IPL: Sunrisers Hyderabad ತಂಡಕ್ಕೆ ಆಘಾತ, ಮುರಳೀಧರನ್ ಆಸ್ಪತ್ರೆಗೆ ದಾಖಲು

ಮುರಳೀಧರನ್ ಶ್ರೀಲಂಕಾ ಪರ 133 ಟೆಸ್ಟ್ ಮತ್ತು 350 ಏಕದಿನ ಪಂದ್ಯಗಳನ್ನು ಆಡಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ 800 ಮತ್ತು ಏಕದಿನ ಪಂದ್ಯಗಳಲ್ಲಿ 534 ವಿಕೆಟ್ ಪಡೆದಿದ್ದಾರೆ. ಅವರು 2011 ರಲ್ಲಿ ನಡೆದ ವಿಶ್ವಕಪ್ ನಂತರ ಕ್ರಿಕೆಟ್‌ನಿಂದ ನಿವೃತ್ತರಾದರು.

Written by - Yashaswini V | Last Updated : Apr 19, 2021, 09:15 AM IST
  • ಚೆನ್ನೈನಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿರುವ ಮುತ್ತಯ್ಯ ಮುರಳೀಧರನ್
  • ಮುರಳೀಧರನ್ ಹೃದಯ ಸಂಬಂಧಿತ ಸಮಸ್ಯೆಯಿಂದ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ
  • ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮುರುಳಿಧರನ್ ಅವರಿಗೆ ಸ್ಟೆಂಟ್ ಅಳವಡಿಸಲಾಗಿದೆ
IPL: Sunrisers Hyderabad ತಂಡಕ್ಕೆ ಆಘಾತ, ಮುರಳೀಧರನ್ ಆಸ್ಪತ್ರೆಗೆ ದಾಖಲು title=
Muttiah Muralitharan Hospitalized

ಚೆನ್ನೈ: ಶ್ರೀಲಂಕಾದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (Muttiah Muralitharan) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಮುರಳೀಧರನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಕ್ತ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದಾರೆ.

ಐಪಿಎಲ್ -14 ಗಾಗಿ ಪ್ರಸ್ತುತ ಚೆನ್ನೈನಲ್ಲಿ ನೆಲೆಸಿರುವ ಮುತ್ತಯ್ಯ ಮುರಳೀಧರನ್ (Muttiah Muralitharan) ಸನ್‌ರೈಸರ್ಸ್ ಹೈದರಾಬಾದ್‌ನ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ. 2021 ರ ಐಪಿಎಲ್ ಋತುವಿನ ಮೊದಲ ಹಂತದಲ್ಲಿ ಫ್ರ್ಯಾಂಚೈಸ್‌ನೊಂದಿಗೆ ಚೆನ್ನೈನಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್‌ನ ಬೌಲಿಂಗ್ ಸಲಹೆಗಾರ ಮುತ್ತಯ್ಯ ಮುರಳೀಧರನ್ (Muttiah Muralitharan) ಹೃದಯ ಸಂಬಂಧಿತ ಸಮಸ್ಯೆಯಿಂದ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ - Delhi vs Punjab: ದೆಹಲಿ ಕ್ಯಾಪಿಟಲ್ಸ್ ಗೆ ಗೆಲುವು ತಂದಿತ್ತ ಶಿಖರ್ ಧವನ್

ಇಎಸ್‌ಪಿಎನ್‌ಕ್ರಿನ್‌ಫೊ (ESPNCricinfo) ವರದಿಯ ಪ್ರಕಾರ,  ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮುರುಳಿಧರನ್ ಅವರಿಗೆ ಸ್ಟೆಂಟ್ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಮುರುಳಿಧರನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮತ್ತೆ ಸನ್‌ರೈಸರ್ಸ್‌ ಹೈದರಾಬಾದ್  (Sunrisers Hyderabad) ತಂಡಕ್ಕೆ ಸೇರುವ ನಿರೀಕ್ಷೆಯಿದೆ.

ಮುರಳೀಧರನ್ ಸನ್‌ರೈಸರ್ಸ್‌ನ ಬೌಲಿಂಗ್ ಕೋಚ್:
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1347 ವಿಕೆಟ್‌ಗಳನ್ನು ಗಳಿಸಿದ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಮುತ್ತಯ್ಯ ಮುರಳೀಧರನ್, ಈ ಐಪಿಎಲ್ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ - RCB vs KKR:ಅಬ್ಬರಿಸಿದ ಎಬಿಡಿ, ಮ್ಯಾಕ್ಸ್ ವೆಲ್, ಆರ್‌ಸಿಬಿಗೆ 38 ರನ್ ಗಳ ಗೆಲುವು

ಮುರಳೀಧರನ್ ಅವರ ದಾಖಲೆಗಳು :
ಮುರಳೀಧರನ್ ಶ್ರೀಲಂಕಾ ಪರ 133 ಟೆಸ್ಟ್ ಮತ್ತು 350 ಏಕದಿನ ಪಂದ್ಯಗಳನ್ನು ಆಡಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ 800 ಮತ್ತು ಏಕದಿನ ಪಂದ್ಯಗಳಲ್ಲಿ 534 ವಿಕೆಟ್ ಪಡೆದಿದ್ದಾರೆ. ಅವರು 2011 ರಲ್ಲಿ ನಡೆದ ವಿಶ್ವಕಪ್ ನಂತರ ಕ್ರಿಕೆಟ್‌ನಿಂದ ನಿವೃತ್ತರಾದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News