IPL 2022 Mega Auction ನಲ್ಲಿ Unsold ಆಗ್ತಾರೆ ಈ 3 ಸ್ಟಾರ್ ಆಟಗಾರರು!

ಈ ಬಾರಿ ಒಟ್ಟು 590 ಆಟಗಾರರ ಭವಿಷ್ಯ ಈ 2 ದಿನಗಳಲ್ಲಿ ನಿರ್ಧಾರವಾಗಲಿದೆ. ಕೆಲವು ಕ್ರಿಕೆಟಿಗರು ಕನಿಷ್ಠ ಬೆಲೆ ಇಟ್ಟುಕೊಂಡು ತಪ್ಪು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 2 ಕೋಟಿ ರೂ. ಮೂಲ ಬೆಲೆಯಿಂದಾಗಿ ಮಾರಾಟವಾಗದ ಆ 3 ಸ್ಟಾರ್ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Feb 8, 2022, 09:38 AM IST
  • ಶೀಘ್ರದಲ್ಲಿ IPL 2022 ಮೆಗಾ ಹರಾಜು
  • ಹರಾಜು ಆಗಲ್ಲ ಈ 3 ಆಟಗಾರರು
  • ಯಾವುದೇ ತಂಡವು ಖರೀದಿಸಲ್ಲ
IPL 2022 Mega Auction ನಲ್ಲಿ Unsold ಆಗ್ತಾರೆ ಈ 3 ಸ್ಟಾರ್ ಆಟಗಾರರು! title=

ನವದೆಹಲಿ : ಐಪಿಎಲ್ 2022 ರ ಮೆಗಾ ಹರಾಜು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. ಈ ಬಾರಿ ಆಟಗಾರರ ಭವಿಷ್ಯ 10 ತಂಡಗಳ ಕೈಯಲ್ಲಿರಲಿದೆ. ಈ ಬಾರಿ ಒಟ್ಟು 590 ಆಟಗಾರರ ಭವಿಷ್ಯ ಈ 2 ದಿನಗಳಲ್ಲಿ ನಿರ್ಧಾರವಾಗಲಿದೆ. ಕೆಲವು ಕ್ರಿಕೆಟಿಗರು ಕನಿಷ್ಠ ಬೆಲೆ ಇಟ್ಟುಕೊಂಡು ತಪ್ಪು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 2 ಕೋಟಿ ರೂ. ಮೂಲ ಬೆಲೆಯಿಂದಾಗಿ ಮಾರಾಟವಾಗದ ಆ 3 ಸ್ಟಾರ್ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

1. ದಿನೇಶ್ ಕಾರ್ತಿಕ್

ಟೀಂ ಇಂಡಿಯಾ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್(Dinesh Karthik) ಅತ್ಯಂತ ಪ್ರತಿಭಾವಂತ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಐಪಿಎಲ್‌ನಲ್ಲಿ ಅವರ ಪ್ರದರ್ಶನವು ಸ್ಥಿರವಾಗಿ ಕುಸಿಯುತ್ತಿದೆ, ಅದಕ್ಕಾಗಿಯೇ ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ಈ ವರ್ಷ ಕೈ ಬಿಟ್ಟಿದೆ. ಟೂರ್ನಿಯ ಕೊನೆಯ 8 ಪಂದ್ಯಗಳಲ್ಲಿ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. 2021 ರ ಪ್ಲೇಆಫ್‌ಗಳ ಕುರಿತು ಹೇಳುವುದಾದರೆ, ಕಾರ್ತಿಕ್ ಎಲಿಮಿನೇಟರ್‌ನಲ್ಲಿ 10 ರನ್ ಗಳಿಸಿದರು, ಕ್ವಾಲಿಫೈಯರ್ -2 ನಲ್ಲಿ ಶೂನ್ಯ ಮತ್ತು ಫೈನಲ್‌ನಲ್ಲಿ ಕೇವಲ 9 ರನ್ ಗಳಿಸಿದರು. ಇವರ ಮೂಲ ಬೆಲೆ 2 ಕೋಟಿ ಅವರಿಗೆ ಸಮಸ್ಯೆಯಾಗಬಹುದು. ಕಾರ್ತಿಕ್ ಈ ಬಾರಿ ಮಾರಾಟವಾಗದೆ ಉಳಿದರೆ, ಅವರ ಕ್ರಿಕೆಟ್ ವೃತ್ತಿಜೀವನ ಮುಗಿದಂತೆ.

ಇದನ್ನೂ ಓದಿ : Mega Auction ನಲ್ಲಿ RCB ಖರೀದಿಸಲಿದೆ ಈ 3 ಆಟಗಾರರನ್ನು! ಈ ಆಟಗಾರನಿಗೆ ನಾಯಕನ ಜವಾಬ್ದಾರಿ!

2. ಸುರೇಶ್ ರೈನಾ

ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಅತ್ಯಂತ ನಿಷ್ಠಾವಂತ ಆಟಗಾರ ಸುರೇಶ್ ರೈನಾ(Suresh Raina) ಅವರನ್ನು ಈ ವರ್ಷ ತಂಡದಿಂದ ಕೈ ಬಿಟ್ಟಿದೆ. ಏಕೆಂದರೆ ಅವರ ಪ್ರದರ್ಶನದಲ್ಲಿ ಕಳಪೆ ಆಗಿ ಕಂಡು ಬರುತ್ತಿದೆ, ಆದರೆ ಈ ಆಟಗಾರ ಆಡಿದ 205 ಪಂದ್ಯಗಳಲ್ಲಿ 5528 ರನ್ ಗಳಿಸಿದ್ದಾರೆ, ರೈನಾಗೆ ವಯಸ್ಸಾದಂತೆ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸುಧಾರಿಸಲು ಸಮರ್ಥರಾಗಿದ್ದಾರೆ. 2020 ರಲ್ಲಿ, ಅವರು ವೈಯಕ್ತಿಕ ಕಾರಣಗಳಿಂದ ಐಪಿಎಲ್ ಅನ್ನು ತಪ್ಪಿಸಿಕೊಂಡರು ಮತ್ತು ಕಳೆದ ಸೀಸನ್ ನಲ್ಲಿ ಅವರು 12 ಪಂದ್ಯಗಳಲ್ಲಿ ಕೇವಲ 160 ರನ್ ಗಳಿಸಿದರು. ಹರಾಜು ಪೂಲ್‌ಗೆ ಸೇರುವಾಗ, ಅವರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ.ಗೆ ಇಟ್ಟುಕೊಂಡಿದ್ದಾರೆ. ಈಗ ಇಷ್ಟು ಬೆಲೆಗೆ ಖರೀದಿಸಲು ಸಾಧ್ಯವೇ ಅಥವಾ ಈ ವರ್ಷ ನಿರಾಸೆ ಅನುಭವಿಸುವರೇ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ : IPL Auction 2022 : ಈ ಸ್ಟಾರ್ ಆಟಗಾರರನ್ನು ಖರೀದಿಸಲು ಮುಗಿ ಬಿದ್ದ CSK ತಂಡ 

3. ಉಮೇಶ್ ಯಾದವ್

ಟೀಂ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್(Umesh Yadav) 121 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 119 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 2018 ರಲ್ಲಿ RCB ಗಾಗಿ ಆಡುವಾಗ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಐಪಿಎಲ್ ನಲ್ಲಿ ಆಡಿದ 18 ಪಂದ್ಯಗಳಲ್ಲಿ 20 ವಿಕೆಟ್ ತನ್ನದಾಗಿಸಿಕೊಂಡಿದೆ. ಆದರೂ ಇತ್ತೀಚಿನ ಅವರ ಪ್ರದರ್ಶನದಲ್ಲಿ ಕುಸಿತ ಕಂಡು ಬಂದಿದೆ. 2021 ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಉಮೇಶ್ ಅವರನ್ನು ಖರೀದಿಸಿತು ಆದರೆ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಅವಕಾಶ ನೀಡಲಿಲ್ಲ. ಹೀಗಾಗಿ ಈ ವರ್ಷ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ತನ್ನ ಮೂಲ ಬೆಲೆಯನ್ನು 2 ಕೋಟಿಗೆ ಇಟ್ಟುಕೊಂಡ ಕಾರಣ, ಯಾವುದೇ ಖರೀದಿದಾರರನ್ನು ಹುಡುಕುವುದು ಕಷ್ಟ ಎಂದು ತೋರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News