NZ vs IND : 5-0 ಅಂತರದಲ್ಲಿ ಟಿ-20 ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ

ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ಭಾನುವಾರ ನಡೆದ ಐದನೇ ಮತ್ತು ಅಂತಿಮ ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲೆಂಡ್‌ನ್ನು ಏಳು ರನ್‌ಗಳಿಂದ ಸೋಲಿಸಿ ಈಗ ಭಾರತ ಇತಿಹಾಸವನ್ನು ಬರೆದಿದೆ.

Last Updated : Feb 2, 2020, 05:22 PM IST
 NZ vs IND : 5-0 ಅಂತರದಲ್ಲಿ ಟಿ-20 ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ  title=
Photo courtesy: Twitter

ನವದೆಹಲಿ: ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ಭಾನುವಾರ ನಡೆದ ಐದನೇ ಮತ್ತು ಅಂತಿಮ ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲೆಂಡ್‌ನ್ನು ಏಳು ರನ್‌ಗಳಿಂದ ಸೋಲಿಸಿ ಈಗ ಭಾರತ ಇತಿಹಾಸವನ್ನು ಬರೆದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಕೆ.ಎಲ್.ರಾಹುಲ್ 45 ಹಾಗೂ ರೋಹಿತ್ ಶರ್ಮಾ 60 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು.ಇನ್ನೊಂದೆಡೆ ಈ ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು 9 ವಿಕೆಟ್ ನಷ್ಟಕ್ಕೆ 156 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಭಾರತ ತಂಡವು 7 ರನ್ ಗಳ ಗೆಲುವು ಸಾಧಿಸಿತು.

ನ್ಯೂಜಿಲೆಂಡ್ ತಂಡದ ಟಿಮ್ ಸೈಫೆರ್ಟ್ 50 ಹಾಗೂ ರಾಸ್ ಟೇಲರ್  53 ರನ್ ಗಳಿಸಿದರೂ ಕೂಡ ಕೀವಿಸ್ ತಂಡವು ಕೊನೆ ಕ್ಷಣದಲ್ಲಿನ ವಿಕೆಟ್ ಪತನದಿಂದಾಗಿ ಸೋಲನ್ನು ಅನುಭವಿಸಿತು. ಇದರಿಂದಾಗಿ ಭಾರತ ತಂಡವು ಟಿ-20 ಸರಣಿಯನ್ನು 5-0 ಅಂತರದಲ್ಲಿ ಗೆದ್ದಿತು. ಭಾರತ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ ನಾಲ್ಕು ಓವರ್‌ಗಳ ಅವಧಿಯಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿ ಕೇವಲ 12 ರನ್‌ಗಳನ್ನು ನೀಡಿದರು.

 

Trending News