IPL 2024: RCB ಬೌಲರ್‌ನನ್ನು ಕಸಕ್ಕೆ ಹೋಲಿಸಿದ ಮುರಳಿ ಕಾರ್ತಿಕ್..!

Indian Premier League 2024: ಅನೇಕ RCB ಅಭಿಮಾನಿಗಳು ಸಹ ಮುರಳಿ ಕಾರ್ತಿಕ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಮ ಬೌಲಿಂಗ್‌ ಮಾಡಿದ ಆಟಗಾರನನ್ನು ನೀವು ಹೇಗೆ ಕಸಕ್ಕೆ ಹೋಲಿಸಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ. ​

Written by - Puttaraj K Alur | Last Updated : Mar 26, 2024, 09:12 PM IST
  • ಯಶ್‌ ದಯಾಳ್‌ ಬೌಲಿಂಗ್‌ ಹೊಗಳುವ ಭರದಲ್ಲಿ ನಾಲಿಗೆ ಹರಿಬಿಟ್ಟ ಮಾಜಿ ಕ್ರಿಕೆಟಿಗ
  • ʼಒಬ್ಬರ ಕಸ, ಮತ್ತೊಬ್ಬರ ನಿಧಿʼ ಎಂದು ವಿವಾದ ಮೈಮೇಲೆ ಎಳೆದುಕೊಂಡ ಮುರಳಿ ಕಾರ್ತಿಕ್‌
  • ಕಾಮೆಂಟೇಟರ್ ಮುರಳಿ ಕಾರ್ತಿಕ್‌ ಹೇಳಿಕೆಗೆ RCB ಅಭಿಮಾನಿಗಳ ಆಕ್ರೋಶ
IPL 2024: RCB ಬೌಲರ್‌ನನ್ನು ಕಸಕ್ಕೆ ಹೋಲಿಸಿದ ಮುರಳಿ ಕಾರ್ತಿಕ್..! title=
ಮುರಳಿ ಕಾರ್ತಿಕ್‌ ಹೇಳಿಕೆಗೆ RCB ಅಭಿಮಾನಿಗಳ ಆಕ್ರೋಶ!

Indian Premier League 2024: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB) ಬೌಲರ್‌ ಯಶ್‌ ದಯಾಳ್‌ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದ್ದರು. ಮೊದಲ 3 ಓವರ್‌ನಲ್ಲಿ ಕೇವಲ 10 ರನ್ ನೀಡಿದ್ದ ಅವರ ಬೌಲಿಂಗ್‌ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ RCB 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ರಸಕ್ತ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆಯಿತು. ಈ ಪಂದ್ಯದಲ್ಲಿ ಯಶ್‌ ದಯಾಳ್‌ ಒಟ್ಟು 4 ಓವರ್‌ ಬೌಲಿಂಗ್‌ ಮಾಡಿ ಕೇವಲ 23 ರನ್‌ ನೀಡಿ ಒಂದು ವಿಕೆಟ್‌ ಪಡೆದು ಮಿಂಚಿದ್ದರು. ಯಶ್‌ ದಯಾಳ್‌ ಬೌಲಿಂಗ್‌ಗೆ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್‌ ದಿಗ್ಗಜರು ಸಲಾಂ ಎಂದಿದ್ದಾರೆ. ಇದೇ ವೇಳೆ ಯಶ್‌ ದಯಾಳ್‌ ಬೌಲಿಂಗ್‌ ಹೊಳಗುವ ಭರದಲ್ಲಿ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್‌ ನಾಲಿಗೆ ಹರಿಬಿಟ್ಟಿದ್ದು, ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.  

ಇದನ್ನೂ ಓದಿ: Ravindra Jadeja: “ಬೇಗ ರೂಂಗೆ ಬಾ…” ರಿವಾಬಾ ಪೋಸ್ಟ್’ಗೆ ಜಡೇಜಾ ಕಾಮೆಂಟ್! ಪತಿ-ಪತ್ನಿ ಫನ್ನಿ ಟಾಕ್ ಫುಲ್ ವೈರಲ್

ಯಶ್ ದಯಾಳ್ ಅತ್ಯುತ್ತಮ ಬೌಲಿಂಗ್‌ ಬಗ್ಗೆ ಹೊಗಳುತ್ತಾ ಮಾತನಾಡಿದ ಮುರಳಿ ಕಾರ್ತಿಕ್, ʼಒಬ್ಬರ ಕಸ, ಮತ್ತೊಬ್ಬರ ನಿಧಿʼ (Someone's Trash is Someone's Treasure) ಅಂತಾ ಹೇಳಿದ್ದಾರೆ. ಅವರ ಈ ಹೇಳಿಕೆಗೆ RCB ಫ್ರಾಂಚೈಸಿಯ ಭಾಗವಾಗಿರುವ ಡ್ಯಾನಿಶ್‌ ಸೇಟ್‌ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. ಇದರ ನಂತರ RCB ಅಭಿಮಾನಿಗಳು ಸಹ ಮುರಳಿ ಕಾರ್ತಿಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಡ್ಯಾನಿಶ್‌ ಸೇಟ್‌, ʼಒಬ್ಬರ ಕಸವನ್ನು ಮತ್ತೊಬ್ಬರ ನಿಧಿʼ ಅಂತಾ ನೀವು ಹೇಗೆ ಹೇಳುತ್ತೀರಿ? ನೀವು ಈಗಷ್ಟೇ ಯಶ್ ದಯಾಳ್‌ರನ್ನು ಕಸ ಎಂದು ಹೇಳಿದಿರಿ. ಏನಿದು?ʼ ಅಂತಾ ಪ್ರಶ್ನಿಸಿದ್ದಾರೆ. 

ಅನೇಕ RCB ಅಭಿಮಾನಿಗಳು ಸಹ ಮುರಳಿ ಕಾರ್ತಿಕ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಮ ಬೌಲಿಂಗ್‌ ಮಾಡಿದ ಆಟಗಾರನನ್ನು ನೀವು ಹೇಗೆ ಕಸಕ್ಕೆ ಹೋಲಿಸಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ. ಅನೇಕರು ಕಾಮೆಂಟ್‌ ಮೇಲೆ ಕಾಮೆಂಟ್‌ ಮಾಡಿದ್ದು ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. 

ಇದನ್ನೂ ಓದಿ: Asia Cup 2024: ವನಿತಾ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಡೇಟ್ ಫಿಕ್ಸ್! ಜು.28ರಂದು ಫೈನಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News