ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. 3 ಪಂದ್ಯಗಳ ಟಿ20 ಸರಣಿಯು ನವೆಂಬರ್ 17 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ಟಿ20 ಸರಣಿ(Ind vs NZ T20 Series)ಯ ನಂತರ ನವೆಂಬರ್ 25 ರಿಂದ ಡಿಸೆಂಬರ್ 7 ರವರೆಗೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆದ್ರೆ ರೋಹಿತ್ ಶರ್ಮಾ ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲ. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಬದಲಿಗೆ 3 ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಿದೆ. ಆ 3 ಬ್ಯಾಟ್ಸ್‌ಮನ್‌ಗಳು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.
1. ಶುಭಮನ್ ಗಿಲ್
ಡಿಸೆಂಬರ್ 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಶುಭಮನ್ ಗಿಲ್(Shubman Gill) ಮತ್ತೊಮ್ಮೆ ಭಾರತೀಯ ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಈ ವರ್ಷ ಜೂನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಶುಭಮನ್ ಗಿಲ್ ಭಾರತಕ್ಕಾಗಿ ಕೊನೆಯ ಟೆಸ್ಟ್ ಆಡಿದ್ದರು. ಶುಭಮನ್ ಗಿಲ್ ಇದುವರೆಗೆ ಒಟ್ಟು 8 ಟೆಸ್ಟ್ ಪಂದ್ಯಗಳನ್ನಾಡಿದ್ದು 414 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್‌ನಿಂದ 3 ಅರ್ಧಶತಕಗಳು ಸಿಡಿದಿವೆ. ರೋಹಿತ್ ಶರ್ಮಾ ಅವರಂತಹ ದಂತಕಥೆಯೊಂದಿಗೆ ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ ಉತ್ತಮ ಅನುಭವವನ್ನು ಹೊಂದಿದ್ದಾರೆ, ಆದ್ದರಿಂದ ಅವರು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆರಂಭಿಕ ಪಾತ್ರವನ್ನು ವಹಿಸಬಹುದು. ಉಳಿದವರಿಗೆ ಬೆಂಬಲ ನೀಡಲು ಕೆಎಲ್ ರಾಹುಲ್ ಈಗಾಗಲೇ ಇದ್ದಾರೆ.
ಇದನ್ನೂ ಓದಿ : Virat Kohli: ಹಾರ್ದಿಕ್ ಮಾತ್ರವಲ್ಲ, ಕೊಹ್ಲಿಗೂ ದುಬಾರಿ ವಾಚ್‌ಗಳೆಂದರೆ ಇಷ್ಟ, ಬೆಲೆ ಗೊತ್ತಾದ್ರೆ ಬೆಚ್ಚಿ ಬೀಳುತ್ತೀರಿ
2. ಮಯಾಂಕ್ ಅಗರ್ವಾಲ್
ರೋಹಿತ್ ಶರ್ಮಾ ಬದಲಿಗೆ ಮಯಾಂಕ್ ಅಗರ್ವಾಲ್(Mayank Agarwal) ಬ್ಯಾಟಿಂಗ್ ಮಾಡುವ ದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಮಾಯಾಂಕ್ ಅಗರ್ವಾಲ್ ಕೊನೆಯ ಬಾರಿಗೆ ಡಿಸೆಂಬರ್ 2020 ರಲ್ಲಿ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆದರು. ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಸರಣಿಯಲ್ಲೂ ಮಯಾಂಕ್ ಅಗರ್ವಾಲ್ ಆಡಿರಲಿಲ್ಲ. ಮಯಾಂಕ್ ಅಗರ್ವಾಲ್ ಟೆಸ್ಟ್‌ನಲ್ಲಿ 1000 ಕ್ಕೂ ಹೆಚ್ಚು ರನ್‌ಗಳನ್ನು ಹೊಂದಿದ್ದಾರೆ ಮತ್ತು ಅವರ ಸರಾಸರಿ ಕೂಡ 45.73 ಆಗಿದೆ. ಮಯಾಂಕ್ ಅಗರ್ವಾಲ್ ಭಾರತದ ಪರ 14 ಟೆಸ್ಟ್ ಪಂದ್ಯಗಳಲ್ಲಿ 46 ಸರಾಸರಿಯಲ್ಲಿ 1052 ರನ್ ಗಳಿಸಿದ್ದಾರೆ. ಅವರು 23 ಇನ್ನಿಂಗ್ಸ್‌ಗಳಲ್ಲಿ ಮೂರು ಶತಕ ಮತ್ತು ನಾಲ್ಕು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್‌ಗಿಂತ ಮಯಾಂಕ್ ಅಗರ್ವಾಲ್ ಅವರ ತವರು ಮೈದಾನದಲ್ಲಿ ಸರಾಸರಿ ಹೆಚ್ಚು ಅಪಾಯಕಾರಿ. ಅಗರ್ವಾಲ್ ಭಾರತೀಯ ಕ್ರಿಕೆಟ್‌ನಲ್ಲಿ 215, 108 ಮತ್ತು 243 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
3. ವೃದ್ಧಿಮಾನ್ ಸಹಾ
ತಮ್ಮ ವೃತ್ತಿಜೀವನದಲ್ಲಿ ಒಟ್ಟು 38 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ, ರೋಹಿತ್ ಶರ್ಮಾ(Rohit Sharma) ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ತೆರೆಯುವ ಜವಾಬ್ದಾರಿಯನ್ನು ಸಹ ನಿಭಾಯಿಸಬಹುದು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಓಪನರ್ ಪಾತ್ರವನ್ನು ನಾವೆಲ್ಲರೂ ನೋಡಿದ್ದರಿಂದ ನಾವು ಇದನ್ನು ಹೇಳುತ್ತಿದ್ದೇವೆ. ಇದಲ್ಲದೆ, ಭಾರತೀಯ ಪಿಚ್‌ಗಳಲ್ಲಿ ರಿಷಬ್ ಪಂತ್‌ಗಿಂತ ವೃದ್ಧಿಮಾನ್ ಸಹಾ ಉತ್ತಮ ವಿಕೆಟ್‌ಕೀಪರ್. ವೃದ್ಧಿಮಾನ್ ಸಹಾ ಸಾಮಾನ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ, ಆದರೆ ಅಗತ್ಯವಿದ್ದರೆ ಇನ್ನಿಂಗ್ಸ್ ತೆರೆಯಬಹುದು. ವೃದ್ಧಿಮಾನ್ ಸಹಾ ಟೆಸ್ಟ್‌ನಲ್ಲಿ 3 ಶತಕ ಮತ್ತು 5 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಇನ್ನಿಂಗ್ಸ್ ಯಾವಾಗಲೂ ಟೀಂ ಇಂಡಿಯಾಕ್ಕೆ ಲಾಭದಾಯಕವಾಗಿದೆ.
ಇದನ್ನೂ ಓದಿ : ICC ಬಿಗ್ ಪ್ಲಾನ್! ಭಾರತದಲ್ಲಿ ನಡೆಯಲಿವೆ 2 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.