ನವದೆಹಲಿ: ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಮನ್ ಓಜಾ (Naman Ojha) ಸೋಮವಾರ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನ ಎಲ್ಲಾ ಫಾರ್ಮ್ಯಾಟ್ ಗಳಿಂದ ನಿವೃತ್ತಿ ಘೋಷಿಸಿದಿದ್ದಾರೆ. 37 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಭಾರತಕ್ಕಾಗಿ ಟೆಸ್ಟ್, ಏಕದಿನ ಮತ್ತು ಟಿ 20 ಇಂಟರ್‌ನ್ಯಾಷನಲ್‌ನ ಮೂರು ಸ್ವರೂಪಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ನಮನ್ ಓಜಾ ಟೀಂ ಇಂಡಿಯಾ ವತಿಯಿಂದ ಒಂದು ಟೆಸ್ಟ್, ಒಂದು ಏಕದಿನ ಮತ್ತು ಎರಡು ಟಿ 20 ಪಂದ್ಯಗಳನ್ನು ಆಡಿದ್ದಾರೆ.
ಸುರೇಶ ರೈನಾ ನಾಯಕತ್ವದಲ್ಲಿ ಟೀಂ ಇಂಡಿಯಾ ಪಾದಾರ್ಪಣೆ
ನಮನ್ ಓಜಾ 2010 ರಲ್ಲಿ ಜಿಂಬಾಬ್ವೆ ವಿರುದ್ದ ನಡೆದ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿಯಲ್ಲಿ ಸುರೇಶ ರೈನಾ (Suresh Raina) ನಾಯಕತ್ತ್ವದಲ್ಲಿ ನಮನ್ ಒಝಾ ತಂಡಕ್ಕೆ ಸೇರ್ಪಡೆಯಾಗಿದ್ದರು. 2015 ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಮನ್ ಓಝಾ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ಮೊದಲ ಟೆಸ್ಟ್ ಆಡಿದ್ದಾರೆ.
ಫಸ್ಟ್ ಕ್ಲಾಸ್ ಕ್ರಿಕೆಟ್ ನಲ್ಲಿ 22 ಶತಕ
ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶದ ಪರವಾಗಿ ಕ್ರಿಕೆಟ್ ಆಡಿದ ನಮನ್ ಓಜಾ 146 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 41.67 ಸರಾಸರಿಯಲ್ಲಿ 9753 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 22 ಶತಕಗಳನ್ನು ಮತ್ತು 55 ಅರ್ಧಶತಕಗಳನ್ನು ಗಳಿಸಿದರು ಮತ್ತು ಔಟಾಗದೆ 219 ರನ್ ಅವರು ಗಳಿಸಿದ ಗರಿಷ್ಠ ಮೊತ್ತ.
ಇದನ್ನೂ ಓದಿ- ಅಂತಾರಾಷ್ಟ್ರೀಯ Cricketಗೆ Mahendra Singh Dhoni ವಿದಾಯ
ಇದಲ್ಲದೆ 113 ಐಪಿಎಲ್ ಪಂದ್ಯಗಳು ಸೇರಿದಂತೆ 143 ಲಿಸ್ಟ್ ಎ ಮತ್ತು 182 ಟಿ 20 ಪಂದ್ಯಗಳನ್ನು ಓಝಾ ಆಡಿದ್ದಾರೆ. ಐಪಿಎಲ್‌ನಲ್ಲಿ ದೆಹಲಿ ಡೇರ್‌ಡೆವಿಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದರು.
ಇದನ್ನೂ ಓದಿ- ಧೋನಿ ಬೆನ್ನಲ್ಲೇ ಸುರೇಶ್ ರೈನಾ ಕೂಡ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ
ತಮ್ಮ ನಿವೃತ್ತಿಯ ಕುರಿತು ಹೇಳಿರುವ ನಮನ್ ಓಝಾ, 'ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ 20 ವರ್ಷಗಳ ಕಳೆದ ನಂತರ ಮತ್ತು ಅದಕ್ಕೂ ಮೊದಲು ಕಿರಿಯ ವರ್ಗದಲ್ಲಿ ಹಲವು ವರ್ಷಗಳು ಕಳೆದ ನಂತರ, ಇದೀಗ ಜೀವನದಲ್ಲಿ ಮುಂದಕ್ಕೆ ಸಾಗುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇದು ಒಂದು ದೊಡ್ಡ ಪ್ರಯಾಣ ಮತ್ತು ನನ್ನ ಜೀವನದ ಅತ್ಯುತ್ತಮ ಕ್ಷಣ. ದೇಶಕ್ಕಾಗಿ ಆಡುವ ನನ್ನ ಕನಸನ್ನು ಈಡೇರಿಸುವಲ್ಲಿ ನನಗೆ ಬೆಂಬಲ ನೀಡಿದ ನನ್ನ ತರಬೇತುದಾರ, ಫಿಸಿಯೋ , ಆಯ್ಕೆ ಮಂಡಳಿ, ನಾಯಕ, ತಂಡದ ಆಟಗಾರರು, ನನ್ನ ಕುಟುಂಬ, ಹಿತೈಷಿಗಳು, ಮಧ್ಯಪ್ರದೇಶ ಕ್ರಿಕೆಟ್ ಸಂಘ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ನಾನು ಆಭಾರಿಯಾಗಿದ್ದೇನೆ' ಎಂದಿದ್ದಾರೆ.
ಇದನ್ನೂ ಓದಿ-ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಪಾರ್ಥಿವ್ ಪಟೇಲ್...ದಾದಾ ಬಗ್ಗೆ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.