RCB in IPL and WPL: ಇಂಡಿಯನ್ ಪ್ರೀಮಿಯರ್ ಲೀಗ್ ಅತ್ಯಂತ ಹೆಚ್ಚು ವೀಕ್ಷಣೆ ಪಡೆಯುವ ಕ್ರಿಕೆಟ್ ಸ್ವರೂಪಗಳಲ್ಲಿ ಒಂದು. ಸಾಮಾನ್ಯವಾಗಿ 8 ತಂಡಗಳಲ್ಲಿ ಆಡುತ್ತಿದ್ದ ಐಪಿಎಲ್ ಲೀಗ್, 2022ರಿಂದ 10 ತಂಡಗಳೊಂದಿಗೆ ಅಖಾಡಕ್ಕಿಳಿದಿದೆ. ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ಲಕ್ನೋ ಸೂಪರ್ ಜಾಯಿಂಟ್ಸ್ ಹೊಸತಾಗಿ ಸೇರ್ಪಡೆಗೊಂಡ ತಂಡ. ಆದರೆ ಸೇರ್ಪಡೆಗೊಂಡ ಹೊಸತರಲ್ಲೇ ಗುಜರಾತ್ ಟೈಟಾನ್ಸ್ ಟ್ರೋಫಿ ಎತ್ತಿಹಿಡಿದಿತ್ತು. ಆದರೆ ಐಪಿಎಲ್ 2008ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲ.
ಫೈನಲ್’ವರೆಗೆ ಎಂಟ್ರಿಕೊಟ್ಟಿದ್ದರೂ ಸಹ ಟ್ರೋಫಿಗೆ ಮುತ್ತಿಡಲು ಕಷ್ಟಪಡುತ್ತಿದೆ ಆರ್ ಸಿ ಬಿ. ಇನ್ನೊಂದೆಡೆ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿಯೂ ಸಹ ಸ್ಮೃತಿ ಮಂಧಾನ ನಾಯಕತ್ವದ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲುಗಳನ್ನು ಕಂಡು ಟೂರ್ನಿಯಿಂದಲೇ ಗೇಟ್ ಪಾಸ್ ಪಡೆಯುವ ಹಂತಕ್ಕೆ ಬಂದು ತಲುಪಿದೆ.
ಇದನ್ನೂ ಓದಿ: Virat Kohli: 40 ತಿಂಗಳ ಬಳಿಕ ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ ಬಂತು ಈ ವಿಶೇಷ ಕ್ಷಣ…! ಏನದು ಗೊತ್ತಾ?
ಇನ್ನು ಈ ಸೋಲಿಗೆ ಕಾರಣ ಏನು ಎಂಬುದೇ ತಿಳಿದುಬರುತ್ತಿಲ್ಲ. ಮಹಿಳಾ ಮತ್ತು ಪುರುಷ ತಂಡಗಳಲ್ಲಿ ದೇಶೀಯರ ಹೊರತು ವಿದೇಶಿಯರಿಗೇ ಹೆಚ್ಚು ಮಣೆ ಹಾಕಿತ್ತಿದ್ದಾರೆಯೇ ಎಂಬ ಮಾತುಗಳು, ಪ್ರಶ್ನೆಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಒಬ್ಬರು, ಇಬ್ಬರು ಆಟಗಾರರ ಮೇಲೆಯೇ ಇಡೀ ತಂಡ ಅವಲಂಬಿತವಾಗುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗೆ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಸಂದರ್ಭದಲ್ಲಿ ಸ್ಮತಿ ಮಂಧಾನ ಮೇಲೆಯೇ ಅತೀ ಹೆಚ್ಚು ಹಣ ವ್ಯಯಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿ ಮಾಡಿತ್ತು. ಆದರೆ ಪಂದ್ಯಾವಳಿಯಲ್ಲಿ ಕೊಂಚವೂ ಉತ್ತಮ ಪ್ರದರ್ಶನವನ್ನು ಅವರು ತೋರಲಿಲ್ಲ. ಅಂತೆಯೇ ಆರ್ ಸಿ ಬಿ ಪುರುಷ ತಂಡದಲ್ಲಿ ಕೆಲವೇ ದೇಶೀಯ ಆಟಗಾರರಿಗೆ ಮಣೆ ಹಾಕಲಾಗುತ್ತಿದೆ ಹೊರತು ಮಿಕ್ಕಂತೆ ಹೆಚ್ಚಿನ ಪ್ರಾಶಸ್ತ್ಯವನ್ನು ವಿದೇಶಿಯರಿಗೆ ನೀಡಲಾಗುತ್ತಿದೆ.
ಆರ್ ಸಿ ಬಿ ಪುರುಷರ ತಂಡ ಹೀಗಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ (ವಿ), ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್(ವಿ), ಹರ್ಷಲ್ ಪಟೇಲ್, ವನಿಂದು ಹಸರಂಗ(ವಿ), ದಿನೇಶ್ ಕಾರ್ತಿಕ್, ಜೋಶ್ ಹ್ಯಾಜಲ್ವುಡ್(ವಿ), ಶಹಬಾಜ್ ಅಹ್ಮದ್(ವಿ), ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೋಮ್ರೋರ್(ವಿ), ಫಿನ್ ಅಲೆನ್(ವಿ), ಶೆರ್ಫೇನ್ ರುದರ್ಫೋರ್ಡ್(ವಿ), ಜೇಸನ್ ಬೆಹ್ರೆನ್ಡಾರ್ಫ್(ವಿ), ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ(ವಿ), ರಜತ್ ಪಾಟಿದಾರ್, ಸಿದ್ಧಾರ್ಥ್ ಕೌಲ್, ಚಾಮ ಮಿಲಿಂದ್(ವಿ),
ಈ ತಂಡದಿಂದ ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಆಕಾಶ್ ದೀಪ್, ಸಿದ್ಧಾರ್ಥ್ ಕೌಲ್, ಚಾಮ ಮಿಲಿಂದ್, ಡೇವಿಡ್ ವೈಲಿ, ಲೂವ್ನಿತ್ ಸಿಸೋಡಿಯಾ ಅವರನ್ನು ರಿಲೀಸ್ ಮಾಡಲಾಗಿದೆ.
ಇನ್ನು ಮಹಿಳಾ ಆರ್ ಸಿ ಬಿ ತಂಡ ಮತ್ತು ಎಷ್ಟು ವೆಚ್ಚ ಮಾಡಿ ಖರೀದಿಸಿದ್ದಾರೆ ಎಂದು ನೋಡುವುದಾದರೆ, ಸ್ಮೃತಿ ಮಂಧಾನ (3.4 ಕೋಟಿ ರೂ.), ಸೋಫಿ ಡಿವೈನ್ (ವಿ) (50 ಲಕ್ಷ ರೂ.) ಎಲ್ಲಿಸ್ ಪೆರ್ರಿ(ವಿ) (ರೂ. 1.7 ಕೋಟಿ), ರೇಣುಕಾ ಸಿಂಗ್ (1.5 ಕೋಟಿ ರೂ.), ರಿಚಾ ಘೋಷ್ (1.9 ಕೋಟಿ ರೂ.), ಎರಿನ್ ಬರ್ನ್ಸ್(ವಿ) (30 ಲಕ್ಷ ರೂ.), ಆಶಾ ಶೋಭನಾ (10 ಲಕ್ಷ ರೂ.), ಹೀದರ್ ನೈಟ್(ವಿ) (40 ಲಕ್ಷ ರೂ.), ಡೇನ್ ವ್ಯಾನ್ ನೀಕರ್ಕ್(ವಿ) (30 ಲಕ್ಷ ರೂ.), ಪ್ರೀತಿ ಬೋಸ್ (30 ಲಕ್ಷ ರೂ.), ಪೂನಂ ಖೇಮ್ನಾರ್ (10 ಲಕ್ಷ ರೂ.), ಕೋಮಲ್ ಜಂಜಾದ್ (25 ಲಕ್ಷ ರೂ.), ಮೇಗನ್ ಶುಟ್(ವಿ) (40 ಲಕ್ಷ ರೂ.), ಸಹನಾ ಪವಾರ್ (10 ಲಕ್ಷ ರೂ.) ದಿಶಾ ಕಸತ್ (10 ಲಕ್ಷ ರೂ.), ಇಂದ್ರಾಣಿ ರಾಯ್ (10 ಲಕ್ಷ ರೂ.), ಶ್ರೇಯಾಂಕಾ ಪಾಟೀಲ್ (10 ಲಕ್ಷ ರೂ.), ಕನಿಕಾ ಅಹುಜಾ (35 ಲಕ್ಷ ರೂ.). ಇವರಲ್ಲಿ ಹೆಚ್ಚಿನ ಹಣವನ್ನು ಫ್ರಾಂಸೈಸಿ ವ್ಯಯಿಸಿದ್ದು ವಿದೇಶಿ ಆಟಗಾರರಿಗೆ. ಅಂದರೆ ಅಂದಾಜು ರೂ.11,900,000 ಹಣವನ್ನು ವಿದೇಶಿಯರನ್ನು ಖರೀದಿಸಲು ವ್ಯಯಿಸಿದೆ.
ಇದನ್ನೂ ಓದಿ: New Captain: ಟಿ-20 ತಂಡ ಪ್ರಕಟ: ಈ ಡ್ಯಾಶಿಂಗ್ ಆಲ್ ರೌಂಡರ್’ಗೆ ನಾಯಕತ್ವ ಪಟ್ಟ
ಇತರ ತಂಡಗಳನ್ನು ನೋಡಿದರೆ, ಅಲ್ಲಿ ದೇಶೀಯರಿಗೆ ಹೆಚ್ಚಿನ ಮಟ್ಟಿನಲ್ಲಿ ಮಣೆ ಹಾಕುವುದನ್ನು ನೋಡಬಹುದು. ಆದರೆ ಬೆಂಗಳೂರು ತಂಡದ ಸೋಲಿಗೆ ಇದುವೇ ಕಾರಣವಾಗುತ್ತಿದೆಯೇ? ಎಂಬುದು ಕೆಲ ಅಭಿಮಾನಿಗಳ ಪ್ರಶ್ನೆ. ಮುಂಬರುವ ಐಪಿಎಲ್ ಲೀಗ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.