IND vs NZ, T20 World Cup 2016: ವರ್ಷ 2016... ದಿನಾಂಕ 15 ಮಾರ್ಚ್... ಸ್ಥಳ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ನಾಗ್ಪುರ… ಟಿ20 ವಿಶ್ವಕಪ್’ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ದಿನದಂದು ಯಾವುದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಊಹಿಸಿರದಂತಹ ಘಟನೆಯೊಂದು ನಡೆದಿತ್ತು. ಅಂದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಬ್ಯಾಟಿಂಗ್’ಗೆ ಇಳಿದ ತಂಡ ಕೇವಲ 79 ರನ್’ಗಳಿಗೆ ಆಲೌಟ್ ಆಗಿತ್ತು. ಯುವರಾಜ್ ಸಿಂಗ್, ರೋಹಿತ್, ಕೊಹ್ಲಿ, ಧೋನಿಯಂತಹ ಶ್ರೇಷ್ಠ ಬ್ಯಾಟ್ಸ್ಮನ್’ಗಳೇ ತುಂಬಿದ್ದ ತಂಡ 79 ರನ್’ಗಳಿಗೆ ಆಲೌಟ್ ಆಗಿ ಕಳಪೆ ದಾಖಲೆ ಬರೆಯುತ್ತದೆ ಎಂದು ಯಾರೊಬ್ಬರು ಊಹಿಸಿರಲಿಲ್ಲ. ಈ ಸ್ಕೋರ್ T20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಕನಿಷ್ಟ ಮೊತ್ತವಾಗಿದೆ.
ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಶಮಿ ಜೊತೆ ಸಾನಿಯಾ ಮಿರ್ಜಾ ವಿವಾಹ! ಮೂಗುತಿ ಸುಂದರಿ ಜೊತೆ 2ನೇ ಮದುವೆಗೆ ರೆಡಿಯಾದ್ರಾ ಸ್ಟಾರ್ ಬೌಲರ್?
ತವರಿನಲ್ಲಿ ವಿಶ್ವಕಪ್ ಆಡುತ್ತಿದ್ದ ಭಾರತ ತಂಡ ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿತ್ತು. ಸುರೇಶ್ ರೈನಾ, ಆಶಿಶ್ ನೆಹ್ರಾ, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದಿದ್ದರು. ಆದರೆ ಬೌಲರ್’ಗಳು ರನ್ ನಿಯಂತ್ರಿಸುವಲ್ಲಿ ಉತ್ತಮ ಪ್ರದರ್ಶನ ನೀಡಿದರು. ಭಾರತದ ಬೌಲಿಂಗ್ ದಾಳಿಯ ವಿರುದ್ಧ ನ್ಯೂಜಿಲೆಂಡ್ ತಂಡ ಕೇವಲ 126 ರನ್ ಸೇರಿಸಲಷ್ಟೇ ಶಕ್ತವಾಯಿತು. ಸ್ಟೇಡಿಯಂನಲ್ಲಿರುವ ಅಭಿಮಾನಿಗಳು ಮತ್ತು ಕ್ರಿಕೆಟಿಗರು ಪಂದ್ಯ ತಮ್ಮ ಹಿಡಿತದಲ್ಲಿದೆ ಎಂಬ ಭಾವನೆಯನ್ನು ಹೊಂದಿದ್ದರು. ಆದರೆ ಆಗಿದ್ದು ಮಾತ್ರ ರೋಚಕ.
127 ರನ್’ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಆಟಗಾರರು ಮೈದಾನಕ್ಕೆ ಬರುತ್ತಿದ್ದಂತೇ ಪೆವಿಲಿಯನ್ ದಾರಿ ಹಿಡಿಯುತ್ತಿದ್ದರು. ಮೊದಲು ಶಿಖರ್ ಧವನ್ ಕೇವಲ 1 ರನ್ ಗಳಿಸಿ ನಾಥನ್ ಮೆಕಲಮ್’ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ರೋಹಿತ್ ಶರ್ಮಾ ಕೂಡ 5 ರನ್ ಗಳಿಸಿ ಮಿಚೆಲ್ ಸ್ಯಾಂಟ್ನರ್’ಗೆ ವಿಕೆಟ್ ನೀಡಿದರು. ಈಗ ತಂಡವನ್ನು ಕಠಿಣ ಪರಿಸ್ಥಿತಿಯಿಂದ ಹೊರತರುವ ಜವಾಬ್ದಾರಿ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಜೋಡಿ ಮೇಲಿತ್ತು, ಆದರೆ ರೈನಾ 1 ರನ್ ಗಳಿಸಿ ಇಶ್ ಸೋಧಿಗೆ ವಿಕೆಟ್ ನೀಡಿದರೆ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗೆ ಬಂದ ಯುವರಾಜ್ ಸಿಂಗ್ ಕೂಡ ನಾಥನ್ ಮೆಕಲಮ್ ಎಸೆತದಲ್ಲಿ 4 ರನ್ ಗಳಿಸಿ ಔಟಾದರು. ಈ ಸಂದರ್ಭದಲ್ಲಿ ಅಭಿಮಾನಿಗಳ ಹೃದಯವೇ ಒಡೆದಿತ್ತು. 5ನೇ ಓವರ್ ಅಂತ್ಯಕ್ಕೆ ಭಾರತದ ಸ್ಕೋರ್ 26/4 ಆಗಿತ್ತು.
ಕೊಹ್ಲಿ-ಧೋನಿ ಮೇಲೆ ಭರವಸೆ, ಆದರೆ...
ಸತತ ವಿಕೆಟ್ ಪತನದ ನಡುವೆ ವಿರಾಟ್ ಕೊಹ್ಲಿ ಕ್ರೀಸ್’ನ ಒಂದು ತುದಿಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು. ಯುವರಾಜ್ ನಿರ್ಗಮನದ ನಂತರ ನಾಯಕ ಎಂಎಸ್ ಧೋನಿ ಬ್ಯಾಟಿಂಗ್’ಗೆ ಬಂದರು. ಈಗ ಏನಾದರೂ ಅದ್ಭುತ ಸಂಭವಿಸಿ ಭಾರತ ಇಲ್ಲಿಂದ ಗೆಲುವಿನತ್ತ ಸಾಗಲಿದೆ ಎಂಬ ಭರವಸೆ ಎಲ್ಲರಲ್ಲೂ ಇತ್ತು. ಆದರೆ ಇನಿಂಗ್ಸ್ನ ಎಂಟನೇ ಓವರ್’ನಲ್ಲಿ ಬಂದ ಇಶ್ ಸೋಧಿ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಹೊಡೆತ ನೀಡಿದರು. ಕೊಹ್ಲಿ 23 ರನ್ ಗಳಿಸಿ ಔಟಾದರು. ಈಗ ಎಲ್ಲರ ಕಣ್ಣು 'ಮಿಸ್ಟರ್ ಫಿನಿಶರ್' ಧೋನಿ ಮೇಲೆ… ಆದರೆ ಕಿವೀಸ್ ಬೌಲರ್’ಗಳು ತುಂಬಾ ಪ್ರಾಬಲ್ಯ ಮೆರೆದರು. ಪರಿಣಾಮ ಟೀಂ ಇಂಡಿಯಾದ ಬ್ಯಾಟ್ಸ್ಮನ್’ಗಳು ಬಂದು ಹೋಗುವುದನ್ನು ಮುಂದುವರೆಸಿದ್ದರು.
ಮಹಿ ವಿಕೆಟ್ ಹಾಗೂ...
ಕೊಹ್ಲಿ ನಂತರ ಹಾರ್ದಿಕ್ ಪಾಂಡ್ಯ ಧೋನಿಗೆ ಬೆಂಬಲ ನೀಡಿ 1 ರನ್ ಗಳಿಸಿ ನಿರ್ಗಮಿಸಿದರು. ರವೀಂದ್ರ ಜಡೇಜಾ ಖಾತೆಯನ್ನು ತೆರೆಯಲಿಲ್ಲ. ಸೋಧಿ ಮತ್ತೊಂದು ವಿಕೆಟ್ ಪಡೆದಾಗ ಧೋನಿ ಮತ್ತು ರವಿಚಂದ್ರನ್ ಅಶ್ವಿನ್ ನಡುವಿನ ಸಣ್ಣ ಜೊತೆಯಾಟವು ಗೆಲುವಿನ ಭರವಸೆ ಮೂಡಿಸಿತ್ತು. ಇನ್ನು 10 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಅಶ್ವಿನ್ ಸರದಿ. ಈಗ ಎಲ್ಲರ ಕಣ್ಣು ಮಹಿಯತ್ತ ನೆಟ್ಟಿತ್ತು. ಆದರೆ ಧೋನಿ ವಿಕೆಟ್ ಬೀಳುವುದರೊಂದಿಗೆ ಅಭಿಮಾನಿಗಳ ನಿರೀಕ್ಷೆಯೂ ಹುಸಿಯಾಯಿತು. ಧೋನಿ ತಮ್ಮ ವೈಯಕ್ತಿಕ ಸ್ಕೋರ್ 30ರಲ್ಲಿ ಮೆಕಲಮ್ ಅವರ ಕೈಯಲ್ಲಿ ಮಿಚೆಲ್ ಸ್ಯಾಂಟ್ನರ್ ಕ್ಯಾಚ್ ನೀಡಿದರು. ಉಳಿದ ಕೊನೆಯ ವಿಕೆಟ್ ಅನ್ನು ಆಶಿಶ್ ನೆಹ್ರಾ ರೂಪದಲ್ಲಿ ಆಡಮ್ ಮಿಲ್ನೆ ಪಡೆದರು.
ಇದನ್ನೂ ಓದಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಇವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ…
ಅಂದು ದಿಗ್ಗಜರಿಂದಲೇ ತುಂಬಿದ್ದ ಟೀಂ ಇಂಡಿಯಾ 79 ರನ್ಗಳಿಗೆ ಕುಸಿದಿತ್ತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಅತ್ಯಂತ ಕನಿಷ್ಠ ಮೊತ್ತವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.