MS Dhoni: ಧೋನಿ ಬತ್ತಳಿಕೆಗೆ ಮತ್ತೊಂದು ಗರಿಮೆ: IPL ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ ಏಕೈಕ ಆಟಗಾರ ಮಾಹಿ

MS Dhoni, 250 Match in IPL: 2008 ರಲ್ಲಿ ಧೋನಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದಲಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್‌ ನ ಸದಸ್ಯರಾಗಿದ್ದರು. ಆದರೆ 2013 ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ CSK ಹೆಸರು ಕೇಳಿಬಂದ ಕಾರಣ ಎರಡು ವರ್ಷ ನಿಷೇಧಕ್ಕೆ ಒಳಪಟ್ಟಿತ್ತು. ಈ ಸಂದರ್ಭದಲ್ಲಿ ಪುಣೆ ಸೂಪರ್ ಜೈಂಟ್ಸ್‌ ತಂಡದ ಪರವಾಗಿ ಎರಡು ವರ್ಷಗಳ ಕಾಲ ಆಡಿದ್ದರು.

Written by - Bhavishya Shetty | Last Updated : May 28, 2023, 02:17 PM IST
    • ಎಂಎಸ್ ಧೋನಿ ತಮ್ಮ ಹೆಸರಿನಲ್ಲಿ ಮತ್ತೊಂದು ದೊಡ್ಡ ಸಾಧನೆ ಮಾಡಲು ಹೊರಟಿದ್ದಾರೆ
    • ಐಪಿಎಲ್ ಇತಿಹಾಸದಲ್ಲಿ 250 ಪಂದ್ಯಗಳನ್ನು ಆಡಿದ ಮೊದಲ ಆಟಗಾರನೆಂಬ ಕೀರ್ತಿಗೆ ಮಾಹಿ ಪಾತ್ರರಾಗಲಿದ್ದಾರೆ
    • 2008 ರಲ್ಲಿ ಧೋನಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು
MS Dhoni: ಧೋನಿ ಬತ್ತಳಿಕೆಗೆ ಮತ್ತೊಂದು ಗರಿಮೆ: IPL ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ ಏಕೈಕ ಆಟಗಾರ ಮಾಹಿ title=
ms dhoni

MS Dhoni, 250 Match in IPL: ಇಂದು ಸಂಜೆ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿರುವ ಐಪಿಎಲ್ 2023 ರ ಅಂತಿಮ ಪಂದ್ಯದಲ್ಲಿ, ನಿವೃತ್ತಿ ಊಹಾಪೋಹಗಳ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ತಮ್ಮ ಹೆಸರಿನಲ್ಲಿ ಮತ್ತೊಂದು ದೊಡ್ಡ ಸಾಧನೆ ಮಾಡಲು ಹೊರಟಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ವಿರುದ್ಧ ಕಣಕ್ಕಿಳಿಯುತ್ತಾ, ಐಪಿಎಲ್ ಇತಿಹಾಸದಲ್ಲಿ 250 ಪಂದ್ಯಗಳನ್ನು ಆಡಿದ ಮೊದಲ ಆಟಗಾರನೆಂಬ ಕೀರ್ತಿಗೆ ಮಾಹಿ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ: 34 ಕಿ.ಮೀ ಮೈಲೇಜ್ ನೀಡುವ, ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರಿದು.. ಕೇವಲ ರೂ.3 ಲಕ್ಷಕ್ಕೆ ಲಭ್ಯ

2008 ರಲ್ಲಿ ಧೋನಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದಲಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್‌ ನ ಸದಸ್ಯರಾಗಿದ್ದರು. ಆದರೆ 2013 ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ CSK ಹೆಸರು ಕೇಳಿಬಂದ ಕಾರಣ ಎರಡು ವರ್ಷ ನಿಷೇಧಕ್ಕೆ ಒಳಪಟ್ಟಿತ್ತು. ಈ ಸಂದರ್ಭದಲ್ಲಿ ಪುಣೆ ಸೂಪರ್ ಜೈಂಟ್ಸ್‌ ತಂಡದ ಪರವಾಗಿ ಎರಡು ವರ್ಷಗಳ ಕಾಲ ಆಡಿದ್ದರು. ನಿಷೇಧ ಮುಗಿದ ಕೂಡಲೇ ಚೆನ್ನೈ ತಂಡಕ್ಕೆ ವಾಪಸಾದ ಥಾಲಾ ಮತ್ತೆ ಹಳದಿ ಜೆರ್ಸಿಯನ್ನು ಮಿಂಚತೊಡಗಿದರು.

ಧೋನಿ ಆಡಿರುವ 249 ಪಂದ್ಯಗಳ ಪೈಕಿ 219 ಪಂದ್ಯಗಳು ಚೆನ್ನೈ ಸೂಪರ್ ಕಿಂಗ್ಸ್ ಪರ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ 30 ಪಂದ್ಯಗಳನ್ನು ಆಡಿದ್ದಾರೆ. ಧೋನಿ 2016 ಮತ್ತು 2017ರಲ್ಲಿ ಪುಣೆ ತಂಡದ ಸದಸ್ಯರಾಗಿದ್ದರು. ಇನ್ನು ಐಪಿಎಲ್‌ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಧೋನಿ ನಂತರ ರೋಹಿತ್ ಶರ್ಮಾ (243) ಎರಡನೇ ಸ್ಥಾನದಲ್ಲಿದ್ದಾರೆ.  ದಿನೇಶ್ ಕಾರ್ತಿಕ್ (242) ಮೂರನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (237) ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಅವನಲ್ಲಿ ಪ್ರತಿಭೆ ಇದೆ ಆದರೆ...” ಗಿಲ್ ಕುರಿತು ಆಘಾತಕಾರಿ ಹೇಳಿಕೆ ನೀಡಿದ ಟೀಂ ಇಂಡಿಯಾದ ಈ ದಿಗ್ಗಜ!

ಐಪಿಎಲ್ 2023 ರಲ್ಲಿ ಧೋನಿ ಸಣ್ಣ ಇನ್ನಿಂಗ್ಸ್ ಪಾತ್ರವನ್ನು ಉಳಿಸಿಕೊಂಡಿದ್ದಾರೆ. ಕೊನೆಯ ಕೆಲವು ಎಸೆತಗಳನ್ನು ಆಡಲು ಮಾತ್ರ ಮೈದಾನಕ್ಕೆ ಬರುತ್ತಿದ್ದಾರೆ. ಧೋನಿ 34.67 ರ ಸರಾಸರಿಯಲ್ಲಿ ಮತ್ತು 185.71 ರ ಸ್ಟ್ರೈಕ್ ರೇಟ್‌ ನಲ್ಲಿ ಒಟ್ಟು 104 ರನ್ ಗಳಿಸಿದ್ದಾರೆ. ಈ ಸೀಸನ್ ನಲ್ಲಿ ಆಡಿದ 15 ಪಂದ್ಯಗಳಲ್ಲಿ 8 ಬಾರಿ ಅಜೇಯರಾಗಿ ಉಳಿದಿದ್ದಾರೆ. ಇದರಲ್ಲಿ 3 ಬೌಂಡರಿ ಹಾಗೂ 10 ಸಿಕ್ಸರ್‌ಗಳು ಸೇರಿವೆ. ಅಜೇಯ 32* ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News