ನವದೆಹಲಿ: ಈಗ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ವಿಶ್ವಕಪ್ ಮಾದರಿಯಲ್ಲಿ ಆಡುವ ಹಿನ್ನಲೆಯಲ್ಲಿ ಈಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಗಸ್ಟ್ ೧ ರಿಂದ ಪ್ರಾರಂಭವಾಗಲಿದೆ. ಆದರೆ ಇದು ವಿಶ್ವಕಪ್ ಟೂರ್ನಿ ಗಿಂತ ಭಿನ್ನವಾಗಿರುತ್ತದೆ.
ಎರಡು ವರ್ಷಗಳಲ್ಲಿ ಆಡಿದ ಟೆಸ್ಟ್ ಟೂರ್ನಿಗಳ ಆಧಾರದ ಮೇಲೆ ಅಂತಿಮ ವಿಜೇತರನ್ನು ನಿರ್ಧರಿಸಲು ಅಂತಿಮ ಪಂದ್ಯವನ್ನು ಆಡಿಸಲಾಗುತ್ತದೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮೊದಲ ಬಾರಿಗೆ 2009 ರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿತು. 2010 ರಲ್ಲಿ ಇದಕ್ಕೆ ಅಂಗಿಕಾರ ನೀಡಿ 2013 ರಲ್ಲಿ ಮೊದಲ ಆವೃತ್ತಿಯ ಚಾಂಪಿಯನ್ ಶಿಪ್ ಆಡಿಸುವ ಗುರಿಯನ್ನು ಹೊಂದಲಾಯಿತು.ಆದರೆ ಕಾಲಾಂತರದಲ್ಲಿ ಇದನ್ನು ಮುಂದೂಡಿ ನಂತರ ರದ್ದುಗೊಳಿಸಲಾಯಿತು ಅಂತಿಮವಾಗಿ ಉದ್ಘಾಟನಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ್ನು ಆಗಸ್ಟ್ 1, 2019 ರಿಂದ ಏಪ್ರಿಲ್ 30 2021 ರವರೆಗೆ ಆಡಲು ನಿರ್ಧರಿಸಲಾಯಿತು.
-ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಉದ್ದೇಶ?
ದ್ವಿಪಕ್ಷೀಯ ಟೆಸ್ಟ್ ಕ್ರಿಕೆಟ್ಗೆ ಹೆಚ್ಚಿನ ಪ್ರಾಧ್ಯಾನ್ಯತೆ ತರುವ ಉದ್ದೇಶದಿಂದ ಚಾಂಪಿಯನ್ಶಿಪ್ ಅನ್ನು ಸ್ಥಾಪಿಸಲಾಗಿದೆ.
-ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಯಾವಾಗ ಪ್ರಾರಂಭವಾಗುತ್ತದೆ?
ಚಾಂಪಿಯನ್ಶಿಪ್ ಆಗಸ್ಟ್ 1 ರಿಂದ ಪ್ರಾರಂಭವಾಗಲಿದೆ. ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುವ ಮೊದಲ ಆಶಸ್ ಟೆಸ್ಟ್ ಸರಣಿಯಿಂದ ಪ್ರಾರಂಭಿಸಲು ಸಜ್ಜಾಗಿದೆ.
-ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಯಾವ ತಂಡಗಳು ಸ್ಪರ್ಧಿಸುತ್ತವೆ?
ವಿಶ್ವದ ಒಂಬತ್ತು ಅಗ್ರ ಶ್ರೇಯಾಂಕಿತ ತಂಡಗಳು ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಲಿದ್ದು, ಎರಡು ವರ್ಷಗಳ ಅವಧಿಯಲ್ಲಿ ಪರಸ್ಪರ ಆಯ್ಕೆ ಮಾಡಿದ ಎದುರಾಳಿಗಳ ವಿರುದ್ಧ ಪ್ರತಿ ತಂಡವು ಆರು ಸರಣಿಗಳನ್ನು ಸ್ವದೇಶದಲ್ಲಿ ಆಡಲಿವೆ.
-ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ವಿಜೇತರನ್ನು ಹೇಗೆ ನಿರ್ಧರಿಸಲಾಗುತ್ತದೆ?
2021 ರ ಜೂನ್ನಲ್ಲಿ ಇಂಗ್ಲೆಂಡ್ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಅಗ್ರ ಎರಡು ತಂಡಗಳು ಸ್ಪರ್ಧಿಸಿ ಚಾಂಪಿಯನ್ ಆಗುತ್ತವೆ.
-ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಪಾಯಿಂಟ್ಸ್ ವ್ಯವಸ್ಥೆ ಏನು?
ಚಾಂಪಿಯನ್ಶಿಪ್ನ ಪ್ರತಿಯೊಂದು ಸರಣಿಯು120 ಪಾಯಿಂಟ್ಗಳ ಮೌಲ್ಯವನ್ನು ಹೊಂದಿರುತ್ತದೆ. ಆದ್ದರಿಂದ, ಒಂದು ತಂಡವು ಗರಿಷ್ಠ 720 ಅಂಕಗಳನ್ನು ಗಳಿಸಬಹುದು.
-ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಭಾರತದ ವೇಳಾಪಟ್ಟಿ ಏನು?
ಆಗಸ್ಟ್ 22 ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಭಾರತ ಚಾಂಪಿಯನ್ಶಿಪ್ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.
ಚಾಂಪಿಯನ್ಶಿಪ್ಗಾಗಿ ಭಾರತದ ಪೂರ್ಣ ವೇಳಾಪಟ್ಟಿ ಇಲ್ಲಿದೆ.
ಆಗಸ್ಟ್-ಸೆಪ್ಟೆಂಬರ್ 2019
ವೆಸ್ಟ್ ಇಂಡೀಸ್ (ವಿದೇಶ) - 2 ಟೆಸ್ಟ್
ಅಕ್ಟೋಬರ್ 2019
ದಕ್ಷಿಣ ಆಫ್ರಿಕಾ (ಸ್ವದೇಶ) - 3 ಟೆಸ್ಟ್
ನವೆಂಬರ್ 2019
ಬಾಂಗ್ಲಾದೇಶ (ಸ್ವದೇಶ) - 2 ಟೆಸ್ಟ್
ಫೆಬ್ರವರಿ-ಮಾರ್ಚ್ 2020
ನ್ಯೂಜಿಲೆಂಡ್ (ವಿದೇಶ) - 2 ಟೆಸ್ಟ್
ನವೆಂಬರ್ 2020-ಜನವರಿ 2021
ಆಸ್ಟ್ರೇಲಿಯಾ (ವಿದೇಶ) - 4 ಟೆಸ್ಟ್
ಜನವರಿ-ಮಾರ್ಚ್ 2021
ಇಂಗ್ಲೆಂಡ್ (ಸ್ವದೇಶ) - 5 ಟೆಸ್ಟ್