ನವದೆಹಲಿ: 2019ರ ಇಂಡಿಯನ್ ಪ್ರೀಮಿಯರ್ ಲೀಗ್ನ ಆವೃತ್ತಿಯಲ್ಲಿ ಭಾರತದ ಉದಯೋನ್ಮುಖ ಪ್ಲೇಯರ್ಸ್ ಗಳಿಗೆ ಹೆಚ್ಚಿನ ಅವಕಾಶ ದೊರೆತಿದೆ. ಅಂತವರಲ್ಲೇ ಒಬ್ಬರು ಪ್ರಯಾಸ್ ರೇ ಬರ್ಮನ್. ಬರ್ಮನ್ ಬರೋಬ್ಬರಿ 1.5 ಕೋಟಿ ರೂ.ಗೆ ಹರಾಜು ಆಗುವ ಮೂಲಕ ದಾಖಲೆ ಬರೆದಿದ್ದಾರೆ.
20 ಲಕ್ಷ ರೂ. ಮೂಲಬೆಲೆ ಹೊಂದಿದ್ದ 16 ವರ್ಷದ ಲೆಗ್ಸ್ಪಿನ್ ಬೌಲರ್ ಪ್ರಯಾಸ್ರನ್ನು ಪಂಜಾಬ್ ಜತೆಗಿನ ಬಿಡ್ಡಿಂಗ್ ವಾರ್ನಲ್ಲಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) 1.50 ಕೋಟಿ ರೂಪಾಯಿಗೆ ಖರೀದಿ ಮಾಡಿತು. ಅತಿ ಚಿಕ್ಕ ವಯಸ್ಸಿನ ಕ್ರಿಕೆಟರ್ ಇಷ್ಟೊಂದು ಹಣಕ್ಕೆ ಸೇಲ್ ಆಗಿರುವುದು ಇದೇ ಮೊದಲ ಬಾರಿ ಎನ್ನುವುದು ಗಮನಾರ್ಹ.
ಬಂಗಾಳ ತಂಡದಲ್ಲಿದ್ದ ಈ ಕ್ರಿಕೆಟಿಗ ಈಗ ಕೊಹ್ಲಿ ನಾಯಕತ್ವದ ಆರ್ಸಿಬಿ ತಂಡದ ಪಾಲಾಗಿದ್ದಾರೆ. 2002ರಲ್ಲಿ ಜನಿಸಿರುವ ಪ್ರಯಾಸ್ ರೇ ಬರ್ಮನ್ ಪ್ರಯಾಸ್ ಬೌಲರ್ ಮಾತ್ರವಲ್ಲದೇ ಉತ್ತಮ ಆಲ್‍ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್ಮನ್. ಇದುವರೆಗೂ ಆಡಿರುವ 9 ಲಿಸ್ಟ್ ಎ ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.
ಬೌಲಿಂಗ್ನಲ್ಲಿ ಸ್ಪಿನ್ ಮಾತ್ರಿಂಕರಾದ ಅನಿಲ್ ಕುಂಬ್ಳೆ ಹಾಗೂ ಶೇನ್ ವಾರ್ನ್ ಅವರನ್ನ ಅನುಕರಣೆ ಮಾಡುವ ಈತನ ನೆಚ್ಚಿನ ಕ್ರಿಕೆಟರ್ ಮಾತ್ರ ವಿರಾಟ್ ಕೊಹ್ಲಿ. 'ಕೊಹ್ಲಿ ಜತೆ ಸೆಲ್ಪಿ ತೆಗೆದುಕೊಳ್ಳಬೇಕು ಎಂದು ನಾನು ಸಾಕಷ್ಟು ಪ್ರಯತ್ನಿಸಿದ್ದೆ. ಇದು ನನ್ನ ಕನಸಾಗಿತ್ತು. ಸಾಕಷ್ಟು ಪ್ರಯತ್ನ ಪಟ್ಟರೂ ಇದರಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ, ಈಗ ಅವರೊಂದಿಗೆ ನಾನು ಡ್ರೆಸಿಂಗ್ ರೂಮ್ನ್ನು ಹಂಚಿಕೊಳ್ಳಲಿದ್ದೇನೆ ಎನ್ನುವ ಸಂಗತಿಯನ್ನೇ ನಂಬಲಾಗುತ್ತಿಲ್ಲ. ಕೊಹ್ಲಿ, ವಿಲಿಯುರ್ಸ್ರಂಥ ದಿಗ್ಗಜ ಆಟಗಾರರೊಂದಿಗೆ ಅಭ್ಯಾಸ ಹಾಗೂ ಚರ್ಚೆ ಮಾಡುವ ಕಾರಣ ಕಲಿಕೆಗೆ ಇದು ಬಹುದೊಡ್ಡ ಅವಕಾಶ’ ಎಂದು ಪ್ರಯಾಸ್ ಹೇಳಿಕೊಂಡಿದ್ದಾರೆ.
ಸಂಗೀತ ಪ್ರೇಮಿಗಳಿಗೆ ಬರ್ಮನ್ ಉಪನಾಮ ಹೊಸದೇನಲ್ಲ. ಆದರೆ ಭಾರತೀಯ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಈ ಉಪನಾಮದ ಆಟಗಾರ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಬರ್ಮನ್ ಮೇಲೆ ಬಂಗಾಳದ ಪರಂಪರೆಯನ್ನು ಹೆಚ್ಚಿಸುವ ಒತ್ತಡ ಇದ್ದೆ ಇರುತ್ತದೆ. ಭಾರತದ ಕ್ರಿಕೆಟ್ ನಲ್ಲಿ ಸೌರವ್ ಗಂಗೂಲಿಯ ಬಳಿಕ ಬಂಗಾಳದಿಂದ ಬಂದ ದೊಡ್ಡ ಆಟಗಾರರ ಸಂಖ್ಯೆ ಅತಿ ವಿರಳ.
ಅತಿ ಕಡಿಮೆ ವಯಸ್ಸಿನಲ್ಲಿ ಐಪಿಎಲ್ ಆಡುತ್ತಿರುವವರ ಬಗ್ಗೆ ಮಾತನಾಡುವುದಾದರೆ 2018 ರಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಆಫ್ಘಾನಿಸ್ತಾನದ ಆಫ್ ಸ್ಪಿನ್ನರ್ ಮುಶೀರ್-ಉರ್-ರೆಹಮಾನ್ (ಮುಜೀಬ್ ಜಾದರ್) 17 ವರ್ಷ 11 ದಿನ ವಯಸ್ಸಿನ ಅತಿ ಕಿರಿಯ ಆಟಗಾರ ಮೊದಲ ಬಾರಿಗೆ ಆಟವಾಡಿದರು. ಭಾರತದ ಸರ್ಫರಾಜ್ ಖಾನ್ 2015 ರಲ್ಲಿ 17 ವರ್ಷ ಮತ್ತು 177 ದಿನಗಳಲ್ಲಿ ಐಪಿಎಲ್ ನಲ್ಲಿ ಚೊಚ್ಚಲ ಪ್ರವೇಶ ಮಾಡಿದ್ದರು.
ಪ್ರಯಾಸ್ ರೇ ಬರ್ಮನ್ ಅವರಂತೆ ಪ್ರಭು ಸಿಮ್ರಾನ್ ಸಿಂಗ್ ಕೂಡಾ ಕಿರಿಯ ಮಿಲೇನಿಯರ್ ಕ್ರಿಕೆಟಿಗರು. ಪಂಜಾಬ್ 18 ವರ್ಷ ವಯಸ್ಸಿನ ಪ್ರಭು ಸಿಮ್ರಾನ್ ಸಿಂಗ್ ಅವರನ್ನು 4.80 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ.