close

News WrapGet Handpicked Stories from our editors directly to your mailbox

'ಸುನೋ ಗೌರ್ ಸೆ ದುನಿಯಾವಾಲೋ' ಹಾಡಿಗೆ ಹೆಜ್ಜೆ ಹಾಕಿದ ಭಾರತೀಯ ಹಾಕಿ ತಂಡ! Viral ಆಯ್ತು Video...

ಭಾರತೀಯ ಹಾಕಿ ತಂಡ ಹಿಂದಿ ಹಾಡೊಂದನ್ನು ಹಾಡುತ್ತಾ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Updated: Jun 24, 2019 , 03:23 PM IST
'ಸುನೋ ಗೌರ್ ಸೆ ದುನಿಯಾವಾಲೋ' ಹಾಡಿಗೆ ಹೆಜ್ಜೆ ಹಾಕಿದ ಭಾರತೀಯ ಹಾಕಿ ತಂಡ! Viral ಆಯ್ತು Video...

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಎಲ್ಲರ ಬಾಯಲ್ಲೂ ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ಗೆಲುವಿನ ಬಗ್ಗೆಯೇ ಮಾತು.. ಏತನ್ಮಧ್ಯೆ ಭಾರತೀಯ ಹಾಕಿ ತಂಡ ಹಿಂದಿ ಹಾಡೊಂದನ್ನು ಹಾಡುತ್ತಾ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ವೀಡಿಯೋವನ್ನು ಮೊದಲು ಹಾಕಿ ಇಂಡಿಯಾದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರತೀಯ ಹಾಕಿ ಮಹಿಳಾ ತಂಡದ ಆಟಗಾರ್ತಿಯರು ಈ ವೀಡಿಯೋದಲ್ಲಿ 'ಸುನೋ ಗೌರ್ ಸೆ ದುನಿಯಾ ವಾಲೋ' ಹಾಡಿಗೆ ಬಹಳ ಉತ್ಸಾಹದಿಂದ ಸ್ಟೆಪ್ ಹಾಕಿದ್ದಾರೆ.  ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಬಾರಿ ಜನ ಈ ವೀಡಿಯೋ ವೀಕ್ಷಿಸಿದ್ದಾರೆ. 

ಬಹುಶಃ ಈ ಸಂತೋಷಕ್ಕೆ ಕಾರಣವಾದರೂ ಏನಿರಬಹುದು ಅಂತಾ ಯೋಚಿಸ್ತಿದ್ರೆ ಅದಕ್ಕೂ ಇಲ್ಲಿದೆ ಉತ್ತರ! ಭಾರತದ ಮಹಿಳಾ ಹಾಕಿ ತಂಡ ಭಾನುವಾರ ಜಪಾನ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಎಫ್‌ಐಹೆಚ್ ಮಹಿಳಾ ಸರಣಿ ಫೈನಲ್ಸ್ ಪಂದ್ಯಾವಳಿಯನ್ನುತನ್ನದಾಗಿಸಿಕೊಂಡು ಭಾರತಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಹಾಡಿಗೆ ಸ್ಟೆಪ್ ಹಾಕುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಾಕಿ ತಂಡದ ಸಾಧನೆಗೆ ಅಭಿನಂದಿಸಿದ್ದಾರೆ.