ನವದೆಹಲಿ: ಮೂರನೇ ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ಆರು ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.ಆಸ್ಟ್ರೇಲಿಯಾದ ಪರ ಡಿ ಆರ್ಚಿ ಶಾರ್ಟ್ (33) ಆರನ್ ಫಿಂಚ್ (28) ಆಲೆಕ್ಸ್ ಕೇರಿ (27) ಬ್ಯಾಟಿಂಗ್ ನೆರವಿನಿಂದ ಉತ್ತಮ ಮೊತ್ತವನ್ನು ಗಳಿಸಿತು.
India level the T20I series against Australia!
Virat 'The Chaser' Kohli does it again, ending 61* from 41 balls as India chase down 165 with just two balls remaining. What a knock from the skipper!#AUSvIND SCORE 👇https://t.co/vuuqcrYXlw pic.twitter.com/0IlDYZRdZ2
— ICC (@ICC) November 25, 2018
165 ರನ್ ಗಳ ಗುರಿ ಬೆನ್ನತ್ತಿದ ಭಾರತ ತಂಡವು ನಾಯಕ ಕೊಹ್ಲಿಯವರ ಭರ್ಜರಿ ಅರ್ಧಶತಕ (61) ಶಿಖರ್ ಧವನ್ (41) ರನ್ ಗಳ ನೆರವಿನಿಂದ ಇನ್ನು ಮೂರು ಎಸೆತಗಳು ಇರುವಲ್ಲಿ ಗೆಲುವಿನ ದರ ಸೇರಿತು. ಆ ಮೂಲಕ ಸರಣಿಯನ್ನು 1-1 ಅಂತರದಲ್ಲಿ ಸಮ ಮಾಡಿಕೊಂಡಿತು.
ಮೊನ್ನೆ ನಡೆದ ಎರಡನೇ ಪಂದ್ಯವು ಮಳೆಯಿಂದ ರದ್ದಾಗಿದ್ದರಿಂದ ಈ ಪಂದ್ಯದಲ್ಲಿ ಭಾರತವು ಗೆಲ್ಲಲೇಬೇಕಾದ ಒತ್ತಡದಲ್ಲಿ ಸಿಲುಕಿತ್ತು.ಈಗ ಮೂರನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿ ಸಮ ಮಾಡಿಕೊಂಡ ಸಮಾಧಾನದಲ್ಲಿ ಭಾರತ ತಂಡವಿದೆ.