IPL 2024 Viral Video: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024 ) ಆರಂಭದಿಂದಲೇ, ಹಾರ್ದಿಕ್ ಪಾಂಡ್ಯ ಇದ್ದಕ್ಕಿದ್ದಂತೆ ಅಪಾರ ಹೆಡ್ ಲೈನ್ಸ್ ಸೃಷ್ಟಿಗೆ ಕಾರಣವಾಗುತ್ತಿದ್ದಾರೆ. ವಾಸ್ತವದಲ್ಲಿ, ಹಾರ್ದಿಕ್ (Hardik Pandya) ಗುಜರಾತ್ ಟೈಟಾನ್ಸ್ (Gujarat Titians) ತಂಡದ ನಾಯಕತ್ವವನ್ನು ತೊರೆದು ಮುಂಬೈ ಇಂಡಿಯನ್ಸ್‌ಗೆ (Mumbai Indians) ಸೇರಿಕೊಂಡಿದ್ದಾರೆ ಮತ್ತು ನಂತರ ತಂಡದ ಮ್ಯಾನೇಜ್‌ಮೆಂಟ್ ರೋಹಿತ್ ಶರ್ಮಾ (Rohit Sharma) ಅವರನ್ನು ನಾಯಕ ಸ್ಥಾನದಿಂದ ಪದಚ್ಯುತಿಗೊಳಿಸಿ, ಆ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ವಹಿಸಿದೆ. (IPL 2024 News In Kannada)
ಈ ನಿರ್ಧಾರದಿಂದ ಮುಂಬೈ ಇಂಡಿಯನ್ಸ್ ಗೆ ಎಷ್ಟರ ಮಟ್ಟಿಗೆ ಲಾಭವಾಗಲಿದೆ ಎಂಬುದು ಕಾಲವೇ ನಿರ್ಧರಿಸಲಿದೆ.ಆದರೆ ನಾಯಕನಾದ ಬಳಿಕ ಹಾರ್ದಿಕ್ ಗೆ ಅಭಿಮಾನಿಗಳಿಂದ ಹೊಗಳಿಕೆ, ಪ್ರೀತಿಯ ಬದಲು ದ್ವೇಷವೇ ಸಿಗುತ್ತಿದೆ. ಗುಜರಾತ್ ಟೈಟಾನ್ಸ್ (GT vs MI) ವಿರುದ್ಧದ ಮೊದಲ ಪಂದ್ಯದಲ್ಲಿ ಘಟನೆಯೊಂದು ಸಂಭವಿಸಿದ್ದು, ನಂತರ ಹಾರ್ದಿಕ್ ಪಾಂಡ್ಯಾ ಅಪಾರ್ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ
ಹಾರ್ದಿಕ್ ಪಾಂಡ್ಯಾ ಅವರನ್ನು ಇಗ್ನೊರ್ ಮಾಡಿದ ನಾಯಿ
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ನಾಯಿಯೊಂದು (Dog Ignoring Hardik Pandya On Ground Video) ಮೈದಾನಕ್ಕೆ ನುಗ್ಗಿತ್ತು. ಹಾರ್ದಿಕ್ ಪಾಂಡ್ಯ ನಾಯಿಯನ್ನು ಹತ್ತಿರ ಕರೆದು ಮುದ್ದಿಸಬೇಕೆಂದುಕೊಂಡರೂ ನಾಯಿ ಅವರ ಹತ್ತಿರ ನಿಲ್ಲದೆ ಓಡಿ ಹೋಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ (IPL 2024 Viral Video). ಹಾರ್ದಿಕ್ ಅವರನ್ನು ನಾಯಕನನ್ನಾಗಿ ಮಾಡಿದ ನಂತರ ಅಭಿಮಾನಿಗಳು ಈಗಾಗಲೇ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ, ಇದೀಗ ಪ್ರಾಣಿಗಳು ಕೂಡ ಅವರಿಗೆ ಗೌರವ ನೀಡುತ್ತಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಕ್ರೀಡಾಂಗಣದಲ್ಲಿ ಮೊಳಗಿದ ರೋಹಿತ್ ರೋಹಿತ್ ಘೋಷಣೆಗಳು
ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿದೆ, ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಇನ್ನೂ ರೋಹಿತ್ ಶರ್ಮಾ ಅವರೇ ಇದ್ದಂತಿದೆ. ಇದೇ ಕಾರಣಕ್ಕೆ ಟಾಸ್‌ನಿಂದ ಪಂದ್ಯ ಮುಗಿಯುವವರೆಗೂ ಸ್ಟೇಡಿಯಂನಲ್ಲಿ ಕೇವಲ ರೋಹಿತ್ ರೋಹಿತ್ ಪ್ರತಿಧ್ವನಿ ಮಾತ್ರ ಕೇಳಿಬರುತ್ತಿತ್ತು. ರೋಹಿತ್-ರೋಹಿತ್ ಅವರ ಪ್ರತಿಧ್ವನಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಟ್ರೋಲಿಂಗ್ ನೋಡಿ, ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮತ್ತು ಸುರೇಶ್ ರೈನಾ ಕೂಡ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದಾರೆ.
Hardik Pandya was booed by the Ahmedabad crowd. pic.twitter.com/bGCl8BLz7B
— Mufaddal Vohra (@mufaddal_vohra) March 24, 2024
ಇದನ್ನೂ ಓದಿ-GT VS MI Fans Clash: ಮ್ಯಾಚ್ ಮುಕ್ತಾಯದ ಬಳಿಕ ಮಾರಾಮಾರಿಗಿಳಿದ ಮುಂಬೈ-ಗುಜರಾತ್ ತಂಡಗಳ ಅಭಿಮಾನಿಗಳು Watch Video
ಈ ಕುರಿತು ಜಿಯೋ ಸಿನಿಮಾನಲ್ಲಿ ತಮ್ಮ ಪ್ರತಿಕ್ರೆ ನೀಡಿದ ಕೆವಿನ್ ಫೀಟರ್ಸನ್ (Kevin Peterson), 'ಹಾರ್ದಿಕ್ ಗೆ ಆಗುತ್ತಿರುವಷ್ಟು ಟ್ರೋಲಿಂಗ್ ಬೇರೆಯವರಿಗೆ ಆಗುವುದು ನಾನು ನನ್ನ ಜೀವಮಾನದಲ್ಲಿಯೇ ನೋಡಿಲ್ಲ. ಬಹುಶ ಇದಕ್ಕೆ ಅವರ ಇಗೋ ಕಾರಣವೇ?' ಎಂದು ಪ್ರಶ್ನಿಸಿದ್ದಾರೆ.
I have never seen any Indian player getting booed like they are booing Hardik Pandya here in Ahmedabad - Kevin Pietersen on JioCinema
This is what your ego does to you. #GTvMI pic.twitter.com/eRm8pouJ8l
— Ctrl C Ctrl Memes (@Ctrlmemes_) March 24, 2024
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುರೇಶ್ ರೈನಾ (Suresh Raina) ಕೂಡ 'ರೋಹಿತ್ ಪರ ಘೋಷಣೆಗಳು ಸಹಜ ಎಂದು ಹೇಳಿದ್ದಾರೆ. ಇಂದು ಹಾರ್ದಿಕ್ ಏನೇ ಇದ್ದರೂ ಅದಕ್ಕೆ ರೂಹಿತ್ ಮತ್ತು ಮುಂಬೈ ಇಂಡಿಯನ್ಸ್ ಕಾರಣ' ಎಂದಿದ್ದಾರೆ.
Suresh Raina said, "Whatever Hardik Pandya is today due to captain Rohit Sharma and MI". (Jio Cinema) pic.twitter.com/W079eN45Xo
— Vishal. (@SPORTYVISHAL) March 24, 2024
ಹಾರ್ದಿಕ್ ಫ್ಲಾಪ್ ಬುಮ್ರಾ ಹೀಟ್
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಈ ವೇಳೆ ಓರ್ವ ಬೌಲರ್ ಆಗಿ ಹಾರ್ದಿಕ್ ಪ್ರದರ್ಶನ ಉತ್ತಮವಾಗಿರಲಿಲ್ಲ. ಅವರು 3 ಓವರ್‌ಗಳಲ್ಲಿ ವಿಕೆಟ್ ಇಲ್ಲದೆ 30 ರನ್ ನೀಡಿದ್ದಾರೆ. ಜಸ್ಪ್ರೀತ್ ಬುಮ್ರಾ ಉತ್ತಮ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ 14 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಬುಮ್ರಾ ಅವರ ಕಾರಣದಿಂದಾಗಿ ಮುಂಬೈ, ಗುಜರಾತ್ ತಂಡವನ್ನು 168 ಕ್ಕೆ ನಿರ್ಬಂಧಿಸಲು ಸಾಧ್ಯವಾಯಿತು ಎಂಬುದು ಇಲ್ಲಿ ಉಲ್ಲೇಖನೀಯ.
ವೈರಲ್ ವಿಡಿಯೋ ಇಲ್ಲಿದೆ ನೋಡಿ-
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ