IPLನ ಈ ತಂಡಕ್ಕೆ ಆಘಾತ! ಸ್ಟಾರ್ ಪ್ಲೇಯರ್-ಮ್ಯಾಚ್ ವಿನ್ನರ್ ಟೂರ್ನಿಯಿಂದಲೇ ಔಟ್

IPL 2023: ಮಂಡಿರಜ್ಜು ಗಾಯದಿಂದಾಗಿ ಸನ್‌ ರೈಸರ್ಸ್ ಹೈದರಾಬಾದ್ (SRH) ಆಲ್‌ ರೌಂಡರ್ ವಾಷಿಂಗ್ಟನ್ ಸುಂದರ್ IPL 2023ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಸ್ವತಃ ಸನ್‌ ರೈಸರ್ಸ್ ಹೈದರಾಬಾದ್ ತಂಡವೇ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

Written by - Bhavishya Shetty | Last Updated : Apr 27, 2023, 03:05 PM IST
    • ಸ್ಫೋಟಕ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್‌ನ ಸಹಾಯದಿಂದ ಪಂದ್ಯಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದನು.
    • ಸನ್‌ ರೈಸರ್ಸ್ ಹೈದರಾಬಾದ್ ಆಲ್‌ ರೌಂಡರ್ ವಾಷಿಂಗ್ಟನ್ ಸುಂದರ್ ಬಗ್ಗೆ.
    • ಇವರು ಮಂಡಿರಜ್ಜು ಗಾಯದಿಂದಾಗಿ IPL 2023ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
IPLನ ಈ ತಂಡಕ್ಕೆ ಆಘಾತ! ಸ್ಟಾರ್ ಪ್ಲೇಯರ್-ಮ್ಯಾಚ್ ವಿನ್ನರ್ ಟೂರ್ನಿಯಿಂದಲೇ ಔಟ್ title=
Washington Sundar

IPL 2023: IPL 2023 ರ ಮಧ್ಯೆ ಸನ್‌ ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ಸಂಬಂಧಿಸಿದ ಆಘಾತಕಾರಿ ಸುದ್ದಿಯೊಂದು ಹೊರಬೀಳುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ (SRH)ನ ಪಂದ್ಯ-ವಿಜೇತ ಆಟಗಾರನನ್ನು IPL 2023 ರ ಸಂಪೂರ್ಣ ಋತುವಿನಿಂದ ಹೊರಗಿಡಲಾಗಿದೆ. ಈ ಆಟಗಾರ ಗಾಯಗೊಂಡು ಸೀಸನ್‌ನಿಂದ ಹೊರಗುಳಿಯುತ್ತಿರುವುದು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ದೊಡ್ಡ ಹೊಡೆತವಾಗಿದೆ,

ಇದನ್ನೂ ಓದಿ: RCB vs KKR: ಕೊನೆಯ 5 ಓವರ್’ನಲ್ಲಿ 70 ರನ್ ಸಿಡಿಸಿದ KKR: ರೋಚಕ ಪಂದ್ಯದಲ್ಲಿ ಮಿಂಚಿದ್ದು ಈ ವಿದೇಶಿ ಕ್ರಿಕೆಟಿಗ!

ಏಕೆಂದರೆ ಈ ಕ್ರಿಕೆಟಿಗ ತನ್ನ ಸ್ಫೋಟಕ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್‌ನ ಸಹಾಯದಿಂದ ಪಂದ್ಯಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದನು. ನಾವಿಂದು ಮಾತನಾಡುತ್ತಿರುವುದು ಸನ್‌ ರೈಸರ್ಸ್ ಹೈದರಾಬಾದ್ (SRH) ಆಲ್‌ ರೌಂಡರ್ ವಾಷಿಂಗ್ಟನ್ ಸುಂದರ್ ಬಗ್ಗೆ. ಇವರು ಮಂಡಿರಜ್ಜು ಗಾಯದಿಂದಾಗಿ IPL 2023ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಸ್ವತಃ ಸನ್‌ ರೈಸರ್ಸ್ ಹೈದರಾಬಾದ್ ತಂಡವೇ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

ಸನ್‌ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಟ್ವೀಟ್ ಮಾಡಿ, “ಮಂಡಿರಜ್ಜು ಗಾಯದಿಂದಾಗಿ ವಾಷಿಂಗ್ಟನ್ ಸುಂದರ್ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ. ನೀವು ಬೇಗ ಫಿಟ್ ಆಗಲಿ ಎಂದು ಹಾರೈಸುತ್ತೇವೆ ವಾಶಿ” ಎಂದು ಬರೆದುಕೊಂಡಿದ್ದಾರೆ.

ಸನ್‌ ರೈಸರ್ಸ್ ಹೈದರಾಬಾದ್ ಆಲ್‌ ರೌಂಡರ್ ವಾಷಿಂಗ್ಟನ್ ಸುಂದರ್ ಈ ಬಾರಿಯ ಐಪಿಎಲ್ ಋತುವಿನಲ್ಲಿ ಬಾಲ್ ಮತ್ತು ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. ಆಡಿದ 7 ಪಂದ್ಯಗಳಲ್ಲಿ ಕೇವಲ 3 ವಿಕೆಟ್‌ ಗಳನ್ನು ಮಾತ್ರ ಕಬಳಿಸಲು ಶಕ್ತರಾಗಿದ್ದರು. ವಾಷಿಂಗ್ಟನ್ ಸುಂದರ್ ಈ ಐಪಿಎಲ್ 2023 ಸೀಸನ್‌’ನ 7 ಪಂದ್ಯಗಳಲ್ಲಿ ಒಟ್ಟು 17.4 ಓವರ್‌ಗಳನ್ನು ಬೌಲ್ ಮಾಡಿದ್ದು, ಒಟ್ಟು 146 ರನ್ ನೀಡಿದರು. ಜೊತೆಗೆ ಕೇವಲ 3 ವಿಕೆಟ್ ಗಳಿಸಲು ಸಾಧ್ಯವಾಗಿದೆ.

ಬ್ಯಾಟಿಂಗ್ ವಿಚಾರ ಮಾತನಾಡುವುದಾದರೆ, ವಾಷಿಂಗ್ಟನ್ ಸುಂದರ್ ಐಪಿಎಲ್ 2023 ರ 7 ಪಂದ್ಯಗಳಲ್ಲಿ ಒಟ್ಟು 60 ರನ್ ಗಳಿಸಿದ್ದಾರೆ. ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್‌ ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: RR vs CSK: ಅಗ್ರ ಬ್ಯಾಟರ್ಸ್ vs ವಿಶ್ವದರ್ಜೆಯ ಸ್ಪಿನ್ನರ್ಸ್: ಚೆನ್ನೈ-ರಾಜಸ್ಥಾನ ಹಣಾಹಣಿಯಲ್ಲಿ ಗೆಲ್ಲೋದು ಯಾರು ಗೊತ್ತಾ?

ವಾಷಿಂಗ್ಟನ್ ಸುಂದರ್ ಭಾರತ ಪರ 4 ಟೆಸ್ಟ್ ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದು, 265 ರನ್ ಕೂಡ ಗಳಿಸಿದ್ದಾರೆ. 16 ಏಕದಿನ ಪಂದ್ಯಗಳಲ್ಲಿ 16 ವಿಕೆಟ್ ಹಾಗೂ 35 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 29 ವಿಕೆಟ್ ಪಡೆದಿದ್ದಾರೆ. ಇನ್ನು ಏಕದಿನದಲ್ಲಿ 233 ರನ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 107 ರನ್ ಗಳಿಸಿದ್ದಾರೆ. 58 ಐಪಿಎಲ್ ಪಂದ್ಯಗಳಲ್ಲಿ ವಾಷಿಂಗ್ಟನ್ ಸುಂದರ್ 36 ವಿಕೆಟ್ ಹಾಗೂ 378 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News