ಗಾಯಗೊಂಡ ಕೆ.ಎಲ್.ರಾಹುಲ್ ಐಪಿಎಲ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಿಂದ ಹೊರಕ್ಕೆ

ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕ ಕೆಎಲ್ ರಾಹುಲ್,ಈ ವಾರದ ಆರಂಭದಲ್ಲಿ ತೊಡೆಯ ಗಾಯದಿಂದ ಐಪಿಎಲ್ ಮತ್ತು ಹಾಗೂ ಆಸ್ಟ್ರೇಲಿಯಾ ವಿರುದ್ಧ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿಯಲಿದ್ದಾರೆ.

Written by - Zee Kannada News Desk | Last Updated : May 5, 2023, 05:06 PM IST
  • ಆರನೇ ಐಪಿಎಲ್‌ಗಾಗಿ 500 ಪ್ಲಸ್ ರನ್ ಗಳಿಸುವ ರಾಹುಲ್ ಅವರ ಪ್ರಯತ್ನವನ್ನು ಕೊನೆಗೊಳಿಸಿತು
  • ಈ ಸಾಧನೆ ಮಾಡಿದ ಏಕೈಕ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
  • ಈ ಭಾರಿ ಅವರು 226 ರನ್ ಗಳಿಸಿದ್ದರು
ಗಾಯಗೊಂಡ ಕೆ.ಎಲ್.ರಾಹುಲ್ ಐಪಿಎಲ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಿಂದ ಹೊರಕ್ಕೆ title=
file photo

ಲಕ್ನೋ : ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕ ಕೆಎಲ್ ರಾಹುಲ್,ಈ ವಾರದ ಆರಂಭದಲ್ಲಿ ತೊಡೆಯ ಗಾಯದಿಂದ ಐಪಿಎಲ್ ಮತ್ತು ಹಾಗೂ ಆಸ್ಟ್ರೇಲಿಯಾ ವಿರುದ್ಧ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿಯಲಿದ್ದಾರೆ.ಅವರು ಚೇತರಿಸಿಕೊಳ್ಳಲು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ

ಸೋಮವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಎರಡನೇ ಓವರ್‌ನಲ್ಲಿ ಚೆಂಡನ್ನು ಬೆನ್ನಟ್ಟುತ್ತಿದ್ದಾಗ ರಾಹುಲ್ ಅವರ ಬಲಗಾಲಿನಲ್ಲಿ ಸ್ನಾಯುರಜ್ಜುಗೆ ಪೆಟ್ಟಾಗಿದೆ.ಸದ್ಯ ಸೂಪರ್ ಜೈಂಟ್ಸ್ 10 ಪಂದ್ಯಗಳಲ್ಲಿ ಐದು ಗೆಲುವುಗಳೊಂದಿಗೆ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.ಈಗ ತಂಡದ ನಾಯಕತ್ವವನ್ನು ಕೃನಾಲ್ ಪಾಂಡ್ಯ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ರಾಜಧಾನಿಯಲ್ಲಿ ಮೋದಿ ರೋಡ್ ಶೋ - 65ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಭಾರಿ ಪೆಟ್ಟು

ಈಗ ಗಾಯಗೊಂದಿದ್ದರಿಂದಾಗಿ ಸತತ ಆರನೇ ಐಪಿಎಲ್‌ಗಾಗಿ 500 ಪ್ಲಸ್ ರನ್ ಗಳಿಸುವ ರಾಹುಲ್ ಅವರ ಪ್ರಯತ್ನವನ್ನು ಕೊನೆಗೊಳಿಸಿತು.ಈ ಸಾಧನೆ ಮಾಡಿದ ಏಕೈಕ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಈ ಭಾರಿ ಅವರು 226 ರನ್ ಗಳಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News