂಡರ್‌ 19 ವಿಶ್ವಕಪ್‌ ಗೆಲ್ಲುವ ಟೀಂ ಇಂಡಿಯಾದ ಆಸೆ ಕಮರಿದೆ. ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಎಡವಿದ ಭಾರತ ತಂಡವು ಆಘಾತ ಅನುಭವಿಸಿದೆ. ದಕ್ಷಿಣ ಆಫ್ರಿಕಾದ ಬೆನೋನಿ ಅಂಗಳದಲ್ಲಿ ಭಾನುವಾರ ನಡೆದ ಫೈನಲ್ ಫೈಟ್‌ನಲ್ಲಿ ಆಸೀಸ್‌ ಎದುರು ಟೀಂ ಇಂಡಿಯಾ ಮಂಡಿಯೂರಿದೆ.   

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 253 ರನ್ ಪೇರಿಸಿತ್ತು. ಗೆಲುವಿನ ಗುರಿ ಬೆನ್ನತ್ತಿದ ಭಾರತ ತಂಡವು 43.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 174 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕಾಂಗರೂ ಪಡೆ 79 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಟೀಂ ಇಂಡಿಯಾ ೬ನೇ ಬಾರಿಗೆ ಕಿರಿಯರ ವಿಶ್ವ ಚಾಂಪಿಯನ್ ಆಗುವ ಆಸೆ ಕೈಗೊಡಲಿಲ್ಲ.

ಇದನ್ನೂ ಓದಿ: ಟೀಂ ಇಂಡಿಯಾಗೆ ಸಿಕ್ಕೇಬಿಟ್ರು ಜೂನಿಯರ್ ಧೋನಿ! 19ರ ಹರೆಯದ ಈ ಅದ್ಭುತ ಆಟಗಾರನಿಗೆ CSKಯಲ್ಲಿ ಸ್ಥಾನ

ವಿಶ್ವಕಪ್ ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಪರ ಟಾಪ್‌ ಆರ್ಡರ್ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರ. ಭಾರತದ ಪರ ಆದರ್ಶ ಸಿಂಗ್ 47, ಮುಶೀರ್ ಖಾನ್‌ 22, ಮುರಗನ್‌ ಅಭಿಷೇಕ್‌ 42, ನಮನ್‌ ತಿವಾರಿ 14 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿ ದೊಡ್ಡ ನಿರಾಸೆ ಮೂಡಿಸಿದರು. ಆಸೀಸ್ ಪರ ಮಾಹ್ಲಿ ಬಿಯರ್ಡ್ಮನ್ ಹಾಗೂ ರಾಫ್ ಮ್ಯಾಕ್‌ಮಿಲನ್ ತಲಾ ೩ ವಿಕೆಟ್‌ ಪಡೆದು ತಮ್ಮ ತಂಡಕ್ಕೆ ಅಮೂಲ್ಯ ಗೆಲುವು ತಂದುಕೊಟ್ಟರು. ಕ್ಯಾಲಮ್ ವಿಡ್ಲರ್ ೨, ಚಾರ್ಲಿ ಆಂಡರ್ಸನ್ ಮತ್ತು ಟಾಮ್ ಸ್ಟ್ರಾಕರ್ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಭರ್ಜರಿ ಜೊತೆಯಾಟ!

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಆಸೀಸ್ ಪರ ಆರಂಭಿಕ ಸ್ಯಾಮ್ ಕಾನ್ಸ್ಟಾಸ್ ಸೊನ್ನೆ ಸುತ್ತಿದರು. ಆದರೆ ೨ನೇ ವಿಕೆಟ್‌ಗೆ ಹ್ಯಾರಿ ಡಿಕ್ಸನ್(42) ಮತ್ತು ನಾಯಕ ಹಗ್ ವೈಬ್ಜೆನ್(48) ಉತ್ತಮವಾಗಿ ಆಡಿದರು. ಈ ಜೋಡಿ 109 ಎಸೆತಗಳಲ್ಲಿ 78 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ನಂತರ ೪ನೇ ವಿಕೆಟ್‌ಗೆ ಹರ್ಜಸ್ ಸಿಂಗ್(55) ಹಾಗೂ ರಯಾನ್ ಹಿಕ್ಸ್ (20) ಜೋಡಿ ಉತ್ತಮ ಜೊತೆಯಾಟವಾಡಿತು. ಉಳಿದಂತೆ ಆಲಿವರ್ ಪೀಕ್ ಅಜೇಯ 46 ರನ್ ಸಿಡಿಸಿದರು. ಈ ಮೂಲಕ ಆಸೀಸ್‌ ಫೈನಲ್‌ನಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಭಾರತದ ಪರ ಬೌಲಿಂಗ್‌ನಲ್ಲಿ ರಾಜ್ ಲಿಂಬಾನಿ ೩, ನಮನ್ ತಿವಾರಿ ೨, ಸೌಮಿ ಪಾಂಡೆ ಮತ್ತು ಮುಶೀರ್ ಖಾನ್ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಇದನ್ನೂ ಓದಿ: ಅದೃಷ್ಟ ಅಂದ್ರೆ ಇದೇ ಅನ್ಸುತ್ತೆ...! ಸ್ಟಂಪ್ ಮಧ್ಯೆಯೇ ಬಾಲ್ ಹೋದ್ರೂ ಔಟಾಗ್ಲಿಲ್ಲ ಬ್ಯಾಟ್ಸ್’ಮನ್- ವಿಡಿಯೋ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News