ಈ ಸಲ ಕಪ್‌ RCB ಗೆನಾ..? ಶೇರ್ ಚಾಟ್ ನಲ್ಲಿ ನಡೆದ ಕ್ರೀಡಾ ಸಂವಾದಕ್ಕೆ ಭಾರೀ ಜನಸ್ಪಂದನೆ..!

ಮಾಸಿಕ 250 ಮಿಲಿಯನ್‌ಕ್ಕಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಶೇರ್‌ಚಾಟ್‌ ಸಾಮಾಜಿಕ ಮಾಧ್ಯಮ ಸಂಸ್ಥೆಯಲ್ಲಿ ಇಂದು ಆರ್‌ಸಿಬಿ ಮತ್ತು ಪಂಜಾಬ್‌ ತಂಡಗಳ ನಡುವಿನ ಪ್ರಮುಖ ಪಂದ್ಯದ ಬಗ್ಗೆ ವಿಶ್ಲೇಷಣೆ ನಡೆಸಲಾಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿ ಮುಖ್ಯಸ್ಥರಾದ ರವಿ ಎಸ್‌ ಗೌಡ, ಶಿಫ್ಟ್‌ ಮುಖ್ಯಸ್ಥರಾದ ಬಾಲರಾಜ್‌ ಡಿಕೆ, ಸ್ಪೋರ್ಟ್ಸ್‌ ಡೆಸ್ಕ್‌ನ ಮಲ್ಲಿಕಾರ್ಜುನ ಮತ್ತು ಪ್ರೇಮ್‌ ಭಾಗವಹಿಸಿದ್ದರು.

Written by - MALLIKARJUN PATIL | Edited by - Manjunath N | Last Updated : May 13, 2022, 08:59 PM IST
  • ಮೊದಲ ಪ್ರಯೋಗದಲ್ಲಿಯೇ ಯಶಸ್ಸು ಪಡೆದ ಜೀ ಕನ್ನಡ ನ್ಯೂಸ್‌ ವಾಹಿನಿ ಪ್ರತಿ ವಾರವೂ ನಿಮ್ಮನ್ನು ಪ್ರಮುಖ ವಿಚಾರ ಕುರಿತು ಎದುರುಗೊಳ್ಳಲಿದೆ.
ಈ ಸಲ ಕಪ್‌ RCB ಗೆನಾ..? ಶೇರ್ ಚಾಟ್ ನಲ್ಲಿ ನಡೆದ ಕ್ರೀಡಾ ಸಂವಾದಕ್ಕೆ ಭಾರೀ ಜನಸ್ಪಂದನೆ..!  title=

ಬೆಂಗಳೂರು: ಮಾಸಿಕ 250 ಮಿಲಿಯನ್‌ಕ್ಕಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಶೇರ್‌ಚಾಟ್‌ ಸಾಮಾಜಿಕ ಮಾಧ್ಯಮ ಸಂಸ್ಥೆಯಲ್ಲಿ ಇಂದು ಆರ್‌ಸಿಬಿ ಮತ್ತು ಪಂಜಾಬ್‌ ತಂಡಗಳ ನಡುವಿನ ಪ್ರಮುಖ ಪಂದ್ಯದ ಬಗ್ಗೆ ವಿಶ್ಲೇಷಣೆ ನಡೆಸಲಾಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿ ಮುಖ್ಯಸ್ಥರಾದ ರವಿ ಎಸ್‌ ಗೌಡ, ಶಿಫ್ಟ್‌ ಮುಖ್ಯಸ್ಥರಾದ ಬಾಲರಾಜ್‌ ಡಿಕೆ, ಸ್ಪೋರ್ಟ್ಸ್‌ ಡೆಸ್ಕ್‌ನ ಮಲ್ಲಿಕಾರ್ಜುನ ಮತ್ತು ಪ್ರೇಮ್‌ ಭಾಗವಹಿಸಿದ್ದರು.

ಇದನ್ನೂ ಓದಿ: Team India : ರೋಹಿತ್ ಗೆ ವಿಶ್ವಕಪ್ ಗೆಲ್ಲುವ ಟಿಪ್ಸ್ ನೀಡಿದ ಸುನಿಲ್ ಗವಾಸ್ಕರ್!

IPL ಹಂಗಾಮ, ಈ ಸಲ ಕಪ್‌ RCBಗೆನಾ..? ಎಂಬ ಶಿರ್ಷಿಕೆಯಡಿ ನಡೆದ ಸುಮಾರು 1 ಗಂಟೆಯ ಸಂವಾದದಲ್ಲಿ ಆರ್‌ಸಿಬಿ ತಂಡದ ಪ್ಲೇ ಆಫ್‌ ಹಾದಿಯ ಪ್ರಮುಖ ಅಂಶಗಳ ಬಗ್ಗೆ ಸಮಗ್ರವಾಗಿ ಚಿಂತನ ಮಂಥನ ನಡೆಸಲಾಯಿತು.ಪ್ರಥಮ ಬಾರಿಗೆ ಶೇರ್‌ಚಾಟ್‌ ಜೊತೆಗೂಡಿ ನಡೆಸಿದ ಈ ಕಾರ್ಯಕ್ರಮದಲ್ಲಿ 7100 ಕ್ಕೂ ಹೆಚ್ಚು ಜನರು ಲೈವ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.ಮೊದಲ ಬಾರಿಗೆ ಜೀ ಕನ್ನಡ ನ್ಯೂಸ್‌ ನಡೆಸಿದ ಈ ಕ್ರೀಡಾ ಸಂವಾದ ತುಂಬಾ ಯಶಸ್ವಿಯಾಗಿ ನಡೆದಿದ್ದು ಸಾಕಷ್ಟು ಪ್ರಶಂಸೆ ಪಡೆಯಿತು. ಜೀ ಕನ್ನಡ ಸಿಬ್ಬಂದಿ ಇಂದಿನ ಪಂದ್ಯದ ಬಗ್ಗೆ ವಿಶ್ಲೇಷಣೆ ಮಾಡಿದ ರೀತಿಯು ಶೇರ್‌ಚಾಟ್‌ ಬಳಕೆದಾರರಿಗೆ ಬಹಳ ಇಷ್ಟವಾಗಿದ್ದು ಸಾಕಷ್ಟು ಉತ್ತಮ ಕಮೆಂಟ್‌ ಕೂಡ ವ್ಯಕ್ತವಾಗಿವೆ.

No description available.

ಇದನ್ನೂ ಓದಿ: ದಕ್ಷಿಣದ ಈ ನಟಿಗಾಗಿ ಸಿನಿಮಾ ನಿರ್ಮಿಸಲಿದ್ದಾರೆ ಎಂ.ಎಸ್‌.ಧೋನಿ!

ಮೊದಲ ಪ್ರಯತ್ನದಲ್ಲಿಯೇ ಶೇರ್‌ಚಾಟ್‌ನಲ್ಲಿ ಜೀ ಕನ್ನಡ ನ್ಯೂಸ್‌ ಕ್ರೀಡೆ ಬಗ್ಗೆ ನೇರ ಹಾಗೂ ಪ್ರಮುಖ ಮಾಹಿತಿ ನೀಡಿದ್ದು ಶೇರ್‌ಚಾಟ್‌ ಬಳಕೆದಾರರಿಗೆ ಸಾಕಷ್ಟು ಹತ್ತಿರವಾಯಿತು.ನಿರಂತರ 1 ಗಂಟೆಯ ಸಂವಾದದಲ್ಲಿ 7100 ಕ್ಕೂ ಹೆಚ್ಚು ಜನರು ವಿಕ್ಷಣೆ ಮಾಡಿದ್ದು ಉತ್ತಮ ಸಂವಾದಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.ಆರ್‌ಸಿಬಿ ತಂಡದ ಬಲ ಹಾಗೂ ಬದಲಾವಣೆ ಮಾಡಿಕೊಳ್ಳಬೇಕಾದ ವಿಷಯಗಳು, ಸೋಲು ಗೆಲುವಿನ ಲೆಕ್ಕಾಚಾರ,ಇಂದಿನ ಪಂದ್ಯದಲ್ಲಿ ಯಾವೆಲ್ಲ ಆಟಗಾರರು ಪ್ರಮುಖ ಪಾತ್ರ ವಹಿಸಲಿದ್ದಾರೆ..? ಪಿಚ್‌ ರಿಪೋರ್ಟ್‌ ಹೇಗಿದೆ..? ಆರ್‌ಸಿಬಿ ತಂಡದ ಎದುರಾಳಿ ಆಟಗಾರರನ್ನ ಹೇಗೆ ಕಟ್ಟಿಹಾಕಬೇಕು ಎಂಬುದರ ಬಗ್ಗೆ ನುರಿತ ಸಿಬ್ಬಂದಿಯಿಂದ ಮಂಥನ ನಡೆಯಿತು.

ಇದನ್ನೂ ಓದಿ: IPL 2022: ಈ ಹಾದಿಯಿಂದ ಮಾತ್ರ ಆರ್‌ಸಿಬಿ ಪ್ಲೇ ಆಫ್ ತಲುಪಬಹುದು..!

ಮೊದಲ ಪ್ರಯೋಗದಲ್ಲಿಯೇ ಯಶಸ್ಸು ಪಡೆದ ಜೀ ಕನ್ನಡ ನ್ಯೂಸ್‌ ವಾಹಿನಿ ಪ್ರತಿ ವಾರವೂ ನಿಮ್ಮನ್ನು ಪ್ರಮುಖ ವಿಚಾರ ಕುರಿತು ಎದುರುಗೊಳ್ಳಲಿದೆ. ಆರ್‌ಸಿಬಿ ತಂಡದ ಮುಂದಿನ ಪಂದ್ಯ ಗುಜರಾತ್‌ ಟೈಟನ್ಸ್‌ ವಿರುದ್ಧ ಮೇ 19 ರಂದು ನಡೆಯಲಿದ್ದು ಅಂದು ಮತ್ತೆ ಈ ಸಂವಾದ ಕಾರ್ಯಕ್ರಮದಲ್ಲಿ ಜೀ ಕನ್ನಡ ನ್ಯೂಸ್‌ ಸಿಬ್ಬಂದಿ ಭಾಗಿಯಾಗಲಿದ್ದಾರೆ.. ದಯವಿಟ್ಟು ತಾವು ಕೂಡ ಶೇರ್‌ಚಾಟ್‌ನಲ್ಲಿ ಭಾಗಿಯಾಗಿ ಮನರಂಜನೆ ಪಡೆಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News