IPL 2023: ಅಂದು ಬೇಡವೇ ಬೇಡ ಎನ್ನುತ್ತಾ ಆಯ್ಕೆದಾರರು ದೂರವಿಟ್ಟ ಈ ಆಟಗಾರ ಇಂದು ವಿರಾಟ್ ದಾಖಲೆಯನ್ನೇ ಸರಿಗಟ್ಟಿದ..!

IPL 2023: ಈ ಬಾರಿಯ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಹಾಗೂ ಟೀಂ ಇಂಡಿಯಾದ ಒಂದು ಕಾಲದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ದೊಡ್ಡ ದಾಖಲೆಯನ್ನು ಸರಿಗಟ್ಟಿದ್ದಾರೆ.

Written by - Bhavishya Shetty | Last Updated : Apr 2, 2023, 07:53 PM IST
    • ಧವನ್ 29 ಎಸೆತಗಳಲ್ಲಿ 40 ರನ್ ಗಳಿಸಿ ವರುಣ್ ಚಕ್ರವರ್ತಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
    • ವಿರಾಟ್ ಕೊಹ್ಲಿ ಅವರ ದೊಡ್ಡ ದಾಖಲೆಯನ್ನು ಸರಿಗಟ್ಟಿದ್ದಾರೆ ಧವನ್
    • ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಅತ್ಯುತ್ತಮವಾಗಿದ್ದ ಕಾರಣ ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು
IPL 2023: ಅಂದು ಬೇಡವೇ ಬೇಡ ಎನ್ನುತ್ತಾ ಆಯ್ಕೆದಾರರು ದೂರವಿಟ್ಟ ಈ ಆಟಗಾರ ಇಂದು ವಿರಾಟ್ ದಾಖಲೆಯನ್ನೇ ಸರಿಗಟ್ಟಿದ..! title=
Shikhar Dhawan

IPL 2023: ಐಪಿಎಲ್‌ ನಲ್ಲಿ ಕಳೆದ ದಿನ ನಡೆದ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ, ಪಂಜಾಬ್ ತಂಡವು ಕೋಲ್ಕತ್ತಾವನ್ನು 7 ರನ್‌’ಗಳಿಂದ ಸೋಲಿಸುವ ಮೂಲಕ ಪಂದ್ಯಾವಳಿಯನ್ನು ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಪಂಜಾಬ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಅತ್ಯುತ್ತಮವಾಗಿದ್ದ ಕಾರಣ ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಒಂದು ಕಾಲದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಆಗಿದ್ದ ಕ್ರಿಕೆಟಿಗ, ವಿರಾಟ್ ಕೊಹ್ಲಿ ಅವರ ದೊಡ್ಡ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ: IPL ಇತಿಹಾಸದಲ್ಲಿಯೇ ಬೆಸ್ಟ್ ಕ್ಯಾಚ್: ಬೌಂಡರಿ ಲೈನ್ ಬಳಿ ಈ ಕ್ರಿಕೆಟಿಗ ಮಾಡಿದ ಸಾಹಸಕ್ಕೆ ಇಡೀ ಸ್ಟೇಡಿಯಂ ಶಾಕ್!

ಈ ಬಾರಿಯ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಹಾಗೂ ಟೀಂ ಇಂಡಿಯಾದ ಒಂದು ಕಾಲದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ದೊಡ್ಡ ದಾಖಲೆಯನ್ನು ಸರಿಗಟ್ಟಿದ್ದಾರೆ. ಬ್ಯಾಟಿಂಗ್ ಸಮಯದಲ್ಲಿ, ಶಿಖರ್ ಧವನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎರಡನೇ ವಿಕೆಟ್‌ಗೆ ಭಾನುಕಾ ರಾಜಪಕ್ಸೆ ಅವರೊಂದಿಗೆ 86 ರನ್ ಜೊತೆಯಾಟವನ್ನು ಹಂಚಿಕೊಂಡರು. ಇದರೊಂದಿಗೆ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್‌ ಗಳ ಜೊತೆಯಾಟದಲ್ಲಿ ಭಾಗಿಯಾದ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ಜೊತೆಯಲ್ಲಿ ಅವರು ಈಗ 94 ಬಾರಿ 50+ ರನ್‌ಗಳ ಜೊತೆಯಾಟದಲ್ಲಿದ್ದಾರೆ.

ಕಳಪೆ ದಾಖಲೆ ಕೂಡ ನಿರ್ಮಾಣ!

ಇನ್ನೊಂದೆಡೆ ಧವನ್ 29 ಎಸೆತಗಳಲ್ಲಿ 40 ರನ್ ಗಳಿಸಿ ವರುಣ್ ಚಕ್ರವರ್ತಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಧವನ್ 38ನೇ ಬಾರಿ ಕ್ಲೀನ್ ಬೌಲ್ಡ್ ಆಗಿದ್ದು, ಲೀಗ್ ನಲ್ಲಿ ಅತಿ ಹೆಚ್ಚು ಬಾರಿ ಕ್ಲೀನ್ ಬೌಲ್ಡ್ ಆದ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಧವನ್ 40ರಿಂದ 49 ರನ್ ಗಳಿಸಿ ಔಟಾದದ್ದು ಇದು 17ನೇ ಬಾರಿ. ಧವನ್ ಈಗ ಜಂಟಿಯಾಗಿ ರೋಹಿತ್ ಶರ್ಮಾ (17) ಅವರೊಂದಿಗೆ 40 ಮತ್ತು 49 ರನ್‌ಗಳ ನಡುವೆ ಅತಿ ಹೆಚ್ಚು ಬಾರಿ ಔಟಾದ ಬ್ಯಾಟ್ಸ್‌ಮನ್ ಆಗಿದ್ದಾರೆ.

ಇದನ್ನೂ ಓದಿ: IPL 2023: ಬೌಂಡರಿ, ಸಿಕ್ಸರ್’ಗಳ ಸುರಿಮಳೆ: ರಾಜಸ್ಥಾನದ “ರಾಯಲ್” ಆಟಕ್ಕೆ ತವರಿನಲ್ಲೇ ಸೋಲುಂಡ ಹೈದರಾಬಾದ್

ಕೋಲ್ಕತ್ತಾ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ ಈ ನಿರ್ಧಾರ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕೋಲ್ಕತ್ತಾದ ಮುಂದೆ 192 ರನ್‌’ಗಳ ದೊಡ್ಡ ಗುರಿಯನ್ನು ನೀಡಿತು. ಆದರೆ ಕೋಲ್ಕತ್ತಾ ತಂಡ 16 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆದಲ್ಲಿ 146 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಾದ ಬಳಿಕ ಮಳೆಯಿಂದಾಗಿ ಕೆಲಕಾಲ ಪಂದ್ಯ ಸ್ಥಗಿತಗೊಂಡಿದ್ದು, ಡಿಎಲ್ ಎಸ್ ನಿಯಮದಡಿ ಫಲಿತಾಂಶ ಹೊರಬಿದ್ದಿದೆ. ಈ ನಿಯಮದ ಪ್ರಕಾರ ಪಂಜಾಬ್ 7 ರನ್ ಗಳಿಂದ ಪಂದ್ಯ ಗೆದ್ದಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News