IPL 2022 schedule: ಐಪಿಎಲ್ ಟೂರ್ನಿ ನಡೆಯುವ ಸ್ಥಳ ನಿಗದಿ..!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜು ಮುಗಿದ ನಂತರ, ಕ್ರಿಕೆಟ್ ಅಭಿಮಾನಿಗಳು ಮುಂಬರುವ ಟಿ 20 ಲೀಗ್‌ನ ಸ್ಥಳ ಮತ್ತು ವೇಳಾಪಟ್ಟಿಯ ಬಗ್ಗೆ ಕಾತುರದಿಂದ ಕಾಯುತ್ತಿದ್ದರು.ಆದರೆ ಈಗ ಈ ಎಲ್ಲಾ ಕೂತುಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

Written by - Zee Kannada News Desk | Last Updated : Feb 23, 2022, 06:27 PM IST
  • ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜು ಮುಗಿದ ನಂತರ, ಕ್ರಿಕೆಟ್ ಅಭಿಮಾನಿಗಳು ಮುಂಬರುವ ಟಿ 20 ಲೀಗ್‌ನ ಸ್ಥಳ ಮತ್ತು ವೇಳಾಪಟ್ಟಿಯ ಬಗ್ಗೆ ಕಾತುರದಿಂದ ಕಾಯುತ್ತಿದ್ದರು.ಆದರೆ ಈಗ ಈ ಎಲ್ಲಾ ಕೂತುಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.
 IPL 2022 schedule: ಐಪಿಎಲ್ ಟೂರ್ನಿ ನಡೆಯುವ ಸ್ಥಳ ನಿಗದಿ..! title=

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜು ಮುಗಿದ ನಂತರ, ಕ್ರಿಕೆಟ್ ಅಭಿಮಾನಿಗಳು ಮುಂಬರುವ ಟಿ 20 ಲೀಗ್‌ನ ಸ್ಥಳ ಮತ್ತು ವೇಳಾಪಟ್ಟಿಯ ಬಗ್ಗೆ ಕಾತುರದಿಂದ ಕಾಯುತ್ತಿದ್ದರು.ಆದರೆ ಈಗ ಈ ಎಲ್ಲಾ ಕೂತುಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಇತ್ತೀಚಿನ ಬೆಳವಣಿಗೆಯ ಪ್ರಕಾರ ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ, ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂ ಮತ್ತು ಪುಣೆಯ ಎಂಸಿಎ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: "ಅಪ್ಪು ಹೋದಮೇಲೆ ಈ ಹಾಡು ಹಾಡಲು ನನಗೆ ಭಯವಾಗುತ್ತಿದೆ".. ಭಾವುಕರಾದ ಗಾಯಕ ವಿಜಯ್‌ ಪ್ರಕಾಶ್

ಮುಂಬೈನ ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ ಮತ್ತು ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ 55 ಪಂದ್ಯಗಳು ಮತ್ತು ಪುಣೆಯ ಎಂಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಇನ್ನೂ 15 ಪಂದ್ಯಗಳು ಐಪಿಎಲ್ 2022 ರ ಲೀಗ್ ಪಂದ್ಯಗಳ ವಿತರಣೆಯಾಗುವ ಸಾಧ್ಯತೆಯಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಇದನ್ನೂ ಓದಿ: ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ: ಎಚ್​ಡಿಕೆ ಆಕ್ರೋಶ

'ಇದಲ್ಲದೆ, ಎಲ್ಲಾ ತಂಡಗಳು ವಾಂಖೆಡೆ, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ತಲಾ ನಾಲ್ಕು ಪಂದ್ಯಗಳನ್ನು ಮತ್ತು ಬ್ರಬೋರ್ನ್ ಮತ್ತು ಪುಣೆಯಲ್ಲಿ ತಲಾ ಮೂರು ಪಂದ್ಯಗಳನ್ನು ಆಡಲು ಸಜ್ಜಾಗಿವೆ" ಎಂದು ವರದಿಯಲ್ಲಿ ತಿಳಿಸಲಾಗಿದೆ.ಅಲ್ಲದೆ, ಮೇ 29 ರಂದು ಟೂರ್ನಿಯ ಫೈನಲ್ ನಡೆಯಲಿದ್ದು, ಪ್ಲೇಆಫ್‌ನ ಸ್ಥಳಗಳನ್ನು ಇನ್ನೂ ನಿರ್ಧರಿಸಬೇಕಾಗಿದೆ.

ಇದನ್ನೂ ಓದಿ: 'ಎಲ್ಲಾ ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿರುವುದು ಗೌರವದ ಸಂಗತಿ'

ಮೇ 29 ರ ಭಾನುವಾರದಂದು ಪಂದ್ಯಾವಳಿಯು ಮುಕ್ತಾಯಗೊಳ್ಳಲಿದೆ.ಪ್ಲೇಆಫ್‌ಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ" ಎಂದು ಕ್ರಿಕ್‌ಬಜ್ ವರದಿ ಮಾಡಿದೆ.ಐಪಿಎಲ್ 2022 ರ ಆರಂಭದ ದಿನಾಂಕದ ವಿಚಾರವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪ್ರಸಾರಕರಾದ ಡಿಸ್ನಿ ಸ್ಟಾರ್ ಐಪಿಎಲ್‌ನ 15 ನೇ ಆವೃತ್ತಿಯ ನಿಖರವಾದ ಪ್ರಾರಂಭ ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

Trending News