IPL 2023: ಬೌಂಡರಿ, ಸಿಕ್ಸರ್’ಗಳ ಸುರಿಮಳೆ: ರಾಜಸ್ಥಾನದ “ರಾಯಲ್” ಆಟಕ್ಕೆ ತವರಿನಲ್ಲೇ ಸೋಲುಂಡ ಹೈದರಾಬಾದ್

SRH vs RR, IPL 2023: ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ತಂಡದ ವಿರುದ್ಧ ಹೈದರಾಬಾದ್ ಸೋಲು ಕಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಮಿಂಚಿದ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 203 ರನ್ ಕಲೆ ಹಾಕಿತು.

Written by - Bhavishya Shetty | Last Updated : Apr 2, 2023, 07:23 PM IST
    • ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿದೆ
    • ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಮಿಂಚಿದ ರಾಜಸ್ಥಾನ ತವರಿನಲ್ಲೇ ಹೈದರಾಬಾದ್ ಸೋಲು ಕಾಣುವಂತೆ ಮಾಡಿದೆ
    • ಬ್ಯಾಟಿಂಗ್’ನಲ್ಲಿ ಅಬ್ಬರಿಸಿದ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 203 ರನ್ ಕಲೆ ಹಾಕಿತು.
IPL 2023: ಬೌಂಡರಿ, ಸಿಕ್ಸರ್’ಗಳ ಸುರಿಮಳೆ: ರಾಜಸ್ಥಾನದ “ರಾಯಲ್” ಆಟಕ್ಕೆ ತವರಿನಲ್ಲೇ ಸೋಲುಂಡ ಹೈದರಾಬಾದ್ title=
SRH vs RR

SRH vs RR, IPL 2023: ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಮಿಂಚಿದ ರಾಜಸ್ಥಾನ ತವರಿನಲ್ಲೇ ಹೈದರಾಬಾದ್ ಸೋಲು ಕಾಣುವಂತೆ ಮಾಡಿದೆ.

ಇದನ್ನೂ ಓದಿ: IPL 2023ರ ಮೊದಲ ಪಂದ್ಯದಲ್ಲಿಯೇ ಧೋನಿ ನಾಯಕತ್ವದ CSK ಸೋಲಲು ಕನ್ನಡದ ಈ ಖ್ಯಾತ ನಟಿ ಕಾರಣ!

ಟಾಸ್ ಗೆದ್ದ ಭುವನೇಶ್ವರ್ ಕುಮಾರ್ ನಾಯಕತ್ವದ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಲು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ತಂಡವನ್ನು ಆಹ್ವಾನಿಸಿದರು. ಬ್ಯಾಟಿಂಗ್’ನಲ್ಲಿ ಅಬ್ಬರಿಸಿದ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 203 ರನ್ ಕಲೆ ಹಾಕಿತು. ಐಪಿಎಲ್ 2023ರಲ್ಲಿ 200ರ ಗಡಿ ದಾಟಿದ ಮೊದಲ ತಂಡವಾಗಿದೆ. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್ 20 ಓವರ್’ನಲ್ಲಿ 8 ವಿಕೆಟ್ ಕಳೆದುಕೊಂಡು 131 ರನ್ ಕಲೆ ಹಾಕುವ ಮೂಲಕ ಹೀನಾಯ ಸೋಲು ಕಂಡಿದೆ.

“ರಾಯಲ್” ಬ್ಯಾಟಿಂಗ್’ನಲ್ಲಿ ಮಿಂಚಿದ ಮೂವರು:

ರಾಜಸ್ಥಾನ ತಂಡದ ಪರ ಯಶಸ್ವಿ ಜೈಸ್ವಾಲ್ 54, ಜೋಸ್ ಬಟ್ಲರ್ 54, ಸಂಜು ಸ್ಯಾಮ್ಸನ್ 55 ರನ್’ಗಳ ಕೊಡುಗೆ ನೀಡಿದ್ದಾರೆ. 22 ಬೌಂಡರಿ, 8 ಸಿಕ್ಸರ್ ಒಳಗೊಂಡಂತೆ ರಾಜಸ್ಥಾನ ತಂಡ 203 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಇನ್ನುಳಿದಂತೆ ದೇವದತ್ ಪಡಿಕ್ಕಲ್ 2, ಆರ್ ಪರಾಗ್ 7, ಎಸ್ ಹೆಟ್ಮೇಯರ್ 22, ಆರ್ ಅಶ್ವಿನ್ 1 ರನ್ ಕಲೆ ಹಾಕಿದರು,

ಹೈದರಾಬಾದ್ ಆಟಗಾರನ ಅದ್ಭುತ ಕ್ಯಾಚ್:

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಯುವ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಸ್ಯಾಮ್ಸನ್ ಡೀಪ್-ಮಿಡ್ ವಿಕೆಟ್’ನ ಮೇಲೆ ಬಲವಾಗಿ ಹೊಡೆದಾಗ ಬಾಲ್ ಬೌಂಡರಿ ದಾಟುವತ್ತ ಮುನ್ನಡೆಯಿತು. ಆದರೆ ಅಲ್ಲಿಯೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಷೇಕ್ ಆ ಬಾಲ್’ನ್ನು ಕ್ಯಾಚ್ ಹಿಡಿದರು.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ವಿ.ಕೀ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್

ಇದನ್ನೂ ಓದಿ: IPL ಇತಿಹಾಸದಲ್ಲಿಯೇ ಬೆಸ್ಟ್ ಕ್ಯಾಚ್: ಬೌಂಡರಿ ಲೈನ್ ಬಳಿ ಈ ಕ್ರಿಕೆಟಿಗ ಮಾಡಿದ ಸಾಹಸಕ್ಕೆ ಇಡೀ ಸ್ಟೇಡಿಯಂ ಶಾಕ್!

ಸನ್‌ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್(ವಿ.ಕೀ), ವಾಷಿಂಗ್ಟನ್ ಸುಂದರ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್(ನಾ), ಉಮ್ರಾನ್ ಮಲಿಕ್, ಟಿ ನಟರಾಜನ್, ಫಜಲ್ಹಕ್ ಫಾರೂಕಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News