IPL 2020: ಆರ್‌ಸಿಬಿ ಸಿರಾಜ್, ಚಹಾಲ್ ಕೈಚಳಕಕ್ಕೆ ತತ್ತರಿಸಿದ ಕೊಲ್ಕತ್ತಾ ತಂಡ

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020 ರ 39 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಯನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು.

Last Updated : Oct 21, 2020, 11:46 PM IST
IPL 2020: ಆರ್‌ಸಿಬಿ ಸಿರಾಜ್, ಚಹಾಲ್ ಕೈಚಳಕಕ್ಕೆ ತತ್ತರಿಸಿದ ಕೊಲ್ಕತ್ತಾ ತಂಡ title=
Photo Courtesy: Twitter

ನವದೆಹಲಿ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020 ರ 39 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಯನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತಾ ತಂಡವು  20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 84 ರನ್ ಗಳ ಗುರಿಯನ್ನು ನೀಡಿತು. ನಾಯಕ ಮೋರ್ಗನ್ ಗಳಿಸಿದ 30 ರನ್ ಕೋಲ್ಕತ್ತಾ ಪರವಾಗಿ ಗರಿಷ್ಟ ವ್ಯಯಕ್ತಿಕ ಮೊತ್ತವಾಗಿತ್ತು.

IPL 2020: ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್ ಸಿರಾಜ್...!

ಬೆಂಗಳೂರಿನ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆದಿದ ಸಿರಾಜ್ ಮೊಹಮ್ಮದ್ (4-2-8-3) ಐಪಿಎಲ್ ಇತಿಹಾಸದಲ್ಲಿ ಸತತವಾಗಿ ಎರಡು ಓವರ್ ಗಳನ್ನು ಮೇಡನ್ ಮಾಡುವ ಮೂಲಕ ನೂತನ ದಾಖಲೆಯನ್ನು ಬರೆದರು.ಇನ್ನೊಂದೆಡೆಗೆ ಚಹಾಲ್ (4-0-15-2) ಕೂಡ ಮಾರಕ ದಾಳಿ ನಡೆಸಿ ಕೊಲ್ಕತ್ತಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಯುನಿವರ್ಸ್ ಬಾಸ್ ರನ್ನು ಔಟ್ ಮಾಡುವ ಮೊದಲು ಅವರ ಕಾಲುಗಳನ್ನು ಕಟ್ಟಿ ಹಾಕಬೇಕು- ಆರ್.ಅಶ್ವಿನ್

85 ರನ್ ಗಳ ಸಾಧಾರಣ ಗೆಲುವಿನ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡವು13.3 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿ ಜಯ ಸಾಧಿಸಿತು.

Trending News